Latest

*ಹಾಲಿನ ದರ ಏರಿಸಿಲ್ಲ ಎಂದ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಜನಸಾಮಾನ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಾಲಿನ ದರ ಹೆಚ್ಚಿಲ್ಲ. ಯಾರು ಹೇಳಿದ್ದು ದರ ಏರಿಕೆಯಾಗಿದೆ ಎಂದು? ಹಾಲಿನ ದರ ಏರಿಕೆ ಮಾಡಿಲ್ಲ, ಕೊಡುವ ಕ್ವಾಂಟಿಟಿ ಹೆಚ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.

ನಂದಿನಿ ಹಾಲಿನ ದರ ಏರಿಸಿಲ್ಲ. ಹೆಚ್ಚುವರಿಯಾಗಿ 50ml ಹಾಲು ನೀಡುತ್ತಿದ್ದೇವೆ. ಹೆಚ್ಚುವರಿ 50ml ಹಾಲಿಗೆ 2 ರೂಪಾಯಿ ಪಡೆಯುತ್ತಿದ್ದೇವೆ. ರೈತರು ಹಾಲು ಉತ್ಪಾದನೆ ಪ್ರಮಾಣ ಹೆಚ್ಚಿಸಿದ್ದಾರೆ. ಅವರಿಗೆ ಮಾರುಕಟ್ಟೆ ಒದಗಿಸಿ ಕೊಡಬೇಕಲ್ಲವೇ? ಈ ನಿಟ್ಟಿನಲ್ಲಿ ಮಾರುಕಟ್ಟೆ ಮಡಲು ಹೆಚ್ಚುವರಿ 50ml ಹಾಲು ನೀಡುತ್ತಿದ್ದೇವೆ. ಅರ್ಧಲೀಟರ್ ಪ್ಯಾಕೇಟ್ ನಲ್ಲಿ 55೦ml ನೀಡುತ್ತಿದ್ದೇವೆ. ಒಂದು ಲೀಟರ್ ಪ್ಯಾಕೇಟ್ ನಲ್ಲಿ 1050ml ನೀಡುತ್ತಿದ್ದೇವೆ ಎಂದು ತಿಳಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button