*ಸ್ವ ಪಕ್ಷದವರೆ ಸಿದ್ದರಾಮಯ್ಯರನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ : ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಪಕ್ಷದವರೇ ಸಿಎಂ ಸ್ಥಾನದಿಂದ ಕೆಡವಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದ್ದು, ಖುದ್ದು ಅವರೇ ಆರೋಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಿದ್ದರಾಮಯ್ಯನವರು ತಮ್ಮನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಿಗೆ ಹೋಲಿಸಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ರಾಯಣ್ಣರನ್ನು ನಮ್ಮವರೇ ಬಿಟೀಷರಿಗೆ ಹಿಡಿದುಕೊಟ್ಟು ದೇಶದ್ರೋಹದ ಕೆಲಸ ಮಾಡಿದ್ದರು. ಅದೇ ರೀತಿ ತಮ್ಮ ವಿರುದ್ಧವೂ ಒಳಗಿನವರೇ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಸಿಎಂ ಮಾರ್ಮಿಕವಾಗಿ ಹೇಳುತ್ತಿದ್ದಾರೆ. ಹೀಗಾಗಿ ವಿಪಕ್ಷದವರು ಯಅರೂ ಸಿಎಂ ವಿರುದ್ಧ ಷಡ್ಯಂತ್ರ ಮಾಡುತ್ತಿಲ್ಲ ಅದರ ಅರ್ಥ ಎಂದರು.
ಅವರ ಪಕ್ಷದವರೇ ಸಿಎಂ ವಿರುದ್ಧದ ಹಗರಣ ಹೊರಗೆ ತರುತ್ತಿದ್ದಾರೆ. ಆ ಮೂಲಕ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಲು ಪ್ರಯತ್ನಿಸುತ್ತಿದ್ದಾರೆ ಅಂತಾ ಪರೋಕ್ಷವಾಗಿ ಸಿಎಂ ಅವರೇ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಟಿಪ್ಪಣಿ ಮಾಡಿದರು.
ತಮ್ಮನ್ನು ತಮಗೆ ರಾಯಣ್ಣರಿಗೆ ಹೋಲಿಕೆ ಮಾಡಿಕೊಂಡು, ನಮ್ಮ ಪಕ್ಷದವರೇ ತಮ್ಮನ್ನು ಮಗಿಸಲು ಹೊರಟಿದ್ದಾರೆ ಅಂತಾ ಸಿಎಂ ಹೇಳಿಕೆಯ ಒಳಾರ್ಥವನ್ನು ತಮ್ಮ ಗ್ರಹಿಕೆಯಂತೆ ಹೆಚ್‌ಡಿಕೆ ವಿವರಿಸಿದರು. ಹೀಗಾಗಿ ಸದ್ಯ ವಿರೋಧ ಪಕ್ಷದವರ ವಿರುದ್ಧ ಸಿಎಂ ಹೇಳಿಕೆ ಕೊಟ್ಟಿಲ್ಲ. ನಮ್ಮನ್ನು ಅವರು ದೂರುತ್ತಿಲ್ಲ ಎಂದು ಕುಮಾರಸ್ವಾಮಿ ಟಾಂಗ್ ನೀಡಿದರು.
ಸ್ವ ಪಕ್ಷದವರೆ ಸಿದ್ದರಾಮಯ್ಯ ಅವರನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ