ಸಾಂಬ್ರಾ ಗ್ರಾಮದ ಅಭಿವೃದ್ಧಿ ಕುರಿತು ಚರ್ಚಿಸಿದ ಮೇಲ್ಮನೆ ಸದಸ್ಯ ಚನ್ನರಾಜ ಹಟ್ಟಿಹೊಳಿ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮ ಹಾಗೂ ಸುತ್ತಮುತ್ತಲಿನ ಸಮಗ್ರ ಅಭಿವೃದ್ಧಿ ಕುರಿತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಸ್ಥಳೀಯ ಮುಖಂಡರು, ಕಾರ್ಯಕರ್ತರ ಜೊತೆ ಸಮಾಲೋಚನಾ ಸಭೆ ನಡೆಸಿದರು.
ಬೆಳಗಾವಿ ಬೆಳೆಯುತ್ತಿರುವುದರಿಂದ ಅದಕ್ಕೆ ತಕ್ಕಂತೆ ಸಾಂಬ್ರಾ ಭಾಗ ಕೂಡ ಬೆಳವಣಿಗೆ ಹೊಂದಬೇಕಾಗಿದೆ. ಹಾಗಾಗಿ ಈಗಾಗಲೆ ಆಗಿರುವ ಅಭಿವೃದ್ಧಿಯ ಜೊತೆಗೆ ಇನ್ನಷ್ಟು ಯೋಜನೆಗಳನ್ನು ಜಾರಿಗೊಳಿಸುವ ಸಂಬಂಧ ಸ್ಥಳೀಯರೊಂದಿಗೆ ಚರ್ಚಿಸಲಾಯಿತು. ಗ್ರಾಮವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಬೇಕು. ಮುಂದೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಯೋಜನೆ ರೂಪಿಸಬೇಕು. ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಅಭಿವೃದ್ಧಿ ಯೋಜನೆ ತಯಾರಿಸಬೇಕಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಕ್ಷೇತ್ರದ ಶಾಸಕರೂ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಜೊತೆ ಚರ್ಚಿಸಲಾಗುವುದು ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು.
ಸಭೆಯಲ್ಲಿ ನಾಗೇಶ್ ದೇಸಾಯಿ, ಈರಪ್ಪ ಸುಳೇಭಾವಿ, ಬಸು ದೇಸಾಯಿ, ಲಕ್ಷ್ಮಣ ಸುಳೇಭಾವಿ, ಮಹೇಂದ್ರ ಗೋಟೆ, ಖತಾಲ್ ಮುಲ್ಲಾ, ಲಕ್ಷ್ಮಣ ಕಲ್ಲಪ್ಪಗೋಳ, ಮಹೇಶ್ ಕುಲಕರ್ಣಿ, ಖಯ್ಯೂಮ್ ಅತ್ತಾರ್, ಶ್ವೇತಾ ಬೊಮ್ಮನವಾಡಿ, ಶಾಂತಾ ದೇಸಾಯಿ, ಧನುಶ್ರೀ ಚೌಗಲೆ, ಸುಲೋಚನಾ ಜೋಗಾಣಿ, ಸಂಜು ಕಾಂಬಳೆ, ಗುರು ಅಷ್ಟೆಕರ್ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ