ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚೆಗೆ ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿತನಾದ ವಿಠಲ ಸದೆಪ್ಪಾ ಆರೇರ ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಅವನು ಬೈಕ್‌ಗಳ ಕದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ. ಆತನಿಂದ ಸುಮಾರು 6.00,000/- ರೂ ಬೆಲೆಯ ಒಟ್ಟು 7 ಬೈಕ್ ಗಳು (ಯಮಹಾ-1. ಸ್ಟೆಂಡರ್-2. ಸ್ಟೆಂಡರ್ ಪ್ರೋ-2. ಎಚ್‌ಎಫ್ ಡಿಲಕ್ಸ್-1, ಜುಪಿಟರ್-1) ವಶಕ್ಕೆ ಪಡೆದು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ.
ಸೋಮೇಗೌಡಾ ಜಿ.ಎಂ ಎಸಿಪಿ ಮಾರ್ಕೆಟ ಹಾಗೂ ಜೆ. ಎಂ. ಕಾಲಿಮಿರ್ಚಿ ಪಿಐ ಮಾಳಮಾರುತಿ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಹೊನ್ನಪ್ಪಾ ತಳವಾರ ಪಿ.ಎಸ್.ಐ (ಕಾ&ಸು), ಶ್ರೀಶೈಲ್ ಹುಳಗೇರಿ ಪಿ. ಎಸ್.ಐ. ಮತ್ತು ಸಿಬ್ಬಂದಿ ಎಮ್.ಜಿ. ಕುರೇರ, ಸಿ.ಜೆ.ಚಿನ್ನಪ್ಪಗೋಳ, ಸಿ.ಐ.ಚಿಗರಿ, ಕೆ. ಬಿ. ಗೌರಾಣಿ, ಬಿ. ಎಮ್. ಕಲ್ಲಪ್ಪನವರ, ರವಿ ಬಾರಿಕರ, ಶಿವಾಜಿ ಚವ್ಹಾನ, ಮಲ್ಲಕಾರ್ಜುನ ಗಾಡವಿ, ತಾಂತ್ರಿಕ ವಿಭಾಗದ ಸಿಬ್ಬಂದಿಯಾದ ರಮೇಶ ಅಕ್ಕಿ, ಮಹಾದೇವ ಕಾಸೀದ ರವರ ತಂಡವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಗೂ ಡಿಸಿಪಿ ರವರು ಪ್ರಶಂಸಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ