Belagavi NewsBelgaum News

*ಗೋಪಾಲ ಜಿನಗೌಡ ಫೌಂಡೇಶನ್ ವತಿಯಿಂದ ಸುವಿಧಾಶ್ರಮ ಪ್ರಾರಂಭ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲೂಕಿನಲ್ಲಿ ಶೈಕ್ಷಣೀಕ ಕ್ಷೇತ್ರದಲ್ಲಿ ಹೆಸರು ಮಾಡಿದ ಹಾಗೂ ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಗೋಪಾಲ ಜಿನಗೌಡ ಫೌಂಡೇಶನ್ ಇದೀಗ ಗೋಪಾಲ ಜಿನಗೌಡಾ ಸುವಿಧಾಶ್ರಮವನ್ನು ಪ್ರಾರಂಭಿಸುವ ಮೂಲಕ ಸಮಾಜ ಸೇವೆಯಲ್ಲಿ ಮತ್ತೊಂದು ದಾಖಲೆ ಮಾಡಿದೆ ಎಂದು ಪೌಂಡೇಶನ್ ಅಧ್ಯಕ್ಷ ಗೊಪಾಲ ಜಿನಗೌಡ ಹೇಳಿದರು.


ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಫೌಂಡೇಶನ್ ಮತ್ತು ಗೋಪಾಲ ಜಿನಗೌಡ ಎಜ್ಯುಕೇಶನ್ ಟ್ರಸ್ಟ್ ಇಂದು ಹೆಮ್ಮರವಾಗಿ ಬೆಳೆಯುವುದಲ್ಲದೇ ಶೈಕ್ಷಣೀಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡಿದೆ. ಸನ್ 2000 ನೇ ಸಾಲಿನಲ್ಲಿ ಶಿಂದೊಳ್ಳಿಯಲ್ಲಿ ಸ್ವಂತ ಜಾಗೆಯಲ್ಲಿ ತಂದೆಯವರ ಹೆಸರಿನಲ್ಲಿ ದೇವೇಂದ್ರ ಜಿನಗೌಡ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಲಾಗಿದೆ. ಇಂದಿನ ಶೈಕ್ಷಣಿಕ ವ್ಯಾಪಾರಿಕರಣದಲ್ಲಿ ಡೋನೇಷನ್ ರಹಿತ ಪ್ರವೇಶ ನೀಡುವ ಮೂಲಕ ಇಂದು ತಾಲೂಕಿನ 21 ಗ್ರಾಮದ ಸುಮಾರು 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡಲಾಗುತ್ತದೆ. ಅದೇ ಆವರಣದಲ್ಲಿ ಪಿಯುಸಿ ಮಹಾವಿದ್ಯಾಲಯಗಳನ್ನು ಸಹ ಪ್ರಾರಂಭಿಸಲಾಗಿದೆ ಎಂದರು.


ಈಗಾಗಲೇ ವ್ಯಯಕ್ತಿಕವಾಗಿ ಅನೇಕ ಶೈಕ್ಷಣಿಕ ಸಂಸ್ಥೆಗಳಿಗೆ ದಾನವನ್ನು ನೀಡುವ ಮೂಲಕ ಬೆಳಗಾವಿಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಸಹಾಯ ಮಾಡಲಾಗಿದೆ. ಮಜಗಾಂವದಲ್ಲಿ ಗೋಮಟೇಶ ವಿದ್ಯಾಪೀಠದ ಗೋಪಾಲ ಜಿನಗೌಡ ಕನ್ನಡ, ಮರಾಠಿ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು 1200 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರಂತೆ ಉದ್ಯಮಬಾಗದಲ್ಲಿರುವ ಜಿತೋ ಗೋಪಾಲ ಜಿನಗೌಡ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಬೃಹತ್ ದಾನ ನೀಡಿರುವುದು ಪ್ರಮುಖವಾಗಿವೆ ಎಂದು ಅವರು ತಿಳಿಸಿದರು.


ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಚಿಂತನೆ ನಡೆಸಿ ಇದೀಗ ಹಿರಿಯ ನಾಗರಿಕರಿಗಾಗಿ ಸುವಿಧಾಶ್ರಮವನ್ನು ಪ್ರಾರಂಭಿಸಲಾಗಿದೆ. ಈ ಸುವಿಧಾಶ್ರಮವು ಒಂದು ಎಕರೆ ಜಾಗದಲ್ಲಿ ಸಕಲ ಸೌಲಭ್ಯಗಳ ಪೂರೈಕೆ, ಸುಸಜ್ಜಿತ ಕೊಠಡಿಗಳು,
ಪ್ರಾರ್ಥನೆಗಾಗಿ ಶ್ರೀ ಗಣೇಶ ಮಂದಿರ, ಹಸಿರು ಮಡಿಲಲ್ಲಿ ಯೋಗಾಸನ, ಕರ್ಣಮಧುರ ಸಂಗೀತ, ದೂರದರ್ಶನ ಸಭಾಂಗಣ,
ವ್ಯಾಯಾಮ ಮತ್ತು ಕ್ರೀಡಾ ಸಾಮಗ್ರಿಗಳ ಪರಿಕರಗಳು, ಶುದ್ಧ ಗಾಳಿ, ಬೆಳಕು, ಪರಿಶುದ್ಧ ನೀರು,ಸಮತೋಲನ ಸಸ್ಯಾಹಾರ ಉಟೋಪಚಾರ ಏಕರೂಪ ಊಟದ ವ್ಯವಸ್ಥೆ, ಶಾರೀರಿಕ ಸಮಸ್ಯೆಗಳಿಗಾಗಿ ಪರಿಣಿತ ವೈದ್ಯರ ಸೇವೆ, ಮಾನಸಿಕ ಆರೋಗ್ಯದ ಕಾಳಜಿ,
ಕಡಿಮೆ ವೆಚ್ಚದಲ್ಲಿ ಸುರಕ್ಷತೆ, ಆರೈಕೆ ಅನುಭವಿಕ ವ್ಯಕತಿಗಳಿಂದ ಉಪನ್ಯಾಸ ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಹಬ್ಬಗಳ ಆಚರಣೆ , ಸೇವೆಗೆ ಸದಾ ಲಭ್ಯವಿರುವ ಸಿಬ್ಬಂದಿ, ಸುಸಜ್ಜಿತ ಗ್ರ‍್ರಂಥಾಲಯದ ವ್ಯವಸ್ಥೆ, ವಾಯುವಿಹಾರಕ್ಕಾಗಿ ಉದ್ಯಾನವನ, ಹೀಗೆ ಹಲವಾರು ಸೌಲಭ್ಯ – ಆಕರ್ಷಣೆಗಳಿಂದ ಕೂಡಿರುವ ಈ ಸುವಿಧಾಶ್ರಮ ಜೀವನದ ಇಳಿವಯಸ್ಸಿನ ಹಿರಿಯರಿಗೆ ನೆಮ್ಮದಿಯ ಆಗರವಾಗಿ ಕಾರ್ಯನಿರ್ವಹಿಸಲಿದೆ. ಅವರ ಬದುಕಿನ ಸಂದ್ಯಾಕಾಲದಲ್ಲಿ ಬೆಳಕಿನ ಬೀಜವನ್ನು ಬಿತ್ತಿ ಅವರು ಸ್ವತಂತ್ರವಾಗಿ ಸರ್ವದಾ ಸಂತೋಷದಿಂದ ಇರುವಂತೆ ನೋಡಿಕೊಳ್ಳಲಿದೆ.

ಈ ಸುವಿಧಾಶ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಥವಾ ಪ್ರವೇಶ ಪಡೆಯಲು, 9448578387, 9845442871, 9590541008 ಇವರನ್ನು ಸಂಪರ್ಕಿಸಬಹುದು ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪೌಂಡೇಶನ್ ನಿದೇರ್ಶಕರಾದ ಸಂತೋಷ ಜಿನಗೌಡ, ಅಭಯ ಅವಲಕ್ಕಿ , ಕುಂತುಸಾಗರ ಹರದಿ ವಿಕ್ರಮ ಜೈನ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button