ಪ್ರಗತಿವಾಹಿನಿ ಸುದ್ದಿ: 2024-25ನೇ ಸಾಲಿ ಮಧ್ಯಂತರ ಬಜೆಟ್ ಮಂಡಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಹೊಸ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಕೊಂಚ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಹೊಸ ತೆರಿಗೆ ವಿಧಾನದಲ್ಲಿ ಕೆಲವೊಂದು ಬದಲಾವಣೆ ಈ ಕೆಳಗಿನಂತೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ವಾರ್ಷಿಕ 0-3 ಲಕ್ಷ ರೂ ಆದಾಯಕ್ಕೆ ತೆರಿಗೆ ಇಲ್ಲ
3ರಿಂದ 7 ಲಕ್ಷ ರೂ ವರೆಗಿನ ಆದಾಯದ ಮೇಲೆ ಶೇ.5ರಷ್ಟು ತೆರಿಗೆ
7ರಿಂದ 10 ಲಕ್ಷ ರೂ ವರೆಗಿನ ಆದಾಯದ ಮೇಲೆ ಶೇ.10ರಷ್ಟು ತೆರಿಗೆ
10ರಿಂದ 12 ಲಕ್ಷ ರೂ ವರೆಗೆ ಆದಾಯದ ಮೇಲೆ ಶೇ.15ರಷ್ಟು ತೆರಿಗೆ
12ರಿಂದ 15 ಲಕ್ಷ ರೂ ವರೆಗೆ ಆದಾಯದ ಮೇಲೆ ಶೇ.20ರಷ್ಟು ತೆರಿಗೆ
15 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ