Belagavi NewsBelgaum NewsKannada NewsKarnataka NewsNationalPolitics

*ವಂದೆ ಭಾರತ ರೈಲು ಬೆಳಗಾವಿಗೆ ತರಲು ನಾನು ಬದ್ಧ: ಜಗದೀಶ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರಿನಿಂದ ಬೆಳಗಾವಿ ವರೆಗೆ ವಂದೇ ಭಾರತ್ ರೈಲ್ವೆ ತರಲು ನಾನು ಬದ್ಧನಿದ್ದೇನೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. 

ಇಂದು ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ನಾನು ಶಕ್ತಿ ಮೀರಿ ಒಂದೇ ಭಾರತ್ ರೈಲು ಬೆಳಗಾವಿಗೆ ತರುವುದಾಗಿ ಹೇಳಿದ್ದೆ. ಅದಕ್ಕೆ ಈಗಲೂ ಬದ್ಧನಿದ್ದೇನೆ. ಈಗ ಅದು ಹುಬ್ಬಳ್ಳಿಯಿಂದ ಪುಣೆಗೆ ವಂದೇ ಭಾರತ ರೈಲು ಪ್ರವೇಶವಾಗಿದೆ. ಅದರಂತೆ ಬೆಳಗಾವಿಯಿಂದ ಬೆಂಗಳೂರು ಪ್ರವೇಶ ಮಾಡಲು ಪ್ರಾಮಾಣಿಕವಾಗಿ ಪ್ರತ್ನ ಮಾಡುವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ನಡೆದಿದೆ. ಇಲ್ಲಿಯವರೆಗೂ ಒಳಗಡೆ ನಡೆಯುತ್ತಿದ್ದ ಚರ್ಚೆ ಈಗ ಬಹಿರಂಗವಾಗಿ ಚರ್ಚೆ ನಡೆಯುತ್ತಿದೆ ಎಂದರು.

ಒಳಗಡೆ ನಾವು ಸಿದ್ದರಾಮಯ್ಯ ಅವರ ಪರವಾಗಿದ್ದೇವೆ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಸಚಿವರು, ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆದರೆ ತೆರೆಮರೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತು ಜೋರಾಗಿ ನಡೆಯುತ್ತಿದೆ.ರಾಜ್ಯದಲ್ಲಿ ಈಗ ಹತ್ತಾರೂ ಮುಖ್ಯಮಂತ್ರಿಗಳು ಹುಟ್ಟಿಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ‌ಮುಡಾ, ವಾಲ್ಮೀಕಿ ಹಗರಣದಲ್ಲಿ ಸರಕಾರ ಮುಳುಗಿ ಹೋಗಿದೆ. ಇದರಿಂದ ಕಾಂಗ್ರೆಸ್ ರಾಜ್ಯದಲ್ಲಿ ನಿರ್ಣಾಮವಾಗಲಿದೆ. ರಾಜ್ಯ ಸರಕಾರ ತನ್ನ ತಪ್ಪಿನಿಂದ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದರು‌. ನಾವು ಆಪರೇಷನ್ ಕಮಲ ಮಾಡುವುದು ಬೇಕಾಗಿಲ್ಲ. ಅವರ ಶಾಸಕ, ಸಚಿವರೇ ಒಬ್ಬರಿಗೊಬ್ಬರು ಕಾಲು ಎಳೆಯುವುದು ಆರಂಭವಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ಆರ್ಥಿಕ ದಿವಾಳಿಯಾಗುವ ಪ್ರಶ್ನೆಗೆ ಉತ್ತರಿಸಿದ ಅವರು, ಪಾಲಿಕೆಯನ್ನು ಆರ್ಥಿಕವಾಗಿ ಸುಧಾರಣೆ ಮಾಡಲು ನನ್ನಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕಿದೆ. ಅಧಿಕಾರಿಗಳ ಯಡವಟ್ಟು ನಿಂದ ಸಮಸ್ಯೆ ಆಗಿದೆ. ಅಧಿಕಾರಿಗಳ ಮೇಲೆ ನಿಯಂತ್ರಣ ‌ಇಲ್ಲದೇ ಇದ್ದರೆ ಈ ಈ ರೀತಿಯ ಸಮಸ್ಯೆ ಆಗುತ್ತದೆ ಎಂದರು.

ಮಾಧ್ಯಮ ಪ್ರಕಟಣೆ…

ಬೆಳಗಾವಿ ಜಿಲ್ಲೆಯ ಜನರ ಬಹಳ ದಿನಗಳ ಬೇಡಿಕೆಯನಿಸಿದ್ದ ಬೆಳಗಾವಿ – ಪುಣೆ ನಡುವೆ ಅತಿ ವೇಗದ “ವಂದೇ ಭಾರತ್” ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವರು ಹಸಿರು ನಿಶಾನೆ ನೀಡಿರುವುದು ಅತ್ಯಂತ ಸಂತಸದ ಸಂಗತಿ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ – ಪುಣೆ ನಡುವೆ ವಂದೇ ಭಾರತ್ ನೂತನ ರೈಲು ಸಂಪರ್ಕಕ್ಕಾಗಿ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಇವರನ್ನು ಭೇಟಿ ಮಾಡಿ, ಪ್ರಸ್ತಾಪಿತ ಮಾರ್ಗದಲ್ಲಿ ಈ ರೈಲನ್ನು ಪ್ರಾರಂಭಿಸುವಂತೆ ವಿನಂತಿಸಿದ್ದು, ಅವರು ಈ ಬೇಡಿಕೆಯನ್ನು ಖಂಡಿತವಾಗಿಯೂ ಈಡೇರಿಸುವ ಕುರಿತು ಭರವಸೆಯನ್ನು ನೀಡಿದ್ದರು, ಇಂದು ಭರವಸೆ ಈಡೇರಿದಂತಾಗಿದೆ.

ಬೆಳಗಾವಿ – ಪುಣೆ ನಗರಗಳ ನಡುವೆ ವಂದೇ ಭಾರತ್ ನೂತನ ರೈಲು ಸಂಚಾರ ದಿನಾಂಕ 15 ಸೆಪ್ಟಂಬರ್ 2024 ರಂದು ಮಾನ್ಯ ಪ್ರಧಾನಮಂತ್ರಿಗಳಿಂದ ಉದ್ಘಾಟನೆಗೊಳ್ಳಲಿದ್ದು, ಅದರಂತೆ ಸಾಯಂಕಾಲ ಬೆಳಗಾವಿಯಲ್ಲಿ ಇದನ್ನು ನಾವು ಬರ ಮಾಡಿಕೊಳ್ಳುವುದಕ್ಕೆ ಅತ್ಯಂತ ಉತ್ಸುಕತೆಯಿಂದ ಕಾದಿದ್ದೇವೆ.

ಅದೇ ರೀತಿಯಾಗಿ ಬೆಂಗಳೂರು – ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ ವಂದೇ ಭಾರತ್ ರೈಲು ಕೂಡ ಬೆಳಗಾವಿ ನಗರದ ವರೆಗೂ ವಿಸ್ತರಿಸುವ ಬಗ್ಗೆಯೂ ಸಹ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಇವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಈ ಬೇಡಿಕೆಯನ್ನು ಸಹ ಅವರು ಪರಿಗಣಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಜಗದೀಶ ಶೆಟ್ಟರ ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button