Politics

*ಯೋಗ-ಸಂಗೀತದ ಭಾರತೀಯರ ಜೀವನ ಶೈಲಿಯೇ ಅದ್ಭುತ: ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಬಣ್ಣನೆ*

ಪ್ರಗತಿವಾಹಿನಿ ಸುದ್ದಿ: ಯೋಗ- ಸಂಗೀತ ಸಹಿತ ಭಾರತೀಯರ ಜೀವನ ಶೈಲಿ, ಪದ್ಧತಿ ಅದ್ಭುತವಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.

ದೆಹಲಿಯಲ್ಲಿ ಇಂದು ಬೆಳಗ್ಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಮಾತನಾಡಿದ ಸಚಿವರು, ಭಾರತೀಯ ಕೌಟುಂಬಿಕ ಪದ್ಧತಿ, ಆಹಾರ ಪದ್ದತಿ ಮತ್ತು ವ್ಯಾಯಾಮ ಪದ್ಧತಿಗಳು ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿವೆ ಎಂದು ಪ್ರತಿಪಾದಿಸಿದರು

ಇತ್ತೀಚಿನ ದಿನಗಳಲ್ಲಿ ಭಾರತೀಯರು ಬದಲಾದ ಜೀವನ ಶೈಲಿಗೆ ಮಾರು ಹೋಗುತ್ತಿದ್ದರು. ಯೋಗಾಸನ, ಪ್ರಾಣಾಯಾಮ, ಸಂಗೀತ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿಗಳಿಂದ ದೂರಾಗುತ್ತಿದ್ದುದು ದೌರ್ಭಾಗ್ಯವೇ ಸರಿ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2014ರ ನಂತರ ಯೋಗದ ಮಹತ್ವವನ್ನು ಸಾರಿ, ಸಾದರಪಡಿದರು. ಈ ಮೂಲಕ ಭಾರತೀಯರಲ್ಲಿ ದೇಸಿ ಯೋಗ ಪದ್ಧತಿ, ಆಹಾರ ಪದ್ಧತಿ, ಸಂಗೀತ- ಸಂಪ್ರದಾಯಗಳನ್ನು ಮರು ಪ್ರತಿಷ್ಠಾಪಿಸುತ್ತಿದ್ದಾ ರೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

ಜಗತ್ತೇ ಅನುಸರಿಸ್ತಿದೆ: ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಘೋಷಿಸಿ, ಭಾರತೀಯರೆಲ್ಲ ಪಾಲಿಸುವಂತೆ ಪ್ರೇರೇಪಿಸಿದ್ದು, ಈಗ ಜಗತ್ತೇ ಮೋದಿ ಅವರ ಯೋಗ ಕಾರ್ಯ- ಕ್ರಮವನ್ನು ಅನುಸರಿಸುತ್ತಿದೆ. ವಿವಿಧ ರಾಷ್ಟ್ರಗಳು ಯೋಗ ಆಚರಣೆಯಲ್ಲಿ ತೊಡಗಿವೆ ಎಂದು ಜೋಶಿ ಹೇಳಿದರು.

ಜಮ್ಮು-ಕಾಶ್ಮೀರಿಗರ ಶಕ್ತಿ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಜಮ್ಮು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿಶೇಷತೆ ಮೆರೆದಿದ್ದಾರೆ. ಅಲ್ಲಿನವರಿಗೆ ಒಂದು ಶಕ್ತಿ, ಧೈರ್ಯದ ರೂಪದಲ್ಲಿ ಸಾಕಾರ ಮೂರ್ತಿಯಾಗಿ ಅವರೊಂದಿಗೆ ನಿಂತಿದ್ದಾರೆ ಎಂದು ಪ್ರಲ್ಹಾದ ಜೋಶಿ ಹೆಮ್ಮೆ ವ್ಯಕ್ತಪಡಿಸಿದರು.

ಉತ್ತಮ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ನಾವೆಲ್ಲರೂ ಪ್ರತಿದಿನ ಯೋಗಾಭ್ಯಾಸ ಮಾಡುವ ಪ್ರತಿಜ್ಞೆ ಮಾಡೋಣ ಎಂದು ಇದೇ ವೇಳೆ ಕರೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button