*ಸೆಮಿಕಂಡಕ್ಟರ್ ನ್ಯಾನೊತಂತ್ರಜ್ಞಾನದ ಕುರಿತು ಮೂರು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಕಾರ್ಯಕ್ರಮ ಉದ್ಘಾಟನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ಟೋಬರ್ 14, 2024 ರಂದು ಬೆಳಗಾವಿಯ ಕೆ. ಎಲ್. ಎಸ್. ಜಿ. ಐ. ಟಿ. ಕಾಲೇಜಿನಲ್ಲಿ ಸೆಮಿಕಂಡಕ್ಟರ್ ನ್ಯಾನೊತಂತ್ರಜ್ಞಾನದ ಕುರಿತು ಮೂರು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಕಾರ್ಯಕ್ರಮವನ್ನು ಭವ್ಯ ಸಮಾರಂಭದಲ್ಲಿ ಉದ್ಘಾಟಿಸಲಾಯಿತು.
ಕು.ಸಂಚಿತ ಅವರ ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕೆಎಲ್‌ಎಸ್ ಜಿಐಟಿಯ ಪ್ರಾಂಶುಪಾಲ ಡಾ. ಎಂ.ಎಸ್. ಪಾಟೀಲ ಸ್ವಾಗತ ಭಾಷಣದಲ್ಲಿ ಮುಂಬರುವ ಫಲಪ್ರದ ಜ್ಞಾನ ಯಾತ್ರೆಗೆ ಉತ್ಸಾಹ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ಗ್ಲೋಬಲ್ ಫೌಂಡರೀಸ್ ಉಪನಿರ್ದೇಶಕ ಡಾ. ವೈದ್ಯನಾಥನ್ ಟಿ. ಎಸ್. ಮತ್ತು ಗೌರವಾನ್ವಿತ ಅತಿಥಿ, ಪುಣೆ ಮೂಲದ ಎಸ್. ಪಿ. ಇ. ಎಲ್. ಟೆಕ್ನೋಲೊಜಿಸ ವ್ಯವಸ್ಥಾಪಕ ನಿರ್ದೇಶಕ ಡಾ.ರಾಜೇಂದ್ರ ಕುಮಾರ್ ಶರ್ಮಾ ಇವರ ಪರಿಚಯ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು. ಜೆ. ಎಂ. ಕಾರೇಕರ್ ಮಾಡಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಈ ಕಾರ್ಯಾಗಾರದ ಸಂಯೋಜಕರಾದ ಡಾ. ಆರ್. ಎಂ. ಕುಲಕರ್ಣಿ ಕಾರ್ಯಾಗಾರದ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಮುಖ್ಯ ಅತಿಥಿ ಡಾ. ವೈದ್ಯನಾಥನ್ ತಮ್ಮ ವಿಚಾರ ಮಂಡಿಸಿದರು. ಇಂತಹ ಕಾರ್ಯಾಗಾರಗಳನ್ನು ಶಿಕ್ಷಕರು ತಮ್ಮ ವೃತ್ತಿಪರ ಕೌಶಲ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ ಎಂದು ಡಾ. ರಾಜೇಂದ್ರ ಕುಮಾರ್ ಶರ್ಮಾ ಅಭಿಪ್ರಾಯಪಟ್ಟರು. ಜಿ. ಐ. ಟಿ. ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಂದ್ರ ಬೆಳಗಾಂವಕರ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇಂದು ಶಿಕ್ಷಣ ಮತ್ತು ವ್ಯವಹಾರದಲ್ಲಿ ನ್ಯಾನೋ ತಂತ್ರಜ್ಞಾನ ಮತ್ತು ಸೆಮಿ ಕಂಡಕ್ಟರ್‌ಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಡಾ. ಕೆ. ಎ. ತಬಾಜ್ ಧನ್ಯವಾದ ವ್ಯಕ್ತಪಡಿಸಿದರು. ಕು. ಮಾನ್ವಿ ದೇಬನಾಥ್ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನು ನಿರ್ವಹಿಸಿದಳು.
ಡಾ. ಎಂ. ಎಸ್. ಪಾಟೀಲ, ರಾಜೇಂದ್ರ ಬೆಳಗಾಂವಕರ, ಡಾ. ವೈದ್ಯನಾಥನ್ ಟಿ. ಎಸ್. , ಡಾ. ಆರ್. ಎಂ. ಕುಲಕರ್ಣಿ, ಡಾ. ರಾಜೇಂದ್ರ ಕುಮಾರ್ ಶರ್ಮಾ, ಡಾ. ಎಚ್. ಬಿ. ಕುಲಕರ್ಣಿ, ಪ್ರೊ. ವಿಶ್ವನಾಥ್, ಪ್ರೊ. ಜಿ. ವಿ. ಕುಲಕರ್ಣಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ