ಪ್ರಗತಿವಾಹಿನಿ ಸುದ್ದಿ: ರಾಜ್ಯದ ಯೋಧರೊಬ್ಬರು ಸಿಕ್ಕಿಂನಲ್ಲಿ ಹೃದಯಾಘಾತದಿಂದ ಮೃತಪಟ್ತಿರುವ ಘಟನೆ ನಡೆದಿದೆ.
ಅನೀಲ್ ಕುಮಾರ್ ನವಾಡೆ (40) ಮೃತ ಯೋಧ, ಬೀದರ್ ಮೂಲದ ಕಮಲನಗರ ತಾಲೂಕಿನ ಕೋರಿಯಾಳ ಗ್ರಾಮದ ಅನೀಲ್ ಕುಮಾರ್ ನವಾಡೆ 2004ರಲ್ಲಿ ಸೇನೆಗೆ ಸೇರಿದ್ದರು. ಸಿಕ್ಕಿಂ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಿಮಪಾತವಾಗಿ ಅನಾರೋಗ್ಯಕ್ಕೀಡಾಗಿದ್ದರು.
ಆದರೆ ಈಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯೋಧನ ಪಾರ್ಥೀವ ಶರೀರ ನಾಳೆ ಸ್ವಗ್ರಾಮಕ್ಕೆ ಬರುವ ಸಾಧ್ಯತೆ ಇದೆ. ಪತ್ನಿ, ಮಗ, ಮಗಳು ಹಾಗೂ ತಂದೆ-ತಾಯಿಯನ್ನು ಅನೀಲ್ ಅಗಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ