Belagavi NewsBelgaum NewsKannada NewsKarnataka News

*ಮೂಲಭೂತ ಸೌಕರ್ಯಕ್ಕಾಗಿ ತಾಲೂಕು ಪಂಚಾಯತಿಗೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಥಣಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಓಣಿಯಲ್ಲಿ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು ಹಾಗೂ ಓಣಿ ಯಲ್ಲಿರುವ ಸಮುದಾಯ ಭವನ ನವೀಕರಣ ಹಾಗೂ ವಿದ್ಯುತ್ ಬಲ್ಪಗಳು ಇನ್ನಿತರ ಸೌಲಭ್ಯಗಳನ್ನು  ಕಲ್ಪಿಸುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಾನಂದ ಕಲ್ಲಾಪುರ್ ಅವರಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಥಣಿ ತಾಲೂಕಾ  ಸಂಘಟನೆಯ ಸಂಚಾಲಕ (ಅಧ್ಯಕ್ಷ ) ಹಾಗೂ ಕಾರ್ಯಕರ್ತರ ಬಳಗದ ವತಿಯಿಂದ  ಮನವಿ ಸಲ್ಲಿಸಿದರು.

ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರದಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಸಮ್ಮುಖದಲ್ಲಿ ಮನವಿ ಸಲ್ಲಿಸಲಾಯಿತು.

ನಂತರ ತಾಲೂಕ್ ಅಧ್ಯಕ್ಷರಾದ ರವಿ ಕಾಂಬಳೆ ಅವರು ಮಾತನಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಓಣಿಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ಅಲ್ಲಿನ ಜನರು ತೊಂದರೆ ಅನುಭವಿಸಬೇಕಾಗಿದೆ  ಮುಖ್ಯವಾಗಿ ಶುದ್ಧ  ಕುಡಿಯುವ ನೀರು. ರಸ್ತೆಗಳು. ವಿದ್ಯುತ್ ಬಲ್ಪಗಳು . ಕೆಲವೊಂದು ಗ್ರಾಮಗಳಲ್ಲಿ ಅಂಬೇಡ್ಕರ್ ಭವನಗಳು ಸ್ಥಿಥಿಲಾ ಅವಸ್ಥೆಯಲ್ಲಿವೆ ಅವುಗಳನ್ನು ಮರು ರಿಪೇರಿ ಅಥವಾ ಹೊಸ ಕಟ್ಟಡಗಳ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. 

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಜಿಲ್ಲಾ ಸಂಘಟನೆ ಸಂಚಾಲಕ ಸಂಜಯ ತಳವಳಕರ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಮೂಲಭೂತ ಸೌಕರ್ಯಗಳು ಇಲ್ಲದಿರುವುದರಿಂದ ಬೇಜಾರುತ ಸಂಗತಿ ಎಂದರು ಅಲ್ಲಿನ ಓಣಿಯ ತಗ್ಗು ಗುಂಡಿಗಳು ಬಿದ್ದು ಮಳೆ ನೀರು ನಿಂತು ರಸ್ತೆಯು ಹಾಳಾಗಿದೆ. ವಿದ್ಯುತ್ ಬಲ್ಪಗಳನ್ನು ಅಳವಡಿಸುವುದು ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದರು.

ನಂತರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಾನಂದ ಕೊಲ್ಲಾಪುರವರು ಮನವಿ ಸ್ವೀಕರಿಸಿ ಮಾತನಾಡಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ಗಮನಿಸಿ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ತಾಲೂಕಾ ಸಂಚಾಲಕ ರವಿ ಕಾಂಬಳೆ, ಚಿಕ್ಕೋಡಿ ವಿಭಾಗೀಯ ಸಂಚಾಲಕ  ಶ್ರೀಕಾಂತ ಆಲಗೂರ್ , ಜಿಲ್ಹಾ ಸಂಘಟನೆ ಸಂಚಾಲಕ ಕುಮಾರ ಬನಸೋಡೆ, ಮಚ್ಚೆದ್ರ ಖಾoಡೇಕರ್, ಅಶೋಕ ಚೌಗಲಾ, ಚೇತನಾ ಕನ್ನಾಳ, ದಶರಥ ಕಾಂಬಳೆ, ಪಾಂಡು ಕಾಂಬಳೆ, ಮಹಾಂತೇಶ ಬನಸೋಡೆ, ದತ್ತು ಕಾಂಬಳೆ, ಅಶೋಕ ನಿಡೋಣಿ, ಪಂಡಿತ ಕಾಂಬಳೆ, ಸದಾಶಿವ ಬನಸೋಡೆ, ರವಿ ಕುರಣೆ, ಬಾಲಕೃಷ್ಣ ಭಜೇಂತ್ರಿ, ಅಶೋಕ ಗೇರಡಿ, ಧನಪಾಲ ಕಾಂಬಳೆ, ಕಿರಣ ವಾಯದಂಡೆ, ರಾಜು ಕಾಂಬಳೆ, ಗೊರಖನಾಥ ಭಂಡಾರೆ, ಲಕ್ಕಪ್ಪ ಕಾಂಬಳೆ, ಮಾಯಪ್ಪ ದೊಡಮನಿ, ನಾಗರಾಜ ಕಾಂಬಳೆ ( ಯಲ್ಲಿಹಡಲಗಿ ) ಅಶೋಕ ಕಾಂಬಳೆ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button