Kannada NewsKarnataka News

ಅನಾಥಾಶ್ರಮ ಮಕ್ಕಳಿಗೆ ದಾಂಡಿಯಾ, ಗರ್ಬಾ ನೃತ್ಯ ಕಾರ್ಯಾಗಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಕೇರ್ ಫಾರ್ ಯು ಸ್ವಯಂ ಸೇವಾ ಸಂಸ್ಥೆ ಅನಾಥ ಮಕ್ಕಳಿಗಾಗಿ ದಾಂಡಿಯಾ ಮತ್ತು ಗರ್ಬಾ ನೃತ್ಯ ಕಾರ್ಯಾಗಾರ ಸಂಘಟಿಸಿತ್ತು
ನವರಾತ್ರಿ ಹಿನ್ನೆಲೆಯಲ್ಲಿ ಗಂಗಮ್ಮ ಚಿಕ್ಕುಂಬಿ ಅನಾಥಾಶ್ರಮದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಆರತಿ ಚಿಂಡಕ್ ಹಾಗೂ ರಾಧಿಕಾ ಚಿಂಡಕ್ ಮಕ್ಕಳಿಗೆ ತರಬೇತಿ ನೀಡಿದರು. ಸುಮಾರು 70 ಮಕ್ಕಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಕೇರ್ ಫಾರ್ ಯು ಸಂಘಟನೆಯ ಶೀತಲ್ ಭಂಡಾರಿ, ಡಾ.ದೀಪಾಲಿ ಪಾಟೀಲ, ಡಾ.ರಜನಿ ಮಿಶ್ರಾ, ಗಾಯತ್ರಿ ರಾಯಬಾಗಿ, ರೋಹಿಣಿ ಬೆಂಬಳಗಿ ಮೊದಲಾದವರು ಭಾಗವಹಿಸಿದ್ದರು.
ಕೇರ್ ಫಾರ್ ಯು ಒಂದು ಸಾಮಾಜಿಕ ಸೇವಾ ಸಂಘಟನೆಯಾಗಿದ್ದು, ಬಡತನ ನಿರ್ಮೂಲನೆ ಮತ್ತು ಸಾಮಾಜದಿಂದ ದೂರವಾದವರ ಪರವಾಗಿ ಕೆಲಸ ಮಾಡುತ್ತಿದೆ. ಸುಮಾರು 20 ಗೃಹಿಣಿಯರು ಸೇರಿ ಸಂಘಟನೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.
ಹಿರಿಯ ನಾಗರಿಕರಿಗೆ ಪ್ರವಾಸಗಳನ್ನು ಸಂಘಟಿಸುವುದು, ವ್ಯಕ್ತಿತ್ವ ವಿಕಸನ ಶಿಬಿರ ಸಂಘಟನೆ, ಅನಾಥ ಬಾಲಕಿಯರಿಗೆ ವೃತ್ತಿ ತರಬೇತಿ, ಅನಥ ಮಕ್ಕಳಲ್ಲಿ ಜೀವನ ಕೌಶಲ್ಯ ತುಬುವುದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವುದು ಮೊದಲಾದ ಕೆಲಸಗಳನ್ನು ಕೇರ್ ಫಾರ್ ಯು ಫೌಂಡೇಶನ್ ಮಾಡುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button