Kannada NewsKarnataka NewsPolitics

ಮಾಜಿ ಸಚಿವ ನಾಗೇಂದ್ರ ಪತ್ನಿ ಇಡಿ ವಶಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದಿದೆ.

ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ನಾಗೇಂದ್ರ ಅವರ ಮನೆಯಿಂದ ಮಂಜುಳಾ ಅವರನ್ನು ಕರೆದುಕೊಂಡು ಹೋಗಲಾಗಿದೆ. ನಾಗೇಂದ್ರ ಅವರು ನಾಳೆಯವರೆಗೆ ಇಡಿ ವಶದಲ್ಲಿಯೇ ಇರಲಿದ್ದಾರೆ.

Related Articles

ತಮ್ಮ ಮೇಲೆ ಒತ್ತಡ ಹಾಕಿ ಸುಳ್ಳು ಹೇಳಿಕೆಗಳನ್ನು ದಾಖಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ನಾಗೇಂದ್ರ ಈಗಾಗಲೆ ದೂರು ನೀಡಿದ್ದಾರೆ. ಇದೀಗ ಪತ್ನಿಯನ್ನೂ ಇಡಿ ವಶಕ್ಕೆ ಪಡೆದಿರುವುದು ಪ್ರಕರಣದ ಕುರಿತು ಕುತೂಹಲ ಹೆಚ್ಚಿಸಿದೆ.

Home add -Advt

Related Articles

Back to top button