Kannada NewsKarnataka News

ಬಸವಣ್ಣನ ಹೆಸರಲ್ಲಿ ಕೆಲವರು ಧರ್ಮವನ್ನು ಹಾಳು ಮಾಡುತ್ತಿದ್ದಾರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರತಿಕಣದಲ್ಲಿ ಶಿವನಿದ್ದಾನೆ, ಒಳ್ಳೆಯ ಮನಸ್ಸಿನಿಂದ ಪೂಜೆ, ದಿನನಿತ್ಯ ಆರಾಧನೆ ಮಾಡಿದರೆ ಶಿವ ಒಲಿಯುತ್ತಾನೆ, ದೇಶದ ಸಕಲ ಜೀವಿಯಲ್ಲಿ ಶಾಂತಿನೆಲೆಯೂರಬೇಕಾದರೆ ಅದಕ್ಕಾಗಿ ಧರ್ಮಗಟ್ಟಿಯಾಗಿರಬೇಕು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಕಟಕೋಳ ಗಡದೇಶ್ವರ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವದಿಸಿದರು.

ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ರವಿವಾರ ೧೩ ರಂದು ಶಿವಾಲಯ ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ, ಶ್ರೀ ಶಿವಾಲಯ ದೇವಸ್ಥಾನದ ನೂತನ ಕಳಸಾರೋಹಣ ಹಾಗೂ ದತ್ತಾತ್ರೇಯ, ಹನುಮಾನ ಶಿಲಾ ಮೂರ್ತಿಗಳ ಪ್ರತಿಷ್ಠಾನ ಸಮಾರಂಭ ನೆರವೇರಿಸಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು,
ತತ್ವವನ್ನು ಹೇಳುವ ಮೂಲಕ ಕೇಲವರು ಜನರ ದಿಕ್ಕಿನ್ನು ತಪ್ಪಿಸುತ್ತಿದ್ದಾರೆ. ಈ ತತ್ವವೇ ದೇಶವನ್ನು ಹಾಳುಮಾಡುತ್ತಿದ್ದೆ, ಭಕ್ತಾದಿಗಳಿಗೆ ಬೇಕಾಗುರುವುದು ಆಚಾರ, ವಿಚಾರ ಜೀವನದಲ್ಲಿ ಶಾಂತಿ, ನೆಮ್ಮದಿ ಅದಕ್ಕೆ ಅಡ್ಡಗಾಲು ಹಾಕುವವರಿದ್ದಾರೆ. ದೇಶದಲ್ಲಿ ಶಾಂತಿ ನೆಲೆಯೂರಬೇಕು. ಅಂದಾಗ ಧರ್ಮಕ್ಕೆ ಜೈಯವಾಗುವುದೆಂದರು.
ಸರ್ವಧರ್ಮಗಳ ಸಮಾನತೆಯನ್ನು ಸಾರಿದವರು ಬಸವಣ್ಣನವರು. ಅವರ ಹೆಸರಿನಲ್ಲಿ ಸಾಕಷ್ಟು ಜನರು ಧರ್ಮವನ್ನು ಹಾಳು ಮಾಡುತ್ತಿದ್ದಾರೆ. ಧ್ಯಾನದಿಂದ ಮನಶಾಂತಿ ಸಿಗುತ್ತದೆ. ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ ಭಕ್ತಾದಿಗಳ ಈ ನೆಲದಲ್ಲಿ ಶಾಂತಿಯುತವಾಗಿ ವಾಸಿಸಬೇಕು ಎಂದು ಆಶಿಸಿದರು.

ಅನುಭವ ಮಂಟಪ

ಶಾಸಕ ಅನಿಲ ಬೆನಕೆ ಮಾತನಾಡಿ, ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಲವತ್ತು ಗ್ಲಾಸ್ ಹೌಸ್‌ಗಳಿಗೆ ಅನುಭವ ಮಂಟಪದ ಹೆಸರು ನಾಮಕರಣ ಮಾಡಲಾಗುತ್ತಿದೆ. ಪ್ರತಿನಿತ್ಯ ಈ ಮಂಟಪದಲ್ಲಿ ಬಸವಣ್ಣನವರ ವಚನಗಳ ಆರಾಧನೆ ನಡೆಯುತ್ತವೆ.
ಬಸವಣ್ಣನವರ ವಚನಗಳು ಮನೆ ಮನೆಗೆ ಮುಟ್ಟಬೇಕಿದೆ. ದೇಶದಲ್ಲಿ ಬಸವಣ್ಣನವರ ಅನುಭವ ಮಂಟಪದ ನಿರ್ಮಾಣವಾಗಬೇಕು, ಮುಂದಿನ ದಿನಗಳಲ್ಲಿ ವಚನಗಳ ಅನುಸಾರವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ನಾಡಿನಲ್ಲಿ ಜಾತಿ, ಮತ ಬೇಧ ಹೋಗಲಾಡಿಸಲು ಬಸವಣ್ಣನವರ ಮಾರ್ಗದಲ್ಲಿ ಎಲ್ಲರೂ ಸಾಗಬೇಕಿದೆ. ಜನರಲ್ಲಿ ಸಂಸ್ಕೃತಿಯನ್ನು ಬೆಳೆಸಲು ಬಸವಣ್ಣನವರ ವಚನಗಳು ನೆನೆಯಬೇಕೆಂದರು.

ಪೂರ್ಣಕುಂಭ ಮೇಳ

ಶಿವಾಲಯದ ಕಳಸ, ದತ್ತಾತ್ರೇಯ, ಹನುಮಾನ ಮೂರ್ತಿಗಳನ್ನು ಹನುಮಾನ ನಗರದ ಹನುಮಾನ ದೇವಸ್ಥಾನದಿಂದ ೧೬೦ ಸುಮಂಗಲೆಯರಿಂದ ಪೂರ್ಣಕುಂಭ ಮೇಳದೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ತರಲಾಯಿತು.
ಈ ಸಂದರ್ಭದಲ್ಲಿ ತೋಂಟದ ಡಾ.ಸಿದ್ಧರಾಮ ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಕಟಕೋಳ , ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿ, ಡಾ. ಶಿವಲಿಂಗ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ, ದುರದುಂಡೀಶ್ವರಮಠ ಬಸವಲಿಂಗ ಸ್ವಾಮೀಜಿ, ಅಮರೇಶ್ವರ ಸ್ವಾಮೀಜಿ, ಶಿವಯೋಗಿ ನಾಗೇಂದ್ರ ಸ್ವಾಮೀಜಿ, ಅರವಿಂದ ಜೋಶಿ, ರುದ್ರಣ್ಣ ಚಂದರಗಿ, ಅಧ್ಯಕ್ಷ ಹಾಗೂ ಸದಸ್ಯರು ಪಂಚಕಮೀಟಿ ಬಸವರಾಜ ಮಟಗಾರ , ರುದ್ರಪ್ಪ ಬೇತೂರ, ಶಿವಪುತ್ರ ಘಟಕಳ, ಯಶವಂತ ಗುತ್ತೆನ್ನವರ, ಸುಧಾ ರೊಟ್ಟಿ , ಮಲ್ಲಿಕಾರ್ಜುನ ರೋಟ್ಟಿ, ಧನರಾಜ ಜಾಧವ , ನಾಗೇಶ ಕೋರೆ, ಉಮೇಶ ಪಾಟೀಲ್, ಬಿ ಆರ್ ಪಾಟೀಲ, ಮಾಹದೇವ ಭೀಮನಾಯಕ, ವಿಜಯ ಭಾಗಲಕೊಟೆ, ಮಾದೇವ ಹೊಂಗಲ ಹಾಗೂ ಉಪಸ್ಥಿತರಿದ್ದರು, ಆಶಾ ಯಮಕನಮರಡಿ
ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button