Belagavi NewsBelgaum NewsKannada NewsKarnataka NewsNationalPolitics

ರಾಜ್ಯದಲ್ಲಿಯೇ ಪ್ರಥಮ: C-TARA ಅಪ್ಲಿಕೇಶನ್ ಗೆ ಚಾಲನೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಶುಕ್ರವಾರ (ಜು.12) ಜರುಗಿದ 2024-25ನೇ ಸಾಲಿನ ಪ್ರಥಮ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ  ಪರಿಶೀಲನಾ ಸಭೆಯಲ್ಲಿ “C-TARA”ಟಾಸ್ಕ ಅಸೈನಮೆಂಟ್ ಮತ್ತು ರಿವ್ಯೂವ್ ಅಪ್ಲಿಕೇಶನ್” ಗೆ ಲೋಕಪಯೋಗಿ ಸಚಿವರು ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ  ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು. 

ಜಿಲ್ಲೆಯ ಪಂಚಾಯತ್ ರಾಜ್ ಇಲಾಖೆಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳು ಕಾರ್ಯಕ್ಷೇತ್ರಕ್ಕೆ ತೆರಳಿ ಉದಾಹರಣೆಗೆ ಶಾಲೆ, ಅಂಗನವಾಡಿ, ಪಿ.ಎಚ್.ಸಿ, ಹಾಸ್ಟೆಲ್ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಬಗೆ ಹರಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಿಶೇಷವಾಗಿ ಮಾನಿಟರಿಂಗ್ ಆಪ್ ಸಿದ್ಧಪಡಿಸಿರುತ್ತಾರೆ. ಇದು ಎಲ್ಲ ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟಕಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗಿದೆ. 

ಈ ಆಪ್ ನಲ್ಲಿ ವೆಬ್ ಪೊರ್ಟ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡು ವಿಧವಿದ್ದು, ವೆಬ್ ಪೊರ್ಟನಲ್ಲಿ ಎಲ್ಲ ಅಧಿಕಾರಿಗಳ ಕಾರ್ಯ ವೈಖರಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಕ್ಷೀಸಲು ಅವಕಾಶವಿದೆ ಹಾಗೂ ಮೊಬೈಲ್ ಆಪ್ ನಲ್ಲಿ ಸಾರ್ವಜನಿಕರ ದೂರುಗಳನ್ನು ಸಿ.ಇ.ಒ ರವರು ತಾಲ್ಲೂಕಾವಾರು ಹಾಗೂ ಇಲಾಖಾವಾರು ದೂರುಗಳನ್ನು ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. 

ಜೊತೆಗೆ ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಕೊಂಡು ಬಗೆಹರಿಸಲು ಈ ಒಂದು ಮಾನಿಟರಿಂಗ್ ಆಪ್ ನಲ್ಲಿ ಅವಕಾಶವಿರುತ್ತದೆ. ಸಮಸ್ಯೆಯ ಗಂಭಿರತೆಯನ್ನು ಅರಿತು ಆದ್ಯತೆ ಮೇಲೆ ಕೆಲಸವನ್ನು ನಿರ್ವಹಿಸಲು ಈ ಒಂದು ಆಪ್ ನಲ್ಲಿ ಅವಕಾಶವಿದ್ದು, ಕೆಲಸದ ಹಂಚಿಕೆ ಮಾಡಿದ ಅಧಿಕಾರಿಯೇ ಸ್ಥಳಕ್ಕೆ ಭೇಟಿ ನೀಡಿ ಜಿಯೋ ಟ್ಯಾಗ್ ಫೋಟೊ ವನ್ನು ಅಳವಡಿಸಲು ಅವಕಾಶವಿರುವದರಿಂದ ಅಧಿಕಾರಿಗಳು ಸ್ಥಳಿಯ ಮಟ್ಟದಲ್ಲಿ ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕರ ದೂರುಗಳಿಗೆ ಯಾವ ಮಟ್ಟದಲ್ಲಿ ಸ್ಪಂದಿಸುತ್ತಾರೆ ಎಂಬುದನ್ನು ಸುಲಭವಾಗಿ ಮೇಲ್ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲು ಸಹಾಯಕವಾಗಿದೆ ಎಂದು ಜಿಲ್ಲಾ ಪಂಚಾಯತ ಸಿಇಒ ರಾಹುಲ್ ಶಿಂಧೆ ಸಭೆಗೆ ತಿಳಿಸಿದರು.

ಸಭೆಯಲ್ಲಿ  ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ, ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ,  ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ನಗರ ಪೊಲಿಸ್ ಆಯುಕ್ತ ಯಡಾ ಮಾರ್ಟಿನ ಮಾರ್ನಬ್ಯಾಂಗ್, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ವಿಧಾನ ಸಭಾ, ವಿಧಾನ ಪರಿಷತ ಸದಸ್ಯರುಗಳು, ನಾಮ ನಿರ್ದೆಶನ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button