Karnataka NewsLatest

*ವಿಕಲಚೇತನರಿಗೆ ದ್ವಿಚಕ್ರ ಮೋಟಾರು ವಾಹನ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

ಅಂಗನಾವಾಡಿ ಕಾರ್ಯಕರ್ತರಿಗೆ ನೇಮಕಾತಿ ಆದೇಶ ಪತ್ರ ವಿತರಣೆ


ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 33 ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಿಸಿದರು.

ಇದೇ ವೇಳೆ 3 ವಿಕಲಚೇತನರಿಗೆ ಬ್ಯಾಟರಿಚಾಲಿತ ವೀಲ್ ಚೇರ್ ವಿತರಿಸಿದರು. ನಂತರ ಸೆಪ್ಟೆಂಬರ್ 1 ರಿಂದ 30ರವರೆಗೆ ನಡೆಯಲಿರುವ ರಾಷ್ಟ್ರೀಯ ಪೋಷಣ್ ಮಾಸಾಚರಣೆಗೆ ಚಾಲನೆ ನೀಡಿದರು.

Home add -Advt

ಪರಿಶೀಲನಾ ಸಭೆಯ ಆರಂಭಕ್ಕೂ ಮುನ್ನ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರು ಸುಕನ್ಯಾ ಸಮೃದ್ಧಿ ಯೋಜನೆ ಪಾಸ್ ಬುಕ್ ವಿತರಣೆ, ಅಂಗನಾವಾಡಿ ಕಾರ್ಯಕರ್ತರಿಗೆ ನೇಮಕಾತಿ ಆದೇಶ, ಲಿಂಗತ್ವ ಅಲ್ಪಸಂಖ್ಯಾತ ಗುರುತಿನ ಚೀಟಿ ವಿತರಿಸಿದರು.

Related Articles

Back to top button