Kannada NewsKarnataka News

ಖಾಸಗಿ ಆರೋಗ್ಯಸೇವಾ ಘಟಕಗಳಿಗೆ ಮಾನ್ಯತೆಯ ದೃಢೀಕರಣ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕ ಸ್ಟೇಟ್ ಅಬ್‌ಸ್ಟೆಟ್ರಿಕ್ಸ್ ಅಂಡ್ ಗೈನಾಕಾಲಜಿಕಲ್ ಅಸೋಸಿಯೇಷನ್ (ಕೆಎಸ್‌ಒಜಿಎ) ಮತ್ತು ಮಾನ್ಯತಾ, ತಾಯ್ತನದ ನಿರೀಕ್ಷೆಯಲ್ಲಿರುವವರಿಗೆ ಆರೋಗ್ಯಸೇವೆಯ ಗುಣಮಟ್ಟ ಹೆಚ್ಚಿಸಲು ಒಗ್ಗೂಡಿವೆ.

ಗುರಿಯನ್ನು ಸಾಧಿಸಲು ಸ್ಥಳದಲ್ಲೇ ತರಬೇತಿ ಅಥವಾ ಕೇಂದ್ರೀಕೃತ ತರಬೇತಿಗಳನ್ನು ಖಾಸಗಿ ಆರೋಗ್ಯಸೇವಾ ಪೂರೈಕೆದಾರರು ಮತ್ತು ವೈದ್ಯ ಸಹಾಯಕ ಸಿಬ್ಬಂದಿಗೆ ಮಗುವಿನ ಜನನ ಮತ್ತು ನಂತರದಲ್ಲಿ ಗುಣಮಟ್ಟ ಹಾಗೂ ಗೌರವಯುತ ಆರೈಕೆ ನೀಡಲು ಅಗತ್ಯವಿರುವ ಮಾನದಂಡಗಳ ತರಬೇತಿ ನೀಡುತ್ತದೆ.

ಮಾನ್ಯತಾದ ರಾಷ್ಟ್ರೀಯ ಸಂಯೋಜಕರೂ, ಆರ್ಟಿಸ್ಟ್ (ಏಷ್ಯನ್ ರೀಸರ್ಚ್ ಅಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್‌ಫರ್) ಸಿಇಒ ಡಾ.ಹೇಮಾ ದಿವಾಕರ್ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಮಾನ್ಯತಾ ಈಗಾಗಲೇ 4 ರಾಜ್ಯಗಳ 25 ಜಿಲ್ಲೆಗಳ 1800 ಆರೋಗ್ಯಸೇವಾ ಪೂರೈಕೆದಾರರಿಗೆ ಮಾನ್ಯತೆ ನೀಡಿದ್ದು ಇದರ ಮೂಲಕ 11,117,070 ಭಾರತೀಯರ ಜೀವನಗಳನ್ನು ಸ್ಪರ್ಶಿಸಿದೆ. ಕರ್ನಾಟಕದಲ್ಲಿ ಈ ಉಪಕ್ರಮದ ಮೂಲಕ 5 ಲಕ್ಷ ಮಹಿಳೆಯರನ್ನು ತಲುಪುವ ನಿರೀಕ್ಷೆ ಇದೆ ಎಂದರು.

ಕೆಎಸ್‌ಒಜಿಎ 8 ಸೊಸೈಟಿಗಳಿಂದ 20 ಸೊಸೈಟಿಗಳ ಸಂಘಟನೆಯವರೆಗೆ ಬಹುದೂರ ಸಾಗಿ ಬಂದಿದೆ. ಇದು ವೃತ್ತಿನಿರತ ಸ್ತ್ರೀರೋಗ ತಜ್ಞರಿಗೆ ಜ್ಞಾನ ನೀಡುತ್ತದೆ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಯುವ ಗೈನಕಾಲಜಿಸ್ಟ್‌ಗಳಿಗೆ ಅವರ ಕೌಶಲ್ಯ ಮತ್ತು ಪ್ರತಿಭೆ ಅಭಿವೃದ್ಧಿಪಡಿಸಿಕೊಳ್ಳಲು ನೆರವಾಗುತ್ತದೆ. ಮಾನ್ಯತಾದೊಂದಿಗೆ ಕೆಎಸ್‌ಒಜಿಎ ಸಹಯೋಗ ಸರ್ಕಾರ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ವಿಶ್ವಾಸದ ಸಮಸ್ಯೆಗಳನ್ನು ನಿವಾರಿಸುವ ಭರವಸೆ ಹೊಂದಿದೆ, ಮತ್ತು ತಾಯಂದಿರಿಗೆ ಅತ್ಯುತ್ತಮ ಆರೈಕೆ ನೀಡುವ ಮೂಲಕ ಕರ್ನಾಟಕದ ಸಣ್ಣ ಖಾಸಗಿ ಆರೋಗ್ಯಸೇವಾ ಘಟಕಗಳಲ್ಲಿಯೂ ಗುಣಮಟ್ಟದ ಪ್ರಸೂತಿ ಆರೈಕೆ ಸೇವೆಗಳನ್ನು ಒದಗಿಸುತ್ತದೆ ಎಂದರು.

ಭಾರತವು ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಮಾತೃ ಮರಣಗಳನ್ನು ದಾಖಲಿಸುತ್ತಿದೆ ಮತ್ತು ಕರ್ನಾಟಕದಲ್ಲಿ ಈ ಪ್ರಮಾಣ ಈಗ ಶೇ.50ರಷ್ಟು ಕುಸಿದಿದೆ. ಆದಾಗ್ಯೂ ಕಳೆದ ವರ್ಷ 2,500 ಮಹಿಳೆಯರು ಗರ್ಭಧಾರಣೆ ಸಂಬಂಧದ ಸಮಸ್ಯೆಗಳಿಂದ ಮರಣಪಟ್ಟಿದ್ದಾರೆ ಎಂದು ಅವರು ಹೇಳಿದರು.

  ಖಾಸಗಿ ಪ್ರಸೂತಿ ಸೇವೆ ನೀಡುವವರನ್ನು ತೊಡಗಿಸಿಕೊಳ್ಳುವ ಮೂಲಕ ತಾಯಂದಿರ ಆರೈಕೆಯನ್ನು ಸುಧಾರಿಸುವ ಅಗತ್ಯವಿದೆ ಮತ್ತು ಅವರು ಪುರಾವೆ ಆಧರಿತ ಚಿಕಿತ್ಸೆಯ ಮಾನದಂಡಗಳಿಗೆ ಅನುಗುಣವಾಗಿದ್ದಾರೆಯೇ ಎಂದು ದೃಢೀಕರಿಸಿಕೊಳ್ಳಬೇಕಾಗಿದ್ದು ಶಿಶು ಜನನವನ್ನು ಸುರಕ್ಷಿತ ಅನುಭವವನ್ನಾಗಿಸಲು ನೆರವಾಗಬೇಕಿದೆ ಎಂದರು.

ಈ ಉಪಕ್ರಮ ಕುರಿತು ಮತ್ತಷ್ಟು ಬೆಳಕು ಚೆಲ್ಲುವ ನಿಟ್ಟಿನಲ್ಲಿ ಡಾ.ಹೇಮಾ, ಆರ್ಟಿಸ್ಟ್ ಅನುಷ್ಠಾನದ ಪಾಲುದಾರನಾಗಿ ನಾವು ಯಾವುದೇ ಮಹಿಳೆಯೂ ಹೆರಿಗೆಯ ಸಮಯದಲ್ಲಿ ಮರಣ ಹೊಂದಬಾರದು ಎನ್ನುವ ನಮ್ಮ ಗುರಿಯು ಕರ್ನಾಟಕದಲ್ಲಿ ಸದ್ಯದಲ್ಲೇ ವಾಸ್ತವವಾಗಲಿದೆ ಎಂದರು.

ಕೆಎಸ್‌ಒಜಿಎ ಅಧ್ಯಕ್ಷರಾಗಿ ಆಯ್ಕೆಯಾದ ಬೆಳಗಾವಿಯ ಡಾ.ಶೋಭನಾ ಪಟ್ಟೇದ್  ಮಾತನಾಡಿ, ಇದು ಕೆಎಸ್‌ಒಜಿಎ ಎಲ್ಲ ಇತರೆ ಸೊಸೈಟಿಗಳಿಗೂ  ಮಾನದಂಡವಾಗಲು ಶ್ರಮಿಸುತ್ತೇವೆ. ಸಾರ್ವಜನಿಕ, ಖಾಸಗಿ ಪಾಲುದಾರಿಕೆಗಳ ಮೂಲಕ ಮತ್ತು ತಂತ್ರಜ್ಞಾನದ ಗರಿಷ್ಠ ಬಳಕೆಯ ಮೂಲಕ ಆರೋಗ್ಯಸೇವಾ ಪೂರೈಕೆದಾರರಿಗೆ ಸತತವಾಗಿ ಶಿಕ್ಷಣವನ್ನು ಸೆಂಟರ‍್ಸ್ ಆಫ್ ಎಕ್ಸೆಲೆನ್ಸ್, ಡಿಜಿಟಲ್ ಮೀಡಿಯಾ ಮೂಲಕ ಮತ್ತು ಸತತ ಮೇಲ್ವಿಚಾರಣೆಗೆ ಅವಕಾಶ ನೀಡುತ್ತದೆ. ಆರೈಕೆ ಮತ್ತು ವ್ಯಾಪ್ತಿಯಲ್ಲಿ ಸುಧಾರಣೆಗಳು ಮತ್ತು ಸಾರ್ವತ್ರಿಕತೆಯಿಂದ ಸಮಾಜದ ಎಲ್ಲ ವರ್ಗಗಳ ಹೆಚ್ಚು ಜನರು ಅನುಕೂಲ ಪಡೆಯಲಿದ್ದಾರೆ ಎಂದರು.

 ಮಾನ್ಯತಾ ಕುರಿತು ಮಾಹಿತಿ:

ಮಾನ್ಯತಾ ಖಾಸಗಿ ಆರೋಗ್ಯಸೇವಾ ಪೂರೈಕೆದಾರರು ಮತ್ತು ವೈದ್ಯ ಸಹಾಯಕ ಸಿಬ್ಬಂದಿಗೆ ಗುಣಮಟ್ಟ ಮತ್ತು ಮಗುವಿನ ಜನನ ಮತ್ತು ನಂತರ ಗೌರವಯುತ ಆರೈಕೆ ನೀಡಲು ಅಗತ್ಯವಾದ ಸ್ಥಳದಲ್ಲಿನ ತರಬೇತಿ ಅಥವಾ ಕೇಂದ್ರೀಕೃತ ತರಬೇತಿ ನೀಡುತ್ತದೆ.

ಮಾನ್ಯತಾ ಫೆಡರೇಷನ್ ಆಫ್ ಅಬ್‌ಸ್ಟೆಟ್ರಿಕ್ ಅಂಡ್ ಗೈನಕಾಲಜಿಕಲ್ ಸೊಸೈಟೀಸ್ ಆಫ್ ಇಂಡಿಯಾ (ಫೊಗ್ಸಿ) ಪ್ರಸವಪೂರ್ವ, ಪ್ರಸೂತಿ ಮತ್ತು ಪ್ರಸವಾನಂತರದ ಅವಧಿಯಲ್ಲಿ 16 ಪ್ರಮುಖ ಚಿಕಿತ್ಸೆಯ ಮಾನದಂಡಗಳನ್ನು ಅಭಿವೃದ್ಧಿಪಡಿಸಿದೆ. ಮಾನ್ಯತಾ ಗುಣಮಟ್ಟದ ಹೆಗ್ಗುರುತಾಗಿದ್ದು ಇದು ಅತ್ಯುತ್ತಮ ತರಬೇತಿ ಹೊಂದಿದ ಸಿಬ್ಬಂದಿಯಿಂದ ಉತ್ತಮ, ಗೌರವಯುತ ಮತ್ತು ಸುರಕ್ಷಿತ ಅನುಭವವನ್ನು ಅವರ ಮಗುವಿನ ಜನನ ಕಾಲಕ್ಕೆ ನೀಡುತ್ತದೆ.

ಫೊಗ್ಸಿ ಸಂಪರ್ಕ ಪಡೆದ ಕ್ಯೂಐ ಸ್ಟ್ರಕ್ಚರ್‌ಗಳು ತರಬೇತಿ, ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುತ್ತಿದ್ದು ಅವು ಗುಣಮಟ್ಟಕ್ಕೆ ಹೊಂದಿಕೊಂಡಿರುವ ಮತ್ತು ನಂತರದ ಮಾನ್ಯತೆಯನ್ನು ಪಡೆದಿರುವುದನ್ನು ದೃಢೀಕರಿಸುತ್ತದೆ.
ಜೆಪಿಗೋ  ಕ್ಯೂಐ ಹಬ್ಸ್ ಅನುಷ್ಠಾನದ ಮೂಲಕ ಈ ಉಪಕ್ರಮಕ್ಕೆ ತಾಂತ್ರಿಕ ಬೆಂಬಲ ನೀಡುತ್ತದೆ. ಈ ಕ್ಯೂಐ ಹಬ್ಸ್ ಅನ್ನು ಫೊಗ್ಸಿ ನ್ಯಾಷನಲ್ ಪ್ರೋಗ್ರಾಮ್ ಮೂಲಕ ನಿರ್ವಹಿಸಲಾಗುತ್ತದೆ.
ಮ್ಯಾನೇಜ್‌ಮೆಂಟ್ ಯೂನಿಟ್ (ಎನ್‌ಪಿಎಂಯು), ಫೊಗ್ಸಿಯ ರೆಕ್ರೂಟ್ ಎಂಪ್ಯಾನಲ್ಡ್ ಲೀಡ್ ಅಸೆಸರ‍್ಸ್ ಈ ಸೌಲಭ್ಯಗಳ ಗುಣಮಟ್ಟಕ್ಕಾಗಿ ಪರಿಶೀಲಿಸುತ್ತಾರೆ ಮತ್ತು ಮಾನ್ಯತೆಯನ್ನು ಶಿಫಾರಸು ಮಾಡುತ್ತಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button