ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 7 ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಬೆಳಗಾವಿ ಪೊಲೀಸರು ವಿದ್ಯಾರ್ಥಿ ಹಾಗೂ ಅಪ್ರಾಪ್ತ ಸೇರಿ ಮೂವರನ್ನು ಬಂಧಿಸಿದ್ದಾರೆ. ಎಸಿಪಿ ಎನ್.ವಿ.ಬರಮನಿ ಹಾಗೂ ಮಾಳಮಾರುತಿ ಠಾಣೆ ಇನಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಬಿ.ಕೆ.ಕಂಗ್ರಾಳಿ ಸಂತಾಜಿ ಗಲ್ಲಿಯ ಉಳ್ಳಾಗಡ್ಡೆ ವ್ಯಾಪಾರಿ 20 ವರ್ಷದ ಸಂತೋಷ ಸುರೇಶ ಪಮ್ಮಾರ ಹಾಗೂ ರುಕ್ಮಿಣಿ ನಗರದ 19 ವರ್ಷದ ವಿದ್ಯಾರ್ಥಿ ಸಂತೋಷ ವಸಂತ ಪಮ್ಮಾರ, ಇನ್ನೋರ್ವ 17 ವರ್ಷದ ಬಾಲಕ ಬಂಧಿತರು. ಇವರಿಂದ 2.64 ಲಕ್ಷ ರೂ. ಮೊಲ್.ದ ಕಳುವಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
1.16 ಲಕ್ಷ ರೂ. ಮೌಲ್ಯದ 54 ಗ್ರಾಂ ಬಂಗಾರದ ಆಭರಣಗಳು, ಅರ್ಧ ಕಿಲೋ ಬೆಳ್ಳಿ ಆಭರಣ, ಹಿರೋಹೊಂಡಾ ಸ್ಪ್ಲೆಂಡರ್ ಬೈಕ್, 1.20 ಲಕ್ಷ ರೂ. ಮೌಲ್ಯದ, ಲ್ಯಾಪಟಾಪ್, ಕ್ಯಾಮೆರ್, ಕೀ ಬೋರ್ಡ್, ಪೆನ್ ಡ್ರೈವ್, ಸಿಪಿಯು, ಹಾರ್ಡ್ ಡಿಸ್ಕ್, ಮೆಮೊರಿ ಕಾರ್ಡ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಹ್ಯಾದ್ರಿನಗರ, ಬಿ.ಕೆ.ಕಂಗ್ರಾಳಿ, ಹೊನಗಾ, ರಾಮತೀರ್ಥನಗರ, ಮಹಾಂತೇಶ ನಗರ, ಮುತಗಾದ ಗೋಕುಲ ನಗರಗಳಲ್ಲಿ ಕಳ್ಳತನ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಮಾಳಮಾರುತಿ ಠ
ಠಾಣೆಯ ಪಿಎಸ್ಐ ಆರ್.ಬಿ.ಸೌದಾಗರ್, ಪ್ರೊಬೇಶನರಿ ಪಿಎಸ್ಐ ಅವಿನಾಶ್, ಎಎಸ್ಐ ಎ.ಆರ್.ದುಂಡಗಿ, ಎಂ.ಜೆ.ಕುರೇರ, ಡಿ.ಸಿ.ಸಾಗರ, ಕೆ.ಡಿ.ನದಾಫ್, ಸಿ.ಐ.ಚಿಗರಿ, ಎಲ್.ಎಂ.ಮುಶಾಪುರೆ, ಎಸ್.ಎಂ.ಗುಡದೈಗೋಳ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಪೊಲೀಸ್ ಕಮಿಶನರ್ ಲೋಕೇಶ್ ಕುಮಾರ, ಡಿಸಿಪಿಗಳಾದ ಸೀಮಾ ಲಾಟ್ಕರ್, ಯಶೋಧಾ ವಂಟಗೋಡಿ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ