Belagavi NewsBelgaum NewsKarnataka NewsLatest

*ಬೆಳಗಾಂವ್ ಶುಗರ್ಸ್ ಕಾರ್ಖಾನೆಗೆ ರೂವಾಂಡಾ ದೇಶದ ಉನ್ನತ ಮಟ್ಟದ ನಿಯೋಗ ಭೇಟಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾಂವ್ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಗೆ ಪೂರ್ವ ಆಫ್ರಿಕಾದ ರೂವಾಂಡಾ ದೇಶದ ಹೈ ಕಮಿಷನರ್ ಜಾಕ್ವೆಲಿನ್ ಮುಕಂಜಿರಾ ಮತ್ತು ರೂವಾಂಡಾದ ರಾಜತಾಂತ್ರಿಕ ಮೊಹನ ಸುರೇಶ ಅವರ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿತು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸತೀಶ ಜಾರಕಿಹೊಳಿ, ಯರಗಟ್ಟಿ ಶುಗರ್ಸ್ ಪ್ರೈ. ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸತೀಶ ಶುಗರ್ಸ್ ಹಾಗೂ ಬೆಳಗಾಂವ್ ಶುಗರ್ಸ್ ಕಾರ್ಖಾನೆಗಳ ನಿರ್ದೇಶಕರಾದ ರಾಹುಲ ಜಾರಕಿಹೊಳಿಯವರು, ಬೆಳಗಾಂ ಶುಗರ್ಸ್ ಮತ್ತು ಸತೀಶ ಶುಗರ್ಸ್ ಕಾರ್ಖಾನೆಗಳ ಚೇರಮನ್ ಮತ್ತು ಸಿ.ಎಫ್.ಓ ರವರಾದ ಪ್ರದೀಪಕುಮಾರ ಇಂಡಿ, ಹಿರಿಯ ಉಪಾಧ್ಯಕ್ಷರಾದ ಎಲ್.ಆರ್.ಕಾರಗಿ, ಹಣಕಾಸು ವಿಭಾಗದ ಉಪಾಧ್ಯಕ್ಷರಾದ ಡಿ.ಆರ್ ಪವಾರ, ತಾಂತ್ರಿಕ ವಿಭಾಗದ ಉಪಾಧ್ಯಕ್ಷರಾದ ವಿ.ಎಮ್ ತಳವಾರ, ಎ.ಎಸ್. ರಾಣಾ ತಂಡದ ಜೊತೆಗಿದ್ದರು.

ನಿಯೋಗವು ಕಾರ್ಖಾನೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ, ಕಾರ್ಖಾನೆಯ ಪ್ರಗತಿಯನ್ನು ಆಲಿಸಿ, ಕಾರ್ಖಾನೆಯ ಮೂಲಸೌಕರ್ಯ, ಉದ್ಯಮ ಸ್ನೇಹಿ ವಾತಾವರಣ ಮತ್ತು ಕಾರ್ಖಾನೆಯು ಗ್ರಾಮೀಣ ಭಾಗದ ರೈತರು, ಯುವಜನತೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ, ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿರುವಂತಹ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವುದನ್ನು ಕಂಡು ಪ್ರಭಾವಿತರಾದ ಶ್ರೀಮತಿ.ಜಾಕ್ವೆಲಿನ್ ಮುಕಂಜಿರಾ, ಕಾರ್ಖಾನೆಯನ್ನು ಅಭಿವೃದ್ದಿ ಪಡಿಸುವಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಶ್ಲಾಘಿಸಿ, ಕಾರ್ಖಾನೆಯ ಸ್ವಚ್ಚತೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಸಂಸ್ಥಾಪಕ ಅಧ್ಯಕ್ಷರಾದ ಸತೀಶ ಜಾರಕಿಹೊಳಿಯವರು ನಿಯೋಗವನ್ನು ಸ್ವಾಗತಿಸಿ ಮಾತನಾಡುತ್ತ, ನಿಯೋಗದ ಇಂತಹ ಭೇಟಿಯಿಂದ ರೂವಾಂಡಾ ಮತ್ತು ಬೆಳಗಾವಿಯ ನಡುವಿನ ವ್ಯಾಪಾರ ಅವಕಾಶಗಳನ್ನು ಅಭಿವೃದ್ದಿ ಪಡಿಸುವ ಮೂಲಕ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟಿಗೆ ಸಹಾಯವಾಗಲಿದೆ ಎಂದು ಹೇಳಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button