Belagavi NewsBelgaum NewsBusiness

*ಬೀರೇಶ್ವರ ಸಹಕಾರಿ ಸಂಸ್ಥೆಯ ಸದಸ್ಯರು ಹಾಗೂ ಸಿಬ್ಬಂದಿಗಳಿಗೆ ಗುಡ್ ನ್ಯೂಸ್*

ಪ್ರಗತಿವಾಹಿನಿ ಸುದ್ದಿ: ಸಹಕಾರಿಯ ಸದಸ್ಯರ ಸಹಕಾರ ಹಾಗೂ ಸಿಬ್ಬಂದಿಗಳ ಕಠಿಣ ಪರಿಶ್ರಮದಿಂದ  ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ (ಬಹುರಾಜ್ಯ)ಯು ಅತ್ಯುತ್ತಮ ಆರ್ಥಿಕ ಚಟುವಟಿಕೆ ಹೊಂದಿದ್ದು, ದೀಪಾವಳಿ ಹಾಗೂ ದಸರಾ ನಿಮಿತ್ತ ಸದಸ್ಯರಿಗೆ ಶೇ.12 ಲಾಭಾಂಶ ಹಾಗೂ ಸಿಬ್ಬಂದಿಗೆ ಶೇ.10 ರಷ್ಟು ಬೊನಸ್ ನೀಡಲಾಗುವುದು  ಎಂದು ಸೊಸೈಟಿಯ ಅಧ್ಯಕ್ಷ ಜಯಾನಂದ ಜಾಧವ  ಹೇಳಿದರು.

ಅವರು ಗುರುವಾರ ಚಿಕ್ಕೋಡಿ ತಾಲೂಕಿನ  ಗಡಿಗೆ ಹೊಂದಿಕೊಂಡಿರುವ ಯಕ್ಸಂಬಾ ಪಟ್ಟಣದ ಬೀರೇಶ್ವರ ಅಂತರಾಜ್ಯ ಸಹಕಾರಿ ಸಂಸ್ಥೆಯ  ಮುಖ್ಯ ಕಚೇರಿಯ ಸಭಾಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕೋಡಿ ಸಂಸದ ಹಾಗೂ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಅವರ ನೇತೃತ್ವ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಹಕಾರಿಯ ಲಾಭಾಂಶವನ್ನು ಸದಸ್ಯರ ಖಾತೆಗಳಿಗೆ ಜಮೆ ಮಾಡಲಾಗಿದ್ದು ಸದಸ್ಯರು ತಾವಿರುವ ಶಾಖೆಗಳಲ್ಲಿ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಿ ಲಾಭಾಂಶ ಪಡೆದುಕೊಳ್ಳಬಹುದು. 

ಸಹಕಾರಿಯು 212 ಶಾಖೆಗಳಲ್ಲಿ ೩.೮೯,೦೯೬ ಲಕ್ಷ  ಸದಸ್ಯರಿದ್ದು, ೩೩.೭೬ ಕೋಟಿ ಶೇರು ಬಂಡವಾಳದೊAದಿಗೆ ೩೯೨೫ ಕೋಟಿ ಠೇವು ಹೊಂದಿ  ೨೯೮೯ ಕೋಟಿ ಸಾಲ ವಿತರಿಸಿ ೪೫೫೬ ಕೋಟಿ ರೂಗಳ ದುಡಿಯುವ ಬಂಡವಾಳದೊಂದಿಗೆ  ಅಗ್ರಮಾನ್ಯ ಸಹಕಾರಿಯಾಗಿ ರಾಜ್ಯ ಹಾಗೂ ಅಂತಾರಾಜ್ಯದಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ೪೦.೫೫ ಕೋಟಿ ಲಾಭ ಗಳಿಸಿದೆ ಎಂದರು.

ಸೊಸಾಯಟಿಯು ಸಂಸ್ಥಾಪಕರ ಹುಟ್ಟು ಹಬ್ಬದ ದಿನವಾದ ಅ.೮ ರಂದು ಕರ್ನಾಟಕದಲ್ಲಿ ೩, ಮಹಾರಾಷ್ಟದಲ್ಲಿ ೨ ಹಾಗೂ ಗೋವಾದಲ್ಲಿ ೨ ಶಾಖೆಗಳನ್ನು ಪ್ರಾರಂಭಿಸಲಿದೆ ಹಾಗೂ ೧೧ ಶಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಭೂಮಿ ಪೂಜೆ ನೇರವೆರಿಸಿದೆ.ಬೀರೇಶ್ವರ ಸಂಸ್ಥೆಯ ಮುಖ್ಯ ಕಚೇರಿ ಮುಂಭಾಗದ ಮುಖ್ಯ ದ್ವಾರದ ಹತ್ತಿರ ದಿ.೭ ರಂದು ಭಾರತದ ನಂ ೧ ಬ್ರ್ಯಾಂಡ್ ನಾದಬ್ರಹ್ಮ ಇಡ್ಲಿ ಹೋಟೆಲ್ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿದ್ದು ಇದರಿಂದ ಸಹಕಾರಿಗೆ ಬರುವ ಗ್ರಾಹಕರಿಗೆ ಹಾಗೂ ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಸಿದ್ರಾಮ ಗಡದೆ, ಅಪ್ಪಾಸಾಹೇಬ ಜೊಲ್ಲೆ,ಜ್ಯೋತಿಪ್ರಸಾದ ಜೊಲ್ಲೆ, ಯಾಶಿನ್ ತಾಂಬೋಳೆ, ಬೀಪಿನ್ ದೇಶಪಾಂಡೆ,ಬಸಪ್ಪ ಗುರವ, ಸಿದ್ದವಿರ ಖಜ್ಜನ್ನವರ,ನಿಭಾವರಿ ಖಾಂಡಕೆ,ಸಾವಿತ್ರಿ ತಂಗಡೆ, ಆನದ ಪಾಟೀಲ,ಸುಭಾಷ ಕದಮ್,ಅಣ್ಣಾಸಾಹೇಬ ಚೌಗಲೆ,

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಚೌಗಲಾ, ಮಹಾದೇವ ಮಂಗಾವತೆ, ರಮೇಶ ಕುಂಬಾರ,ಸುರೇಶ ಮಾನೆ,ಶಿವಪುತ್ರ ಡಬ್ಬಣ್ಣವರ, ಸತೀಶ ಲಟ್ಟೆ, ಅಪ್ಪು ಕಲಬುರಗಿ ಉಪಸ್ಥಿತರಿದ್ದರು.

  https://pragativahini.com/the-rjd-leader-was-shot-at-in-the-morning/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button