
ಪ್ರಗತಿವಾಹಿನಿ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಬೆಳಗಾವಿಯ ಅಜಮ್ ನಗರದಲ್ಲಿರುವ ಶ್ರೀ ರೇಣುಕಾಶ್ರಮಕ್ಕೆ ಭೇಟಿ ನೀಡಿ, ಮಾತೋಶ್ರೀ ಗಂಗಾಮಾತಾರವರ ನೇತೃತ್ವದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆದ ಶ್ರೀ ರೇಣುಕಾದೇವಿಯ ಪೂಜೆಯಲ್ಲಿ ಪಾಲ್ಗೊಂಡರು.
ಈ ವೇಳೆ ದೇವಿಯ ಆಶೀವಾದ ಪಡೆದ ಸಚಿವರು, ಮಾತೋಶ್ರೀ ಗಂಗಾಮಾತಾ ಅವರನ್ನು ಗೌರವಿಸಿ, ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು.

ಆದಿಶಕ್ತಿ ರೇಣುಕಾದೇವಿಯ ಆರಾಧಕಿಯಾಗಿರುವ ಮಾತೋಶ್ರೀಯವರು ಸುಮಾರು 48 ವರ್ಷಗಳಿಂದ ಶ್ರಾವಣ ಮಾಸದ ಪ್ರಯುಕ್ತ ಪ್ರವಚನ, ಭಕ್ತಿ ಸಂಗೀತ ಮುಂತಾದ ಧಾರ್ಮಿಕ ಕಾರ್ಯಗಳನ್ನು ಆಚರಿಸುತ್ತಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸಿಸಿದರು. ಇದೇ ವೇಳೆ ಆಶ್ರಮದ ವತಿಯಿಂದ ಸಚಿವರನ್ನು ಸತ್ಕರಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ