Belagavi NewsBelgaum NewsPolitics

*ಈ ಚುನಾವಣೆ ಫಲಿತಾಂಶ ಬೇರೆ ರಾಜ್ಯಗಳ ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆ: ಜಗದೀಶ್ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ: ಎರಡೂ ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಹೊರ ಬರುತ್ತಿದೆ. ಹರಿಯಾಣಾದಲ್ಲಿ ಬಿಜೆಪಿ ಸರಕಾರ ರಚಿಸುವಲ್ಲಿ ದಾಪುಗಾವಲು ಹಾಕುತ್ತಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು.


ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಎಕ್ಸಿಟ್ ಫೋಲ್ ಫಲಿತಾಂಶದ ವ್ಯವಸ್ಥೆ ತೆಗೆದು ಹಾಕುವುದು ಉತ್ತಮ. ಹರಿಯಾಣದಲ್ಲಿ ಎಕ್ಸಿಟ್ ಫೋಲ್ ಕಾಂಗ್ರೆಸ್ ಪರವಾಗಿ ಬಂದಿತ್ತು. ಆದರೆ ನೈಜ ಫಲಿತಾಂಶ ಬೇರೆ ಬಂದಿದೆ ಎಂದರು‌.


ಹರಿಯಾಣ ಚುನಾವಣೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಅನುಮಾನ ಮಾಡುವುದು ಸರಿಯಲ್ಲ. ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಪರವಾಗಿತ್ತು. ಬಳಿಕ ಬಿಜೆಪಿ ಪರವಾಗಿ ಬಂದಿದೆ ಎನ್ನುವ ಆರೋಪ ಮಾಡುವುದು ಸರಿಯಲ್ಲ ಎಂದರು.


ಮುಂಬರುವ ಜಾರ್ಖಂಡ್, ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಇದೇ ಫಲಿತಾಂಶ ಬರುವುದು ನಿಶ್ಚಿತ. ದೇಶದ ನಾಯಕತ್ವವನ್ನು ಜನರು ಮೆಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಬೇರೆ ಬೇರೆ ರಾಜ್ಯದ ಚುನಾವಣೆಯ ಫಲಿತಾಂಶದ ಮೇಲೂ ಈ ಚುನಾವಣೆ ದಿಕ್ಸೂಚಿಯಾಗಲಿದೆ ಎಂದರು.


ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ತನ್ನ ಪ್ರಾಬಲ್ಯವನ್ನು ‌ಬಿಜೆಪಿ ಸಾಬೀತು ಮಾಡಿ ತೋರಿಸಿದೆ. ಜಮ್ಮು ಕಾಶ್ಮೀರದಲ್ಲಿ ಅತ್ಯಧಿಕ ಫಲಿತಾಂಶ ದಾಖಲೆ ಮಾಡಿದ್ದು ಪ್ರಧಾನಿ ನರೇಂದ್ರ ‌ಮೋದಿ ನೇತೃತ್ವದ ಕೇಂದ್ರ‌ ಸರಕಾರ ತೆಗೆದುಕೊಂಡ‌ ನಿರ್ಧಾರವನ್ನು ಎಲ್ಲರೂ ಸ್ವಾಗತಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಇಷ್ಟಾದರೂ ರಾಜೀನಾಮೆ ಕೊಡುವಲ್ಲಿ ಸಿದ್ದರಾಮಯ್ಯ ಹಿಂದೆ ಮುಂದೆ ನೋಡುತ್ತಿದ್ದಾರೆ. ಯಾವಾಗ ರಾಜೀನಾಮೆ ಕೊಡಲಿ ಎಂದು ದಿನಾಂಕ ನೋಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ಹೊರಗಡೆ ಸಿದ್ದರಾಮಯ್ಯ ಪರವಾಗಿ ಮಾತನಾಡುತ್ತಾರೆ. ಒಳಗಡೆ 10 ನಾಯಕರು ಸಿಎಂ ಆಗಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಇವರೇ ಸಿಎಂ ಆಗಿ ಮಾಡಿ ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿದರೆ ಅವರಿಗೆ ಗೌರವ ಸಿಗುತ್ತದೆ. ಇಲ್ಲದಿದ್ದರೇ, ಹೀನಾಯ ಪರಿಸ್ಥಿತಿ ಎದುರಾಗುತ್ತದೆ ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿ‌ ಸಿಎಂ ಕೂಗು ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಯಾರು ಆಗಬೇಕು ಅಂತಾ ವೈಯಕ್ತಿಕವಾದ ಚರ್ಚೆಗೆ ನಾನು ಹೋಗಲ್ಲ.ಎಂಟುತ್ತು ಜನರು ಈಗಾಗಲೇ ರೆಡಿ ಇದಾರೆ. ಅವರ ಪಾರ್ಟಿಗೆ ಬಿಟ್ಟ ವಿಚಾರ ಎಂದರು.


ಕಾಂಗ್ರೆಸ್ ನಲ್ಲಿ ಈಗ ಅಲ್ಲಿ ನೆಗೆಟಿವ್ ಆಗಿದೆ ಹೀಗಾಗಿ ಯಾವಾಗ ಬೇಕಾದರೂ ರಾಜೀನಾಮೆ ಕೊಡಬಹುದು. ನವೆಂಬರ್ ಇಲ್ಲಾ ಡಿಸೆಂಬರ್ ನಲ್ಲಿ ರಾಜೀನಾಮೆ ಆಗಬಹುದು. ಹೊಂದಾಣಿಕೆ ಆಗಿ ಮುಂದಿನ ಸಿಎಂ ಯಾರು ಅಂತಾ ನಿರ್ಧಾರ ಆದ ಮೇಲೆಯೂ ರಾಜೀನಾಮೆ ಆಗಬಹುದು. ಒಟ್ಟಿನಲ್ಲಿ ಅವರು ಸಿಎಂ ಸ್ಥಾನದಿಂದ ಇಳಿಯುವುದು ನಿಶ್ಚಿತ. ಅವರಾಗಿ ಇಳಿದು ಗೌರವುತವಾಗಿ ಹೊರ ಬಂದು ನಾನು ಹೇಳಿದವರನ್ನ ಮುಖ್ಯಮಂತ್ರಿ ಮಾಡಿ ಅಂದ್ರೆ ಗೌರವ ಸಿಗುತ್ತೆ. ಇಲ್ಲವಾದ್ರೇ ಅವರು ಹೇಳಿದವರು ಆಗುವುದಿಲ್ಲ. ಯಾರು ಯಾರೋ ಮುಖ್ಯಮಂತ್ರಿ ಆಗುತ್ತಾರೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button