ಪ್ರಗತಿವಾಹಿನಿ ಸುದ್ದಿ: ಕುಡಿಯುವ ನೀರಿನ ಜಾಕ್ ವೆಲ್ ದುರಸ್ತಿಗೆ ಹೋದ ಸಮಯದಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಎನ್ ಡಿ ಆರ್ ಎಫ್ ತಂಡ ಇದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದ್ದು, ಭಾರಿ ದುರಂತ ಒಂದು ತಪ್ಪಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಬಳಿಯ ಕೃಷ್ಣಾ ನದಿಯಲ್ಲಿ ಈ ಅವಘಡ ಸಂಭವಿಸಿದೆ. ಕುಡಚಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಜಾಕ್ ವೆಲ್ ಮುಳುಗಡೆಯಾಗಿದ್ದು, ಕುಡಿಯುವ ನೀರಿಲ್ಲದ ಕಾರಣ ಎನ್ ಡಿ ಆರ್ ಎಫ್ ತಂಡದ ಜೊತೆ ಸ್ಥಳೀಯ ವಾಟರ್ ಮ್ಯಾನ್ ಲೈನ್ ಮ್ಯಾನ್ ದುರಸ್ತಿಗೆ ತೆರಳಿದ್ದರು.
ನೀರಿನ ಸೆಳೆತಕ್ಕೆ ಸಿಲುಕಿ ಬೋಟ್ ಪಲ್ಟಿ ಆಗುತ್ತಿದಂತೆ ಆರು ಜನ ನೀರುಪಾಲಾಗಿದ್ದರು, ಆದರೆ ಎಲ್ಲರೂ ಲೈಫ್ ಜಾಕೆಟ್ ಬಳಸಿದ್ದರಿಂದ ಲೈನ್ ಮ್ಯಾನ್ ಹಾಗೂ ವಾಟರ್ ಮ್ಯಾನ್ ನದಿಯಲ್ಲಿ ತೇಲುತ್ತಾ ನದಿಯಲ್ಲಿ ಮುಳುಗಿದ ಮರಗಳನ್ನು ಹಿಡಿದು ಜೀವ ರಕ್ಷಣೆ ಮಾಡಿಕೊಂಡಿದ್ದಾರೆ. ಕೃಷ್ಣಾ ನದಿಯಲ್ಲಿ ಅಪಾಯದ ಮಟ್ಟವನ್ನು ಮೀರಿ ನೀರು ಹರಿಯುತ್ತಿದೆ ಜೊತೆಗೆ ಪ್ರವಾಹ ಪರಿಸ್ಥಿತಿ ಎದುರಾಗಿದೆ.
------WebKitFormLS����