Latest

*ಕದ್ದ ಕಾರು ಬಿಟ್ಟು ಕ್ಷಮಾಪಣಾ ಪತ್ರ ಬರೆದ ಕಳ್ಳ*

ಪ್ರಗತಿವಾಹಿನಿ ಸುದ್ದಿ: ಇಲ್ಲೊಬ್ಬ ಕಳ್ಳ ಕಾರನ್ನು ಕಳ್ಳತನ ಮಾಡಿ ಅರ್ಧದಲ್ಲೇ ಬಿಟ್ಟು ಹೋಗಿದ್ದಾನೆ. ಅಷ್ಟೇ ಅಲ್ಲದೇ, ಕಾರಿನ ಹಿಂಭಾಗದಲ್ಲಿ ಕ್ಷಮಾಪಣಾ ಪತ್ರವನ್ನು ಬರೆದು ಅಂಟಿಸಿದ್ದಾನೆ. ಕುತೂಹಲಕಾರಿ ಈ ಕಳ್ಳತನದ ಘಟನೆಯೂ ಎಲ್ಲರ ಗಮನ ಸೆಳೆದಿದೆ.

ರಾಜಸ್ಥಾನದ ಜೈಪುರ ರಸ್ತೆಯಲ್ಲಿರುವ ಗ್ರೀನ್ ಗಾರ್ಡನ್ ಹೊಟೇಲ್ ಬಳಿಯ ರಸ್ತೆಯಲ್ಲಿ ಸ್ಕಾರ್ಪಿಯೋ ನಿಂತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಕಾರನ್ನು ಪರಿಶೀಲಿಸಿದಾಗ ಈಕ್ಷಮಾಪಣೆ ಪತ್ರ ಸಿಕ್ಕಿದ್ದು ಅಚ್ಚರಿ ಮೂಡಿಸಿದೆ. ನಪಸರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದೆ. 

ಕಾರಿನ ಕನ್ನಡಿಗೆ ಅಂಟಿಸಲಾಗಿರುವ ಈ ಪತ್ರದಲ್ಲಿ ಕಾರು ಕಳ್ಳತನವಾಗಿದೆ ಎಂದು ಬರೆದಿದ್ದು, ಅದರೊಂದಿಗೆ ಕ್ಷಮಿಸಿ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಈ ಕದ್ದ ಸ್ಕಾರ್ಪಿಯೋವನ್ನು ದೆಹಲಿಯ ಪಾಲಂ ವಿಹಾರ್ ಪ್ರದೇಶದಿಂದ ಕಳವು ಮಾಡಲಾಗಿದೆ ಎನ್ನಲಾಗಿದೆ. ಚೀಟಿಯಲ್ಲಿ ಬರೆದಿದ್ದ ವಾಹನದ ನಂಬರ್ ಪರಿಶೀಲಿಸಿದ್ದಾರೆ. ವೇಳೆಯಲ್ಲಿ ಕಾರಿನ ಮಾಲೀಕರನ್ನು ಪತ್ತೆ ಹಚ್ಚಿದಾಗ ಆ.9ರಂದು ಮನೆ ಮುಂಭಾಗದಿಂದ ಕಳ್ಳತನವಾಗಿದ್ದ ವಾಹನವು ಪಾಲಂ ವಿಹಾರ್ ನಿವಾಸಿ ವಿನಯ್ ಕುಮಾರ್ ಅವರದ್ದು ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧ ಪಟ್ಟಂತೆ ವಿನಯ್ ಕುಮಾರ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ನಪಾಸರ್ ಠಾಣೆ ಪೊಲೀಸರು ಕಳ್ಳನು ಬಿಟ್ಟು ಹೋದ ಕಾರನ್ನು ವಶಕ್ಕೆ ಪಡೆದಿದ್ದು, ಈ ಅಮಾಯಕ ಕಳ್ಳನ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button