ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿ ಸಾರ್ವಜನಿಕರು ಬಾವಿ ಮತ್ತು ಬೋರವೆಲ್ ನೀರನ್ನು ಬಳಸುತ್ತಿದ್ದು ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ.
ಈಗಾಗಲೇ ನಗರದಲ್ಲಿ ಡೆಂಗ್ಯೂ, ಕಾಮಾಲೆ ರೋಗಗಳು ದಾಖಲಾಗುತ್ತಿರುವದರಿಂದ ತಮ್ಮ ಮನೆಗಳ ಸುತ್ತ ಮುತ್ತ ಚರಂಡಿಗಳಲ್ಲಿ, ಹಳೇ ಟೈರಗಳಲ್ಲಿ, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ, ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಲು ಕೋರಲಾಗಿದೆ.
ಅಲ್ಲದೇ ಪಾಲಿಕೆಯಿಂದ ಸರಬರಾಜು ಮಾಡುವ ನೀರನ್ನು ಕುಡಿಯಲು ಬಳಸಬೇಕು. ನಳದ ನೀರನ್ನೂ ಕೂಡ ಕಾಯಿಸಿ, ಆರಿಸಿ, ಸೋಸಿ ಕುಡಿಯಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ