Kannada NewsKarnataka News

ಜಿಎಸ್‌ಟಿಯಿಂದ ವ್ಯಾಪಾರ ರಂಗದಲ್ಲಿ ನಷ್ಟ: ರಾಮಚಂದ್ರಗೌಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಧುನಿಕ ಭಾರತದಲ್ಲಿ ಜಿಎಸ್‌ಟಿ ಪರಿಣಾಮವಾಗಿ ವ್ಯಾಪಾರ ಎಲ್ಲ ರಂಗದಲ್ಲಿ ಗಣನೀಯವಾಗಿ ನಷ್ಟವನ್ನು ಅನುಭಸುತ್ತಿದ್ದು, ಶೇರು ಮಾರುಕಟ್ಟೆ, ಬ್ಯಾಂಕಿಂಗ್ ಸೆಕ್ಟರ್, ಶೈಕ್ಷಣಿಕ ವಿಭಾಗ ಎಲ್ಲಾ ಕ್ಷೇತ್ರಗಳನ್ನು ಜಿಎಸ್‌ಟಿ ಕಾಡತೊಡಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಹೇಳಿದರು.
ನಗರದ ಮರಾಠಾ ಮಂಡಳ ಪದವಿ ಮಹಾವಿದ್ಯಾಯದಲ್ಲಿ ಶನಿವಾರ  ಆಯೋಜಿಸಲಾಗಿದ್ದ, ವ್ಯಾಪಾರೀಕರಣ ಪ್ರಗತಿ ಸವಾಲುಗಳು ಹಾಗೂ ಪರಿಹಾರಗಳು ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಾಪಾರದಲ್ಲಿ ಯಾವ ಗ್ರಾಹಕರೂ ಆಸಕ್ತಿಯನ್ನು ತೋರುತ್ತಿಲ್ಲ, ಅಂತರಾಷ್ಟ್ರೀಯ ವಿಚಾರ ಸಮ್ಮೇಳನ ಕೇವಲ ಪ್ರಾಧ್ಯಾಪಕರಿಗೆ ಸೀಮಿತವಾಗುತ್ತಿದೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕೆಂದರು.
ಸಾವಿತ್ರಿಭಾಯಿ ಫುಲೆ ವಿಶ್ವವಿದ್ಯಾಲಯದ ಡಾ.ರತಿಕಾಂತ ರೇ ಮಾತನಾಡಿ, ಜೊತೆಯಲ್ಲಿರುವ ನೂರೆಂಟು ಜ್ವಲಂತ ಸಮಸ್ಯೆಗಳನ್ನು ಹುಡುಕಿ ಅವುಗಳ ಮೇಲೆ ಬೆಳಕು ಚೆಲ್ಲಿ, ಆ ಸಮಸ್ಯೆಗಳ ಮೇಲೆ ಸಂಶೋಧನಾ ಕಾರ್ಯ ಕೈಗೊಳ್ಳಬೇಕು. ಪ್ರಗತಿ, ಅಭಿವೃದ್ಧಿ ಮತ್ತು ಸಂಶೋಧನೆಯಲ್ಲಿ ಚೀನಾ ದೇಶವು ಮುಂಚೂಣಿಯಲ್ಲಿದೆ ಎಂದರು.
ಪ್ರೋ. ಡಾ. ಜೆ ಪಿ. ಭೋಸಲೆ, ಡಾ. ಎ ಬಿ ಪವಾರ ಸ್ವಾಗತಿಸಿದರು. ಪ್ರೋ. ಬಾವಡೇಕರ ಪರಿಚಯಿಸಿದರು. ಡಾ. ಪ್ರಕಾಶ ಮಾಡಕರ, ಡಾ. ಪ್ರಕಾಶ ವಿವಾಕರನ್, ಡಾ. ಸುನೀತ ಪಾನೀಕರ, ಡಾ. ಗೌರವ ಸಾಹಿನಿ, ಪ್ರೊ. ಎಸ್ ಜಿ. ಸೊನ್ನದ, ಪ್ರೊ. ಶೀಲಾ ನಾಯಕ, ಡಾ. ಎ. ಆರ್ ರೊಟ್ಟಿ, , ಪ್ರೊ. ಮನೋಹರ್ ಪಾಟೀಲ, ಡಾ. ಎನ್ ಎಚ್ ರಾಯಪೂರ, ಪ್ರೊ. ಎ. ಎ ಮುತ್ತಗೇಕರ, ಪ್ರೊ. ಜಿ. ಎಮ್ ಕರ್ಕಿ, ಪ್ರೊ. ರೇಖಾ ಬಾವಡೇಕರ್, ಅಂತರಾಷ್ಟ್ರೀಯ ಸಮ್ಮೇಳನದ ಸಂಯೋಜಕ ಪ್ರೊ. ಆರ್ ಎಮ್ ತೇಲಿ , ಪ್ರೊ ಜಿ. ವಾಯ್ ಚಿನ್ನಾಳಕರ, ಸಹಕಾರ‍್ಯದರ್ಶಿ ಡಾ. ಎಚ್ ಜೆ. ಮುಳೇರಾಖಿ, ಪ್ರೊ ಕೆ.ಜಿ ಹೊಸಕೋಟಿ, ಪ್ರೊ ಜೆ.ಬಿ ಅಂಚಿ, ಕಾಮುತಿ, ಪ್ರೊ ರಾಜು ಹಟ್ಟಿ, ಪ್ರೊ. ಅರ್ಚನಾ, ಶಿಲ್ಪಾ, ಪ್ರೊ ನಾಡಗೌಡ ರಾಮಾ ಮಾಸ್ತಿಹೊಳಿ, ನಿಲಜಕರ, ರಮಜಾನ, ಘೋಡಸೆ ಹಾಗೂ ಉಪಸ್ಥಿತರಿದ್ದರು. ಪ್ರೊ ವ್ಹಿ.ಎಮ್ ತಿರ್ಲಾಪೂರ ನಿರೂಪಿಸಿದರು. ಡಾ. ಎಸ್ ಬಿ ದಾಸೋಗ ವಂದಿಸಿದರು.
.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button