ವಿದ್ಯಾರ್ಥಿಗಳ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ ಬಸ್ ಚಾಲಕ ಅಮಾನತು -ವಿದ್ಯಾರ್ಥಿಗಳಿಂದ ರಸ್ತೆ ತಡೆ -Updated News
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಸ್ತೆಯ ಮೇಲಿದ್ದ ವಿದ್ಯಾರ್ಥಿಗಳ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ ಆರೋಪದ ಮೇಲೆ ದಾಂಡೇಲಿ ಕೆಎಸ್ಆರ್ ಟಿಸಿ ಘಟಕದ ಚಾಲಕ ಎ.ಎಸ್.ಎಫ್ ಶೇಖ್ ಅವರನ್ನು ಅಮಾನತುಗೊಳಿಸಲಾಗಿದೆ.
ಧಾರವಾಡದ ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ರಸ್ತೆಯ ಮೇಲೆ ವಿದ್ಯಾರ್ಥಿಗಳಿದ್ದರೂ ಬಸ್ ನಿಲ್ಲಿಸದೆ ಬೇಜವಾಬ್ದಾರಿಯಿಂದ ಚಾಲನೆ ಮಾಡುವ ಮೂಲಕ, ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿಯಿಂದ ಚಾಲನೆ ಮಾಡಿದ್ದೀರಿ. ಈ ಕುರಿತು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲ ಸಂಸ್ಥೆಗೆ ಕೊಟ್ಟ ಹೆಸರು ಬರಲು ಕಾರಣರಾಗಿದ್ದೀರಿ ಎಂದು ತಿಳಿಸಲಾಗಿದೆ.
ಅವರ ಮೇಲೆ ಬಂದಿರುವ ದುರ್ನಡತೆ ಮತ್ತು ದುರ್ವರ್ತನೆ ಆರೋಪ ಸಾಬೀತಾಗಿದೆ. ರಸ್ತೆ ಸಾರಿಗೆ ಸಂಸ್ಥೆಯ ನಿಯಮಾವಳಿ ಪ್ರಕಾರ ದಂಡಾರ್ಹ ಶಿಕ್ಷೆಗೆ ಅರ್ಹರಾಗಿದ್ದಾರೆ ಎಂದು ತಿಳಿಸಲಾಗಿದೆ.
ಖಾನಾಪುರ ತಾಲೂಕಿನ ಬೇಕ್ವಾಡದಲ್ಲಿ ಕಳೆದ ಒಂದು ವಾರದಿಂದ ಬಸ್ ನಿಲ್ಲಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ರಸ್ತೆ ಮೇಲೆ ನಿಂತು ಬಸ್ ತಡೆಯಲು ಯತ್ನಿಸಿದ್ದರು. ಆದರೆ ಬಸ್ ಚಾಲಕ ಅದನ್ನು ನೋಡಿಯೂ ವಿದ್ಯಾರ್ಥಿಗಳ ಮೇಲೆಯೇ ಬಸ್ ಹಾಯಿಸಲು ಪ್ರಯತ್ನಿಸಿದ್ದರು. ವಿದ್ಯಾರ್ಥಿಯೊಬ್ಬನನ್ನು ಸ್ವಲ್ಪ ದೂರದವರೆಗೆ ಬಸ್ ತಳ್ಳಿಕೊಂಡೇ ಹೋಗಿತ್ತು. ಕೊನೆಯೂ ಬಸ್ ನಿಲ್ಲಿಸಿ, ವಿದ್ಯಾರ್ಥಿಗಳನ್ನು ವಿಚಾರಿಸದೆ ಓಡಿಸಿಕೊಂಡು ಹೋಗಲಾಗಿತ್ತು.
ಈ ಕುರಿತ ವೀಡಿಯೋ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾರಿಗೆ ಸಚಿವರು ಕೂಡ ಸಂಬಂಧಿಸಿದ ಚಾಲಕನ ಮೇಲೆ ಕ್ರಮಕ್ಕೆ ಸೂಚಿಸಿದ್ದರು.
ಎಬಿವಿಪಿ ಪ್ರತಿಭಟನೆ
ಸಂಬಂಧಿಸಿದ ಸುದ್ದಿ –ಹಳಿಯಾಳ ಬಸ್ ಚಾಲಕ ಬುಧವಾರ ಸಸ್ಪೆಂಡ್ ಸಾಧ್ಯತೆ – ಮೈ ನವಿರೇಳಿಸುವ ವೀಡಿಯೋ ನೋಡಿ
ವೀಡಿಯೋ ನೋಡಲು ಕ್ಲಿಕ್ ಮಾಡಿ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ