ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಪೊಲೀಸ್ ಆಯುಕ್ತರು ಉಪ ಪೊಲೀಸ್ ಆಯುಕ್ತರು (ಅ&ಸಂ) ಮತ್ತು ಸಹಾಯಕ ಪೊಲೀಸ್ ಆಯುಕ್ತರು ಖಡೇಬಜಾರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಖಡೇಬಜಾರ ಪೊಲೀಸ್ ಠಾಣೆ ಇನ್ಸಪೇಕ್ಟರ್ ಹಾಗೂ ಕ್ಯಾಂಪ್ ಪೊಲೀಸ್ ಇನ್ಸಪೇಕ್ಟರ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ಜುಲೈ 9 ರಂದು ಎರಡು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಚೇತನ ಮಾರುತಿ ಶಿಂದೆ (26), ಕರಣ್ ಉತ್ತಮ ಮುತಗೇಕರ್ (27) ಈ ಆರೋಪಿಗಳಿಂದ ನಗರದ ಖಡೇಬಜಾರ, ಕ್ಯಾಂಪ್ ಮತ್ತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಒಟ್ಟು ಮೂರು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, 5,54,400 ಬೆಲೆಯ 77 ಗ್ರಾಂ ಬಂಗಾರದ ಆಭರಣಗಳು, 20,000 ಬೆಲೆಯ 200 ಗ್ರಾಂ ಬೆಳ್ಳಿಯ ಆಭರಣಗಳು, 20,000 ಬೆಲೆ ಲ್ಯಾಪಟಾಪ್ 3,000 ಬೆಲೆಯ ಮೊಬೈಲ್ ಹಾಗೂ 10,000 ನಗದು ಹಣ ಹೀಗೆ ಒಟ್ಟು 6,07,000 ರೂಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸದರಿ ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಖಡೇಬಜಾರ ಉಪ ವಿಭಾಗದ ಎಸಿಪಿ ರವರಾದ ಶೇಖರಪ್ಪ ಎಚ್, ರವರ ಮಾರ್ಗದರ್ಶನದಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ಖಡೇಬಜಾರ ಪೊಲೀಸ್ ಠಾಣೆಯ ಇನ್ಸಪೇಕ್ಟರ ಡಿ ಪಿ ನಿಂಬಾಳಕರ ಮತ್ತು ಕ್ಯಾಂಪ ಪೊಲೀಸ್ ಠಾಣೆಯ ಇನ್ಸಪೇಕ್ಟರ ಅಲ್ತಾಫ ಮುಲ್ಲಾ, ಪಿಎಸ್ಐ ಆನಂದ ಆದಗೊಂಡ ಮತ್ತು ಸಿಬ್ಬಂದಿ ಜನರಾದ ಎ ಬಿ ಶೆಟ್ಟಿ, ಬಿ ಎಸ್ ರುದ್ರಾಪೂರ, ಎಮ್ ವಿ ಅರಳಗುಂಡಿ, ಎಸ್ ಎಚ್ ತಳವಾರ, ಎಸ್ ಬಿ ಬರಗಿ, ಬಿ ಎಲ್ ಸರವಿ, ವಿ ವಾಯ್ ಗುಡಿಮೇತ್ರಿ, ಜಿ ಪಿ ಅಂಬಿ, ಎಸ್ ಬಿ ಭೂಸನೂರಮಠ ಹಾಗೂ ಬೆರಳು ಮುದ್ರ ಘಟಕದ ಸಿಬ್ಬಂದಿ ಜನರು ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ ಎಸ್ ಅಕ್ಕಿ, ಮಹಾದೇವ ಕಾಶೀದ ರವರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು (ಕಾ&ಸು) ಮತ್ತು ಉಪ ಪೊಲೀಸ್ ಆಯುಕ್ತರು (ಅ &ಸಂ) ಬೆಳಗಾವಿ ನಗರ ರವರು ಶ್ಲಾಘಿಸಿರುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ