Belagavi NewsBelgaum NewsKannada NewsKarnataka NewsLatest

ಪೋಕ್ಸೋ ಪ್ರಕರಣ: 20 ವರ್ಷ ಜೈಲು ಶಿಕ್ಷೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : 2016ರಲ್ಲಿ ಬಾಲಕಿಯೋರ್ವಳನ್ನು ಅಪಹರಿಸಿ, ಲೈಂಗಿಕ ಸಂಪರ್ಕ ಮಾಡಿದ ಅಪರಾಧಿಗೆ ಬೆಳಗಾವಿಯ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಸಂಗಮ ಕೃಷ್ಣಾತ ನಿಕಾಡೆ (ಸಾ: ಕುರ್ಲಿ ತಾ. ನಿಪ್ಪಾಣಿ) ಈತನು ಅಪ್ರಾಪ್ತ ವಯಸ್ಸಿನವಳು ಎಂದು ಗೊತ್ತಿದ್ದರೂ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋದ ಬಗ್ಗೆ ಅಪರಾಧ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಅಪರಾದ ಸಂಖ್ಯೆ: 168/2016 ಕಲಂ:366 (ಎ), ಐಪಿಸಿ ಮತ್ತು ಕಲಂ:12 ಪೋಕ್ಷೋ -2012 ನೇದ್ದರಡಿಯಲ್ಲಿ ದಿನಾಂಕ:23-07-2016 ರಂದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ತನಿಖೆಯಲ್ಲಿ ಅಪಹರಣಕ್ಕೊಳಗಾದ ನೊಂದ ಅಪ್ರಾಪ್ತ ಬಾಲಕಿಯನ್ನು ಆರೋಪಿ ಸಂಗಮ ಕೃಷ್ಣಾತ ನಿಕಾಡೆ ಅಪಹರಿಸಿಕೊಂಡು ಹೋಗಿದ್ದ. ನಂತರ ದಿನಾಂಕ: 06/09/2016 ರಂದು ಕೋಲ್ಲಾಪುರ ಬಸ್ ನಿಲ್ದಾಣದಲ್ಲಿ ಇಬ್ಬರನ್ನೂ ಪತ್ತೆ ಹಚ್ಚಲಾಗಿತ್ತು. ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಮಹಿಳಾ ಪಿ.ಎಸ್.ಐ ಕಡೆಯಿಂದ ಬಾಲಕಿಯ ಹೇಳಿಕೆ ಮಾಡಿಸಿದ್ದು, ಅದರಲ್ಲಿ ಅವಳು ಆರೋಪಿ ಸಂಗಮ ಕೃಷ್ಣಾತ ನಿಕಾಡೆ ಇವನು ದಿನಾಂಕ:14/07/2016 ರಂದು ನಮ್ಮೂರಿಂದ ಕರೆದುಕೊಂಡು ಕೋಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಆಡೂರ ಗ್ರಾಮಕ್ಕೆ ಹೋಗಿ ಅಲ್ಲಿ ಒಂದು ಬಾಡಿಗೆ ಮನೆ ಮಾಡಿ ಇಟ್ಟು ಹಲವು ಬಾರಿ ನನ್ನೊಂದಿಗೆ ಲೈಂಗಿಕ ಸಂಪರ್ಕ ಮಾಡಿದ್ದಾನೆ ಎಂದು ಹೇಳಿಕೆಯನ್ನು ನೀಡಿದ್ದಳು.

ನೊಂದ ಬಾಲಕಿಯ ಹೇಳಿಕೆಯ ಮೇರೆಗೆ ಕಲಂ 376 (1) (2) (ಐ) ಐಪಿಸಿ ಮತ್ತು 4, 6 ಪೋಕ್ಸ್‌ ಆ್ಯಕ್ಟ-2012 ನೇದ್ದವುಗಳನ್ನು ಅಳವಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ತನಿಖೆಯನ್ನು ಕೈಕೊಂಡು ದೋಷಾರೋಪಣಾ ಪತ್ರವನ್ನು 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಬೆಳಗಾವಿ ರವರಿಗೆ ಸಲ್ಲಿಸಲಾಗಿತ್ತು.

ಪ್ರಕರಣವು 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಎಪ್.ಎಸ್.ಟಿ-1 ಬೆಳಗಾವಿ ರವರ ಎಸ್.ಸಿ ನಂ: 412/2016 ನೇದ್ದರಲ್ಲಿ ವಿಚಾರಣೆಯಾಗಿ, ಸಂಗಮ ಕೃಷ್ಣಾತ ನಿಕಾಡೆ ಈತನಿಗೆ ದಿನಾಂಕ :03/10/2024 ರಂದು 20 ವರ್ಷಗಳ ಜೈಲು ಶಿಕ್ಷೆ ಮತ್ತು 10,000/- ರೂಪಾಯಿ ದಂಡ ಮತ್ತು ನೊಂದ ಬಾಲಕಿಗೆ 1,00,000/-ಪರಿಹಾರ ನೀಡುವಂತೆ ನ್ಯಾಯಾಧೀಶರಾದ ಸಿ.ಎಮ್.ಪುಷ್ಪಲತಾ ತೀರ್ಪು ನೀಡಿದ್ದಾರೆ.

ಪ್ರಕರಣವನ್ನು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಲ್.ವಿ ಪಾಟೀಲ ರವರು ವಾದ ಮಂಡಿಸಿದ್ದು ಮತ್ತು ಪ್ರಕರಣದ ತನಿಖೆಯನ್ನು ಕಿಶೋರ ಭರಣಿ ಸಿ.ಪಿ.ಐ. ಮತ್ತು ಎಮ್.ಬಿ. ಬಿರಾದಾರ ಪಿ.ಎಸ್.ಐ ನಿಪ್ಪಾಣಿ ಗ್ರಾಮೀಣ ಡಿ.ಬಿ ಕೋತ್ವಾಲ್ .ಎ.ಎಸ್.ಐ ಶ್ರೀ ಕೆ.ಡಿ ಹಿರೇಮಠ ಸಿ.ಎಚ್.ಸಿ 1732 ಇವರು ಪ್ರಕರಣದ ತನಿಖೆಯನ್ನು ಕೈಕೊಂಡಿದ್ದರು.

ಪ್ರಕಣದಲ್ಲಿಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ:ಭೀಮಾಶಂಕರ ಎಸ್. ಗುಳೇದ, ಹೆಚ್ಚುವರಿ ಎಸ್ಪಿಗಳಾದ ಶೃತಿ ಎನ್.ಎಸ್. ಹಾಗೂ ರಾಮಗೊಂಡ ಬಿ. ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button