Belagavi NewsBelgaum NewsBusiness

*ಶ್ರೀ ಬೀರೇಶ್ವರ ಕೊ-ಆಫ್ ಕ್ರೆಡಿಟ್ ಸೊಸೈಟಿ ಲಿ.ಗೆ ರಾಷ್ಟ್ರಮಟ್ಟದ ಪ್ರಶಸ್ತಿ ಗರಿ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿಗೆ ಉತ್ತರ ಪ್ರದೇಶ ರಾಜಧಾನಿ ಲಖನೌ ದಲ್ಲಿ ಜರುಗಿದ ರಾಷ್ಟ್ರಮಟ್ಟದ ಸಹಕಾರ ಬ್ಯಾಂಕುಗಳ ಸಂಯೋಜನೆ (NCBS) ಹಾಗೂ FRONTIERS CO- OPERATIVE BANKING AWARDS-2024 ನಲ್ಲಿ ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಜೊಲ್ಲೆ ಗ್ರೂಪ್ ನ ಅಂಗ ಸಂಸ್ಥೆಯಾದ ಶ್ರೀ ಬೀರೇಶ್ವರ ಸಂಸ್ಥೆಗೆ “ಐಟಿ ವಿಭಾಗದಲ್ಲಿ ರಾಷ್ಟ್ರಮಟ್ಟದ BEST IT HEAD AWARD 2024 ಪ್ರಶಸ್ತಿ ಲಭಿಸಿದೆ.


ಈ ಸಮಾರಂಭದಲ್ಲಿ ಬ್ಯಾಂಕಿಂಗ್ ಫ್ರಂಟಿಯರ್ ನ ಸಂಸ್ಥಾಪಕರಾದ ಬಾಬು ನೈಯರ್, ಗ್ರೂಪ್ ಆಡಿಟರ್ ಮನೋಜ್ ಅಗ್ರವಾಲ್, NAFCUB ಡೈರೆಕ್ಟರ್, ಸುಭಾಷ್ ಗುಪ್ತಾ ಹಾಗೂ ಪ್ರಮೋದ ಕರ್ನಾಡ್ ಇವರು ಸಂಸ್ಥೆಗೆ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಸಂಸ್ಥೆಯ ಪರವಾಗಿ ಉಪ ಪ್ರಧಾನ ವ್ಯವಸ್ಥಾಪಕರಾದ ಸುರೇಶ ಮಾನೆ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶೇಖರ ಪಾಟೀಲ ಪ್ರಶಸ್ತಿಯನ್ನು ಸ್ವೀಕರಿಸಿದರು.

ಸಂಸ್ಥೆಯ ಸಂಸ್ಥಾಪಕರು ಹಾಗೂ ಚಿಕ್ಕೋಡಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಹ ಸಂಸ್ಥಾಪಕರು, ಮಾಜಿ ಸಚಿವರು ಹಾಗೂ ನಿಪ್ಪಾಣಿಯ ಜನಪ್ರಿಯ ಶಾಸಕರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆಯವರು ಮಾತನಾಡಿ , ಪ್ರತಿಷ್ಠಿತ ಜೊಲ್ಲೆ ಗ್ರೂಪ್ ನ ಮಾತೃ ಸಂಸ್ಥೆಯಾದ ಶ್ರೀ ಬೀರೇಶ್ವರ ಸೊಸೈಟಿಯು ಇಂದು 3 ಲಕ್ಷ 89 ಸಾವಿರಕ್ಕೂ ಅಧಿಕ ಸದಸ್ಯರು, 3925 ಕೋಟಿ ಠೇವು, 2989 ಕೋಟಿ ಸಾಲ ಮುಂಗಡ ಹಾಗೂ 4556 ಕೋಟಿ ದುಡಿಯುವ ಬಂಡವಾಳ ಹೊಂದಿ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ 219 ಶಾಖೆಗಳೊಂದಿಗೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ, ಜನಮನ್ನಣೆ ಗಳಿಸಿದ ಸಂಸ್ಥೆ ಇಂದು ದೇಶಾದ್ಯಂತ ಹೆಸರುವಾಸಿಯಾಗಿದೆ. ಈ ಪ್ರಶಸ್ತಿಯು, ಸುಭದ್ರ ಸಂಸ್ಥೆಯ ಪಾರದರ್ಶಕ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button