ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ನಗರದಲ್ಲಿ ತಡರಾತ್ರಿ ಗಾಂಜಾ ಮತ್ತಿನಲ್ಲಿದ ವ್ಯಕ್ತಿ ಆಟೋ ಚಾಲಕನ ಕತ್ತು ಸೀಳಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಆರೋಪಿ ಅರೆಸ್ಟ್ ಆಗಿದ್ದಾನೆ.
ನಿನ್ನೆ ತಡ ರಾತ್ರಿ ಬೆಳಗಾವಿಯ ಮಾರುತಿ ನಗರದ ಬಳಿಯ ಎಸ್ಸಿ ಮೋಟರ್ಸ್ ಬಳಿ ಘಟನೆ ತಡ ರಾತ್ರ ನಡೆದಿದೆ. ಆಟೋ ಚಾಲಕ ರಿಯಾಜ್ ತಹಶಿಲ್ದಾರ್ (53) ಕೊಲೆಗೆ ಯತ್ನಿಸಲಾಗಿದೆ. ಗಾಂಜಾ ಮತ್ತಿನಲ್ಲಿ ಚಾಕುವಿನಿಂದ ಕತ್ತು ಸೀಳಿ ಕೊಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.
ಜೀವನ್ಮರಣ ಮಧ್ಯೆ ಹೋರಾಟ ನಡೆಸುತ್ತಿರುವ ಆಟೋ ಚಾಲಕ ರಿಯಾಜ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಆಟೋಚಾಲಕನನ್ನು ದಾಖಲಿಸಿದಾಗ ಶಾಸಕ ರಾಜು ಸೇಠ್ ಭೇಟಿ ನೀಡಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆ ಬಳಿ ಸಂಬಂಧಿಕರು, ಆಟೋ ಚಾಲಕರ ಜಮಾವಣೆಗೊಂಡಿದ್ದು, ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಬಗ್ಗೆ ಮಾತನಾಡಿರುವ ಡಿಸಿಪಿ ರೋಹನ್ ಜಗದೀಸ್ ಅವರು, ರಾತ್ರಿ ವೇಳೆ ಆಟೋ ಚಾಲಕನ ಕತ್ತು ಸೀಳಿರುವ ಕುರಿತು ಮಾಹಿತಿ ಬಂದಾಗ ಸ್ಥಳಕ್ಕೆ ಧಾವಿಸಿ ಗಾಯವಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆ ಸೇರಿಸಿದ್ದೇವೆ. ಬಳಿಕ ಪ್ರಕರಣದ ಪ್ರಾಥಮಿಕ ತನಿಖೆ ಕೈಗೊಂಡಿದ್ದೇವೆ. ಘಟನೆ ನಡೆದ ಸ್ಥಳದ ಸುತ್ತಮುತ್ತಲು ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿಯ ಪತ್ತೆ ಹಚ್ಚಿದ್ದೇವೆ. ಆರೋಪಿ ಕೃತ್ಯಕ್ಕೆ ಬಳಸಿದ ಚಾಕು ವಶಕ್ಕೆ ಪಡೆಯಲಾಗಿದೆ. ಆಟೋದಲ್ಲಿ ತೆರಳಿದ ವೇಳೆ ಆರೋಪಿ ಮತ್ತು ಆಟೋ ಚಾಲಕನ ನಡುವೆ ಯಾವುದೊ ಒಂದು ವಿಚಾರಕ್ಕೆ ಗಲಾಟೆ ಆಗಿದೆ. ಇದರಿಂದ ಸಿಟ್ಟಿಗೆ ಬಂದ ಆರೋಪಿ ಆಟೋ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆರೋಪಿಯ ಹಿನ್ನೆಲೆ ಕಲೆ ಹಾಕುತ್ತಿದ್ದೇವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ