*ಗರುದೇವ ರಾನಡೆ ಮಂದಿರದಲ್ಲಿ ಆ. 1 ರಿಂದ ಮೂರು ವಿವಿಧ ಕಾರ್ಯಕ್ರಮ ಆಯೋಜನೆ: ಎಂ.ಬಿ ಜಿರಲಿ*
ಪ್ರಗತಿವಾಹಿನಿ ಸುದ್ದಿ: ಅಕಾಡೆಮಿ ಆಫ್ ಕಂಪೆರಿಟೀವ್ ಫಿಲಾಸಫಿ ಮತ್ತು ರಿಲಿಜೀಯಸ್ ವತಿಯಿಂದ ಗರುದೇವ ರಾನಡೆ ಮಂದಿರದ ಶತಮಾನೋತ್ಸವವನ್ನು ಆ.1 ರಿಂದ ಮೂರು ದಿನಗಳ ವರೆಗೆ ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಗೌರವ ಕಾರ್ಯದರ್ಶಿ ಎಂ.ಬಿ ಜಿರಲಿ ಅವರು ಮಾಹಿತಿ ನೀಡಿದ್ದಾರೆ
ಇಂದು ಖಾಸಗಿ ಹೋಟಲ್ ನಲ್ಲಿ ಮಾದ್ಯಮಗೊಷ್ಠಿ ನಡೆಸಿ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆರ್ ಎಸ್ ಎಸ್ ಪ್ರಧಾನ ಸಂಚಾಲಕ ಮೋಹನ್ ಭಾಗವಾತ್ ಆಗಮಿಸಲಿದ್ದಾರೆ ಗುರುದೇವ ರಾನಡೆ ಅವರು ಜಮಖಂಡಿಯಲ್ಲಿ ಜನಿಸಿದವರು. ಪುಣೆಗೆ ಹೋಗಿ ಸುಮಾರು 30 ಗ್ರಂಥಗಳನ್ನು ಬರೆದರು. ಸಂದರ್ಭಕ್ಕೆ ತಕ್ಕಂತೆ ಕಾಲ ಕಾಲಕ್ಕೆ ಬಿಡುಗಡೆ ಮಾಡಿದರು. ಅಲ್ಲದೆ ಮಹಾರಾಷ್ಟ್ರ, ಕರ್ನಾಟಕ ಸಂತರ ಬಗ್ಗೆ ಬರೆದಿದ್ದು ಮೆಚ್ಚುಗೆಗೆ ಪಾತ್ರವಾಯಿತು ಎಂದರು.
1926ರಲ್ಲಿ ಗುರುದೇವ ರಾನಡೆ ಅವರು ಮೊಟ್ಟ ಮೊದಲ ಬಾರಿಗೆ ಗ್ರಂಥಗಳನ್ನು ಬರೆಯಲು ಆರಂಭಿಸಿದರು. ರಾನಡೆ ಅವರು ಬರೆದಿರುವ ಗ್ರಂಥಗಳನ್ನು ಡಿಜಿಟಲಿಕರಣ ಮಾಡುವ ಪ್ರಯತ್ನ ನಡೆಸಲಾಗಿದೆ ಎಂದರು.
ಈ ಶತಮಾನೋತ್ಸವದಲ್ಲಿ ಆರ್ ಎಸ್ ಎಸ್ ಪ್ರಮುಖ ಸಂಚಾಲಕ ಮೋಹನ್ ಭಾಗವಾತ್ ಆಗಮಿಸಲಿದ್ದಾರೆ. ರಾನಡೆ ಅವರ ಕನ್ನಡ ಗ್ರಂಥ ಸೇರಿದಂತೆ ಇನ್ನಿತರ ಕಾರ್ಯಕ್ರಮ ನಡೆಯಲಿವೆ ಎಂದರು. ಆ.2 ರಂದು ಯುಥ್ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಆಗಮಿಸಲಿದ್ದಾರೆ. ಅಲ್ಲದೆ ವಿವಿಧ ಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದರು.
ಆ.3 ರಂದು ಶಿಕ್ಷಕರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರೊ. ತ್ಯಾಗರಾಜ ಅವರು ಶಿಕ್ಷಕನಿಂದ ಗುರುವಿನವರೆಗೆ ಪ್ರಯಾಣ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.
ಅಶೋಕ ಪೋತದಾರ, ಸುಬ್ರಹ್ಮಣ್ಯ ಭಟ್, ಆರ್.ಜಿ.ಜಕಾತಿ, ಅಮಿತ್ ಕುಲಕರ್ಣಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ