Karnataka NewsLatest

*ಭೀಕರ ಅಪಘಾತ: ಬಾಲಕನ ಮೇಲೆ ಹರಿದ ಲಾರಿ: ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಲಾರಿ ಡಿಕ್ಕಿಯಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ಮಾಕಳಿ ಬಳಿ ನಡೆದಿದೆ.

Home add -Advt

ಬಾಲಕನಿಗೆ ಡಿಕ್ಕಿ ಹೊಡೆದ ಲಾರಿ ಆತನ ಮೇಲೆಯೇ ಹರಿದು ಹೋಗಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 11 ವರ್ಷದ ಶಕೀಲ್ ಮೃತ ಬಾಲಕ. ಪಶ್ಚಿಮ ಬಂಗಾಳ ಮೂಲದ ಗುಲಾಲ್ ಹಾಗೂ ಹಂಗೀನಾ ದಂಪತಿಯ ಪುತ್ರ. ಹಾರೋಕ್ಯಾತನಹಳ್ಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ದಂಪತಿ ಜೀವನ ಸಾಗಿಸುತ್ತಿದ್ದರು.

ಅಪಘಾತದ ಬಳಿಕ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮಾದನಾಯಕನಹಳ್ಳಿ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button