Kannada NewsKarnataka NewsNationalPolitics

*ಹೊಸೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಸಂಸದ ಬಸವರಾಜ ಬೊಮ್ಮಾಯಿ ಆಕ್ಷೇಪ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ಸಿಎಂ ಕರ್ನಾಟಕದ ಹೊಸೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಯೋಜನೆಯನ್ನು  ಘೋಷಿಸಿರುವುದಕ್ಕೆ ಮಾಜಿ ಸಿಎಂ ಹಾಗೂ ಹಾವೇರಿ-ಗದಗ ಸಂಸದ  ಬಸವರಾಜ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ,150 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಂತಿಲ್ಲ. ಹೊಸೂರು ತಮಿಳುನಾಡಿನಲ್ಲಿದ್ದರೂ ಅದರ ಭಾರ ಬೆಂಗಳೂರಿನ ಮೇಲಿದೆ. ಬೆಂಗಳೂರು‌  ಬೆಳೆಯುತ್ತಿರುವುದನ್ನು  ನೋಡಿದರೆ ಇನ್ನೊಂದು ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಹೊಸದಾಗಿ ವಿಮಾನ ನಿಲ್ದಾಣ ಇಲ್ಲಿ ಮಾಡದಿದ್ದರೂ ಹೆಚ್‌ಎಎಲ್ ಅನ್ನು ದೇಶಿಯ ವಿಮಾನ ನಿಲ್ದಾಣವಾಗಿ ಬಳಕೆ ಮಾಡಬಹುದಾಗಿದ್ದೆ. ನಾನು ಸಿಎಂ ಆಗಿದ್ದಾಗ ರಕ್ಷಣಾ ಸಚಿವರ ಬಳಿ ಇದರ ಬಗ್ಗೆ ಮಾತನಾಡಿದ್ದೆ. ಹೆಚ್‌ಎಎಲ್ ಅನುಮತಿ ನೀಡಿದರೆ ಅದರ ಬಳಕೆಗೆ ಸರ್ಕಾರ ಸಿದ್ಧವಿದೆ ಎಂದರು.

ಹೊಸೂರು ವಿಮಾನ ನಿಲ್ದಾಣದಿಂದ ಬೆಂಗಳೂರಿನಲ್ಲಿ ಐಟಿ ಅಭಿವೃದ್ಧಿಯಾಗುವುದಿಲ್ಲ. ಬೆಂಗಳೂರು ಐಟಿ ಕ್ಷೇತ್ರದಲ್ಲಿ ಈಗಾಗಲೇ ಬೆಳೆದಿದೆ. ನಮ್ಮ ಜನರು‌ ಬುದ್ಧಿವಂತಿರಿದ್ದಾರೆ. ಟ್ಯಾಲೆಂಟ್‌ ನಿಂದ ಬೆಂಗಳೂರು ಬೆಳೆದಿದೆ. ಇನ್ನು ‌ಕಾಂಗ್ರೆಸ್‌ನ ಸಂಸದ ರಾಹುಲ್ ಗಾಂಧಿಯ ಹಿಂದೂ ಹೇಳಿಕೆಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ರಾಹುಲ್‌ಗಾಂಧಿಗೆ ಏನು ಹೇಳಬೇಕು ಏನು ಮಾತನಾಡಬೇಕು ಎನ್ನುವುದು  ಅವರಿಗೇ ಗೊತ್ತಿಲ್ಲ. ತಮ್ಮ ಮಾತಿನಿಂದ ಬೇರೆಯವರನ್ನು ಗೊಂದಲಕ್ಕೆ ಒಳಪಡಿಸುತ್ತಾರೆ. ದೇಶ ಸುತ್ತಿದ ಮೇಲೆ ಅವರ ಪ್ರಬುದ್ಧತೆ ಹೆಚ್ಚಾಗಬೇಕಿತ್ತು. ಆದರೆ ಧಾರ್ಮಿಕ ಭಾವನೆಗಳಿಗೆ ದಕ್ಕೆ ಬರುವಂತೆ ಮಾತನಾಡುತ್ತಿದ್ದಾರೆ. ಸಂಸತ್ತಿನಲ್ಲಿ ಹೀಗೆ ಮಾತನಾಡುವುದಿದ್ದರೆ  ಕಾಂಗ್ರೆಸ್ ಪಕ್ಷ  ಜಾತ್ಯತೀತ ವಾದ ಬಿಡುವುದು ಒಳ್ಳೆಯದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button