Belagavi NewsBelgaum NewsKannada NewsKarnataka NewsNationalPolitics

*ಆಂಧ್ರಪ್ರದೇಶ ಮಾಜಿ ಸಿಎಂ ಜಗನ್ಮೋಹನ ರಡ್ಡಿ ಕನ್ವರ್ಟೆಡ್ ಕ್ರಿಶ್ಚಿಯನ್: ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ತಿರುಪತಿ ತಿರುಮದಲ್ಲಿ ವಿತರಿಸುವ ಲಡ್ಡುವಿನಲ್ಲಿ ಹಂದಿ ಕೊಬ್ಬು, ಮೀನಿನ ಎಣ್ಣೆ ಮಿಶ್ರಣ ಮಾಡುತ್ತಾರೆ ಎನ್ನಲಾಗುತ್ತಿದೆ.‌ ಈ ಬಗ್ಗೆ ಬೆಳಗಾವಿ ಲೋಕಸಭಾ ಕ್ಷೇತ್ರಸ ಸಂಸದ ಜಗದೀಶ ಶೆಟ್ಟರ್ ಆಕ್ರೋಶ ಹೊರಹಾಕಿದ್ದಾರೆ.‌

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಚಂದ್ರಬಾಬು ನಾಯ್ಡು ಲ್ಯಾಬ್ ವರದಿ ಆಧಾರದ ಮೇಲೆ ಹೇಳಿದ್ದಾರೆ. ಇದು ಗಂಭೀರವಾದ ಪ್ರಕರಣ. ಭಕ್ತರು ನಂಬಿಕೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಂದ್ರಪ್ರದೇಶ ಮಾಜಿ ಸಿಎಂ ಜಗನ್ ಮೋಹನ ರೆಡ್ಡಿ ಕ್ರಿಶ್ಚಿಯನ್ ಕನ್ವರ್ಟೆಡ್ ಇರೋರು.‌ ಹೀಗಾಗಿ ಆತನಿಗೆ ಹಿಂದೂ ಧರ್ಮದ ಮೇಲೆ ಯಾವುದೇ ರೀತಿಯ ನಂಬಿಕೆ, ವಿಶ್ವಾಸವಿಲ್ಲ. ಹಿಂದೂಗಳ ನಂಬಿಕೆಯನ್ನು ಡಿಸ್ಟರ್ಬ್ ಮಾಡೊದಕ್ಕೆ ಅವರು ನೋಡಿದ್ದಾರೆ. ವರದಿಯನ್ನು ಗಮಿನಿಸದ್ರೆ ಈ  ರೀತಿಯ ಸಂಶಯಗಳು ಶುರುವಾಗುತ್ತಿವೆ. ವರದಿ ನಿಜವಾಗಿದ್ರೆ ಜಗನ್ ಮೋಹನ ರೆಡ್ಡಿ, ಗುತ್ತಿಗೆ ಪಡೆದ ಎಲ್ಲರ ಮೇಲೆಯೂ ಕಾನೂನು ಕ್ರಮ ಆಗಬೇಕೆಂದು ನಾನು ಒತ್ತಾಯ ಮಾಡುತ್ತೇನೆ. ಇದು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಎಂದರು. 

ಒನ್ ನೇಷನ್‌ ಒನ್ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಇದು ಬಹಳ ರೀತಿಯ ಯೋಜನೆ, ಹಿಂದೆ ಯಾವ ಸರ್ಕಾರವೂ ಮಾಡಿಲ್ಲ, ಇದು ಚುನಾವಣೆ ಆಯೋಗದ ಮೇಲೆ ಕರ್ಚು ಕಡಿಮೆ ಆಗುತ್ತೆ ದೇಶದ ಚುನಾವಣೆಯಲ್ಲಿ ವೆಚ್ಚಕ್ಕೆ ಕಡಿವಾಣ ಹಾಕುತ್ತೆ. ಏಕಕಾಲಕ್ಕೆ ಚುನಾವಣೆ ಆಗೋದ್ರಿಂದ ಸಮಯ ಕರ್ಚು ಉಳಿತಾಯವಾಗುತ್ತದೆ, ಇದು ಜಾರಿಯಾದ್ರೆ ದೇಶದಲ್ಲಿ ದೊಡ್ಡ ಬದಲಾವಣೆ ಆಗುತ್ತೆ ಎಂದರು.

ವಿಪಕ್ಷ ನಾಯಕ ಆರ್.ಅಶೋಕ, ಶೋಭಾ ಕರಂದಾಜಲೇ ವಿರುದ್ಧ ಎಫ್ಐಆರ್ ವಿಚಾರವಾಗಿ ಮಾತನಾಡಿದ ಅವರು, ಇವೆಲ್ಲ ಸಹಜವಾಗಿ ನಡೆಯುವ ವಿಚಾರಗಳು, ನಾವು ಏನೋ ಒಂದು ಸ್ಟೇಟಮೆಂಟ್ ಕೋಡುತ್ತೇವೆ, ಅದಕ್ಕೆ ಅವರು ಉತ್ತರ ಕೊಡುತ್ತಿದ್ದರು. ಆದರೆ ಇವತ್ತು ಏನೋ ಒಂದು ಹೇಳಿಕೆ ಕೊಟ್ರು ಎಫ್ಐಆರ್ ಆಗ್ತಿದೆ, ಇದು ದ್ವೇಷ ರಾಜಕಾರಣ್ಕೆ ಸಾಕ್ಷಿ. ಬಿಜೆಪಿ ನಾಯಕರನ್ನು ಹೆದರಿಸುವ ತಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಬಂದ್ಮೇಲೆ ಕೋಮು ಗಲಭೆಗಳು ಜಾಸ್ತಿ ಆಗುತ್ತಿದೆ. ಅಲ್ಪಸಂಖ್ಯಾತರ ತುಷ್ಟೀಕರಣವೇ ಕಾಂಗ್ರೆಸ್ ಸರ್ಕಾರದ ಮುಖ್ಯ ಗುರಿ ಆಗುತ್ತಿದೆ.‌ ಅಲ್ಪಸಂಖ್ಯಾತರ ತುಷ್ಟೀಕರಣ ಆಗಿದ್ರಿಂದ ಅಲ್ಲಿಲ್ಲಿ ಗಲಭೆಗಳು, ಪ್ಯಾಲಿಸ್ಟೈನ್ ಧ್ವಜ ಹಾರಡುತ್ತಿವೆ ಎಂದರು.‌

ಪ್ಯಾಲಿಸ್ಟೈನ್ ರಾಷ್ಟ್ರ ಧ್ವಜ ಹಾರಾಟ ವಿಚಾರವಾಗಿ ಮಾತನಾಡಿದ ಅವರು, ಇವರಿಗೆ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಯ ಭಯಭೀತಿ ಇಲ್ಲ.‌ ರಾಜ್ಯದಲ್ಲಿ ಏನು ಬೇಕಾದ್ರೂ ಮಾಡಿದ್ರೆ ನಡೆಯುತ್ತೆ ಅನೋ  ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಇವರು ಪ್ಯಾಲಿಸ್ಟೈನ್ ಧ್ವಜವೂ ಹಾರಿಸುತ್ತಾರೆ, ಪಾಕಿಸ್ತಾನದ ಧ್ಚಜವೂ ಹಾರಿಸುತ್ತಾರೆ. ಈ ರೀತಿಯ ವಿದೇಶೀ ಧ್ವಜ ಹಾರಿಸುವ ಪ್ರವೃತ್ತಿಗೆ ಕಾರಣವೇ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಹಾಳಾಗಿದೆ. ದೇಶ ದ್ರೋಹದ ಕೆಲಸವನ್ನು ಮಾಡೋರಿಗೆ ಕಠಿಣ ಕ್ರಮವಾಗಿಲ್ಲ, ಹಾಗಾಗಿ ಈ ರೀತಿ ಘಟನೆಗಳು ಆಗುತ್ತಿದೆ ಎಂದರು.

ದಾವಣಗೆರೆಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಕಲ್ಲು ತೂರಾಟ ವಿಚಾರವಾಗಿ ಮಾತನಾಡಿದ ಅವರು, ಇದು ದಾವಣಗೆರೆ ಅಷ್ಟೆ ಅಲ್ಲ, ಹಿಂದೆ ವಿರೇಂದ್ರ ಪಾಟೀಲ್ ಸಿಎಂ ಇದ್ದಾಗಲೂ ದಾವಣಗೆರೆ, ರಾಮನಗರದ ತಿಂಗಳಗಂಟಲೇ ನಡೆಯುತ್ತಿತ್ತು. ನಂತರ ಅವರನ್ನ ಕೆಳಗಿಳಿಸುವ ಕೆಲಸವು ಆಯ್ತು ಒಟ್ಟಾರೆ ಕಾಂಗ್ರೆಸ್ ಸರ್ಕಾರದ ಬಂದಾಗ ಈ ರೀತಿಯ ಕೃತ್ಯಗಳು ಆಗುತ್ತಾ ಬಂದಿವೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button