ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಆನಗೋಳ ಕ್ರಾಸ್ ನಲ್ಲಿ ಸ್ಥಾಪಿಸಲಾಗಿರುವ ಛತ್ರಪತಿ ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣಕ್ಕೆ ಆಗಮಿಸುವಂತೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಸಾತಾರ ಸಂಸದ, ಛತ್ರಪತಿ ಶಿವಾಜಿ ಮಹಾರಾಜರ 17ನೇ ವಂಶಸ್ಥ ಉದಯನ್ ರಾಜೆ ಬೋಸ್ಲೆ ಅವರಿಗೆ ಆಹ್ವಾನ ನೀಡಿದ್ದಾರೆ.
ಶನಿವಾರ ಸಾತಾರಾಕ್ಕೆ ತೆರಳಿದ್ದ ಅಭಯ ಪಾಟೀಲ ಉದಯನ್ ರಾಜೇ ಬೋಸ್ಲೆ ಅವರು ಅರಮನೆಗೆ ಭೇಟಿ ನೀಡಿ ಆಹ್ವಾನ ನೀಡಿ, ಮಾತುಕತೆ ನಡೆಸಿದರು.
ಆನಗೋಳ ಕ್ರಾಸ್ ನಲ್ಲಿ ಸಂಭಾಜಿ ಮಹಾರಾಜರ ಪುತ್ಥಳಿ ಸ್ಥಾಪಿಸಲಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಉದಯನ್ ರಾಜೇ ಬೋಸ್ಲೆ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದಾರೆ ಎಂದು ಅಭಯ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ