Belagavi NewsBelgaum NewsKarnataka News

*ಕಿತ್ತೂರು ಉತ್ಸವ: ಅಕ್ಟೋಬರ್ 25ರ ಕಾರ್ಯಕ್ರಮಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅ.25 ರಂದು ಬೆಳಗ್ಗೆ 10 ರಿಂದ 1 ಗಂಟೆಗೆವರೆಗೆ ಕಿತ್ತೂರು ಕೋಟೆ ಆವರಣದಲ್ಲಿ ಕಿತ್ತೂರು ರಾಣಿ ಸಂಸ್ಥಾನದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ/ಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು, ಬೆಂಗಳೂರಿನ ಸಂಶೋಧಕರಾದ ಡಾ.ಸಂತೋಷ ಹಾನಗಲ್ ಅವರು ಪ್ರಾಸ್ತಾವಿಕ ನುಡಿ ಆಡುವರು. ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಗಜಾನನ ಮನ್ನಿಕೇರಿ ಹಾಗೂ ಖ್ಯಾತ ವಿದ್ವಾಂಸರಾದ ಬಾಳಣ್ಣ ಶೀಗಿಹಳ್ಳಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪವಾಡ ಪುರುಷ ಶ್ರೀ ಮಡಿವಾಳೇಶ್ವರ ಚರಿತ್ರೆ ಹಾಗೂ ಕರ್ನಾಟಕ ಇತಿಹಾಸ ಒಂದು ಇಟುಕು ನೋಟ ಎನ್ನುವ ಪುಸ್ತಕವನ್ನು ಲೋಕಾರ್ಪಣೆ ಮಾಡುವರು.

ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಶಿಕ್ಷಣ ತಜ್ಞರಾದ ಡಾ. ವೀಣಾ ಬಿರಾದಾರ ಅವರ ಅಧ್ಯಕ್ಷತೆಯಲ್ಲಿ ಕಿತ್ತೂರು ಸಂಸ್ಥಾನದ ವ್ಯಕ್ತಿತ್ವ ಅನಾವರಣ ವಿಚಾರ ಗೋಷ್ಠಿ-1 ನಡೆಯುವುದು. ಡಾ.ರಾಜಶೇಖರ ಬಿರಾದಾರ ಅವರು ಕಿತ್ತೂರು ಅರಸರ ಜನೋಪಯೋಗಿ ಕಾರ್ಯಗಳು, ವಾಯ್.ಬಿ.ಕಡಕೋಳ ಅವರು ತಲ್ಲೂರು ರಾಯನಗೌಡ್ರು ಮತ್ತು ಕಿತ್ತೂರು, ಡಾ.ಗಜಾನಂದ ಸೊಗಲನ್ನವರ ಅವರು ದತ್ತಕ ಪ್ರಕ್ರಿಯಿಯ ವಿವಿಧ ಆಯಾಮ, ರಾಜಶೇಖರ ಕೋಟಿ ಅವರು ಕಿತ್ತೂರು ಸಂಸ್ಥಾನದ ಜೊತೆ ಪವಾಡಪುರುಷ ಶ್ರೀ ಮಡಿವಾಳೇಶ್ವರ ನಂಟು, ಡಾ.ಸಿ.ಕೆ.ಜೋರಾಪೂರ ಅವರು ಕಿತ್ತೂರು ಸಂಸ್ಥಾನದ ಕಲಿಗಳ ಕಥೆಗಳು ಕುರಿತು ವಿಚಾರಗೋಷ್ಠಿ ನಡೆಯುವುದು.

ಮಧ್ಯಾಹ್ನ 12.10 ಗಂಟೆಯಿಂದ 1 ಗಂಟೆಯವರೆಗೆ ಸುನಂದಾ ಎಮ್ಮಿ ಅವರ ಅಧ್ಯಕ್ಷತೆಯಲ್ಲಿ ಕಿತ್ತೂರು ಸಂಸ್ಥಾನದ ಆಡಳಿತಾತ್ಮಕ ಹಾಗೂ ಸಮಕಾಲೀನ ರಾಜಕೀಯ ವ್ಯವಸ್ಥೆ ಕುರಿತು ವಿಚಾರಗೋಷ್ಠಿ-2 ನಡೆಯುವುದು. ಬಸವರಾಜ ಕುಪ್ಪಸಗೌಡು ಅವರು ಸೌಜನ್ಯತೆ ಸಾಕಾರ ಮೂರ್ತಿ ರಾಣಿಚೆನ್ನಮ್ಮ, ಮಹೇಶ ಚನ್ನಂಗಿ ಅವರು ಮಲ್ಲಸರ್ಜ ಮತ್ತು ಸಮಕಾಲೀನ ರಾಜಕೀಯ ವ್ಯವಸ್ಥೆ, ಮಂಜುನಾಥ ಕಳಸಣ್ಣವರ ಅವರು ಕಿತ್ತೂರಿನಲ್ಲಿ ಆಂಗ್ಲರ ಒಂದನೇ ಮತ್ತು ಎರಡನೇಯ ಯುದ್ಧದ ಚಿತ್ರಣ, ಪ್ರೊ.ಎಸ್.ಎಸ್.ಗದ್ದಿಗೌಡರ ಅವರು ಜನಪದ ಸಾಹಿತ್ಯದಲ್ಲಿ ಚನ್ನಮ್ಮಾಜಿ ಶೌರ್ಯ ಮತ್ತು ಹೋರಾಟ ಕುರಿತು ವಿಚಾರಗೋಷ್ಠಿ ನಡೆಯುವುದು.

ಸಂಜೆ 8 ಗಂಟೆಯಿಂದ 9 ಗಂಟೆಯವರೆಗೆ ಸಮಾರೋಪ ಸಮಾರಂಭವನ್ನು ಜರಗುವುದು. ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ನಿಚ್ಚಣಕಿ ಶ್ರೀಗುರು ಮಡಿವಾಳೇಶ್ವರ ಮಠದ ಶ್ರೀ ಮ.ನಿ.ಪ್ರ.ಸ್ವ. ಪಂಚಾಕ್ಷರಿ ಮಹಾಸ್ವಾಮಿಗಳು, ಕಾದರವಳ್ಳಿ ಸೀಮಿಮಠದ ಶ್ರೀಶ್ರೀಶ್ರೀ ಷ.ಬ್ರ. ಡಾ.ಪಾಲಾಕ್ಷ ಶಿವಯೋಗೀಶ್ವರರು, ಬೈಲೂರು ನಿಷ್ಕಲ ಮಂಟಪ ಶ್ರೀಗಳು ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸುವರು.

ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ್ ಲಾಡ್ ಅವರು ಘನ ಉಪಸ್ಥಿತಿರುವರು, ವಿಧಾನಸಭೆ ಮುಖ್ಯ ಸಚೇತರರಾದ ಅಶೋಕ ಪಟ್ಟಣ ಮುಖ್ಯ ಅತಿಥಿಗಳಾಗಿ ಹಾಗೂ ಧಾರವಾಡ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ವಿನಯ್ ಕುಲಕರ್ಣಿ ಅತಿಥಿಗಳಾಗಿ ಆಗಮಿಸುವರು. ಕಿತ್ತೂರು ವಿಧಾನಸಭಾ ಮತಕ್ಷೇತ್ರ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಅಧ್ಯಕ್ಷತೆ ವಹಿಸುವರು. ಸ್ಟಾರ್ ಎರಲೈನ್ಸ್ ಸಂಸ್ಥಾಪಕರಾದ ಸಂಜಯ ಘೋಡಾವತ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ. ಮರುಷೋತ್ತಮ ಬಿಳಿಮಲೆ ಅವರು ಸಮಾರೋಪ ನುಡಿ ಆಡುವರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇರಗಳಲ್ಲಿ ಸಾಧನೆಗೈದ ಮಹನಿಯರಿಗೆ ಮತ್ತು ವಂಶಸ್ಥರಿಗೆ ಸನ್ಮಾನ ಮಾಡುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂಸಕೃತಿಕ ಕಾರ್ಯಕ್ರಮಗಳು

(ಕಿತ್ತೂರು ರಾಣಿ ಚೆನ್ನಮ್ಮಾ ವೇದಿಕೆ, ಕೋಟೆ ಆವರಣ)

ದಿನಾಂಕ:25-10-2024 ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಅಕ್ಷತಾ ಸಾಂಸ್ಕೃತಿಕ ಅಕಾಡೆಮಿ, ವಿದೂಷಿ ಉಷಾ ಬಸಪ್ಪ ಅವರಿಂದ ನೃತ್ಯ ರೂಪಕ, ಮೋಹನಗೌಡ ಪಾಟೀಲ ಸಂಗೀತ ಪ್ರತಿಷ್ಠಾನ ಅವರಿಂದ ಭಜನಾ, ಕಲಾವತಿ ದೊರೆ ಅವರಿಂದ ಸುಗಮ ಸಂಗೀತ, ಪುಂಡಲೀಕ ಭಜಂತ್ರಿ ಅವರಿಂದ ಶಹನಾಯಿ, ಶಂಕ್ರಣ್ಣ ಕೋತಬಾಳ ಅವರಿಂದ ಲಾವಣಿ ಪದ, ಅಮರೇಶ್ವರ ಮಹರಾಜರು ಡೊಳ್ಳಿನ ಪದ, ಕನ್ನಡ ಕೋಗಿಲೆ ವಿನ್ನರ್‌ನಾದ ಖಾಸೀಮ ಅಲಿ ಅವರಿಂದ ಸಂಗೀತ, ಹೋಗಿಲ ಸಿದ್ದರಾಜು ಅವರಿಂದ ಜನಪದ ಸಂಗೀತ, ಗಿಟ್ಟಿ ಗಿಲಿಗಿಲಿ ತಂಡ ಹಾಗೂ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಜೆ, ಪ್ರಕಾಶ ಬಳ್ಳಾರಿ ಅವರಿಂದ ಜಾದೂ ಪ್ರದರ್ಶನ, ಜೀ ಕನ್ನಡ ಕುಣಿಯೋಣ ಬಾರ ವಿನ್ನರ್ ಜಾನ್ನವಿ ಐತಾಳ ಮತ್ತು ತಂಡದವರಿಂದ ಹೆಜ್ಜೆನಾದ, ಜಸ್ ಕರಣ್, ದಿವ್ಯಾ ರಾಮಚಂದ್ರನ್, ಶರಣ್, ಸ್ಯಾಂಡಲ್‌ವುಡ್ ತಾರೆಯರಿಂದ ರಸಮಂಜರಿ, ರಾಘವೇಂದ್ರ ಆಚಾರ್ಯ ಅವರಿಂದ ಹಾಸ್ಯಗಾರರು, ಖಾತ್ಯ ಬಾಲಿವುಡ್ ಗಾಯಕ ಅರ್ಮನ್ ಮಲೀಕ್ ಅವರಿಂದ ಸಂಗೀತಗಳು ಜರುಗಲಿವೆ.

ಸಾಂಸಕೃತಿಕ ಕಾರ್ಯಕ್ರಮಗಳು:

(ಸರದಾರ ಗುರುಸಿದ್ದಪ್ಪ ವೇದಿಕೆ, ವೀರಭದ್ರೇಶ್ವರ ಕಲ್ಯಾಣ ಮಂಟಪ)

ದಿನಾಂಕ:25-10-2024 ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬಸ್ಲಾಪೂರದ ಕಶ ಭಜನಾ ಮಂಡಳಿ ಅವರಿಂದ ಭಜನಾ, ನಾಗಪ್ಪ ಶ್ರೀಶೈಲ ಶೆಟ್ಟರ ತಂಡದಿಂದ, ತತ್ವಪದ, ಕೆಂಪವ್ಹಾ ಹಾಗೂ ಮಾದೇವಿ ತಂಡದಿಂದ ಚೌಡಕಿ ಪದ, ರೇವಣಸಿದ್ದಯ್ಯ ಹಿರೇಮಠ, ಹುಬ್ಬಳ್ಳಿಯ ಪಲ್ಲವಿ ಖಾನಪೇಟ್ ಅವರಿಂದ ಸುಗಮ ಪದ, ಮಹಾಲಕ್ಷ್ಮೀ ರಾಯಚೂರ ಅವರಿಂದ ಭಾವಗೀತೆ, ತಿಮ್ಮಣ್ಣ ಹೊಸಪೇಟ ಅವರಿಂದ ವಚನ ಸಂಗೀತ, ಪಂ.ಹೆಗ್ಗಾರ ಅನಂತ ಹೆಗಡೆ ಅವರಿಂದ ಶಾಸ್ತ್ರೀಯ ಸಂಗೀತ, ಭರತನಾಟ್ಯ ಕಾರ್ಯಕ್ರಮಗಳು ಜರುಗಲಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button