ಪ್ರಗತಿವಾಹಿನಿ ಸುದ್ದಿ: ರಾಷ್ಟ್ರೀಯ ವನ್ಯ ಜೀವಿ ಮಂಡಳಿಯ ಸಭೆಯಲ್ಲಿ ಮಹಾದಾಯಿ ಯೋಜನೆಯ ಅರಣ್ಯ ಭೂಮಿ ವರ್ಗಾವಣೆಯ ವಿಷಯವನ್ನು ಮುಂದೂಡಿರುವುದಕ್ಕೆ ರಾಜ್ಯ ಸಚಿವ ಸಂಪುಟ ಸಭೆ ತೀವ್ರ ಕಳವಳ ವ್ಯಕ್ತಪಡಿಸಿತು ಮತ್ತು ಈ ಕುರಿತು ಸರ್ವಪಕ್ಷಗಳ ಸಭೆಯನ್ನು ನಡೆಸಲು ಹಾಗೂ ದೆಹಲಿಗೆ ಪ್ರಧಾನ ಮಂತ್ರಿಯವರ ಬಳಿಗೆ ಸರ್ವ ಪಕ್ಷಗಳ ನಿಯೋಗ ಕೊಂಡೊಯ್ಯಲು ತೀರ್ಮಾನಿಸಲಾಯಿತು. ರಾಜ್ಯ ಸಂಪುಟವು ವನ್ಯ ಜೀವಿ ಮಂಡಳಿಯ ನಿರ್ಣಯದ ಬಗ್ಗೆ ಅಸಮಾದಾನ ಮತ್ತು ಕಳವಳ ವ್ಯಕ್ತಪಡಿಸಿ, ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಕ್ಕೆ ಪರಿಶೀಲಿಸಲು ಕಾನೂನು ಇಲಾಖೆಗೆ ಸೂಚಿಸಿದೆ ಎಂದು ಕಾನೂನು, ನ್ಯಾಯ ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ತಿಳಿಸಿದರು.
ಸಚಿವ ಸಂಪುಟದ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಸಭೆಯ ನಿರ್ಣಯಗಳ ಬಗ್ಗೆ ವಿವರಿಸಿದ ಕಾನೂನು ಸಚಿವರು ಕೇಂದ್ರ ಸರ್ಕಾರದ ವನ್ಯ ಜೀವಿ ಮಂಡಳಿಯ 79ನೇ ಸಭೆಯ ನಡವಳಿಯ ಉದೃತ ಭಾಗವನ್ನು ಪತ್ರಿಕಾಗೋಷ್ಠಿಯಲ್ಲಿ ಓದಿ ಹೇಳಿದರು.
79ನೇ SC-NBWL ಸಭೆಯ ನಡಾವಳಿಯ ಉಧೃತಭಾಗ ಕೆಳಕಂಡಂತಿದೆ:
“ಮಹದಾಯಿ ಯೋಜನಾ ಪ್ರದೇಶದ ವಾಸ್ತವಾಂಶದ ಅಧ್ಯಯನಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ತಜ್ಞರ ತಂಡವನ್ನು ಕಳುಹಿಸಿತ್ತು. ಈ ಸಮಿತಿಯು ಹಲವು ಶಿಫಾರಸ್ಸುಗಳನ್ನು ಮಾಡಿದೆ. ಈ ಬಗ್ಗೆ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಪ್ರತಿಕ್ರಿಯೆ ಕೇಳಲಾಗಿತ್ತು. ಸಬ್ಜುಡೀಸ್ ಆಗುತ್ತದೆ ಎಂಬ ಕಾರಣ ಮುಂದಿಟ್ಟು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ, ಎಂದು ವನ್ಯಜೀವಿ ಮಂಡಳಿಯು ತಿಳಿಸಿತು. ಇದು ಕರ್ನಾಟಕ ಸರ್ಕಾರದ ಯೋಜನೆ/ ಗೋವಾ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತಿಳಿಸಿದರು. ಚರ್ಚೆಯ ನಂತರ, ಈ ವಿಷಯವನ್ನು ಮುಂದಿನ ಸಭೆಗೆ ಮುಂದೂಡಲು ಮಂಡಳಿಯು ತೀರ್ಮಾನಿಸಿತು.”
Inference: The MWDT award was pronounced on 14.08.2018 and Gazetted on 27.02.2020. The Central Water Commission has accorded clearance to the DPRs of Kalasa and Bhandura Projects on 29.12.2023. In accordance to the allocation accorded to State of Karnataka KNNL has taken up Kalasa and Bhandura Projects which is very much in consonance with the provisions of the award.
Further, any interim stay or any order is not passed by the Supreme Court. As such the provisions of the award are very much operational which enables the State of Karnataka to take forward the project in true spirit technically, legally, administratively and socially. Mere pendency of Goa’s appeal before the Honb’le Supreme Court will not pose any legal impediments for the State of Karnataka to proceed further in this matter.
ಆದರೆ, ವನ್ಯ ಜೀವಿ ಮಂಡಳಿಯು ಈ ಇದೇ ಸಭೆಯಲ್ಲಿ ಗೋವಾ-ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಕರ್ನಾಟಕದಲ್ಲಿನ 435 ಎಕರೆ ಅರಣ್ಯ ಭೂಮಿ ಬಳಕೆಯಾಗುವ ಪ್ರಸ್ತಾವನೆಗೆ ಮಂಡಳಿಯು ಷರತ್ತು ಬದ್ಧ ಒಪ್ಪಿಗೆ ನೀಡಿರುತ್ತದೆ. ಎಂದು ವಿವರಿಸಿದರು. ಕಣ್ಣಿಗೆ ಕಾಣುವ ಪಕ್ಷಪಾತದ ವಿಷಯವು ಇದಾಗಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ