Karnataka News

ಡಿ.ಕೆ.ಶಿವಕುಮಾರ ಜಾಮೀನು ಅರ್ಜಿ ಇಂದು ದೆಹಲಿ ಕೋರ್ಟ್ ಮುಂದೆ

ಪ್ರಗತಿವಾಹಿನ ಸುದ್ದಿ, ಬೆಂಗಳೂರು -ಮಾಜಿ ಸಚಿವ ಡಿ.ಕೆ.ಶಿವಕುಮಾರ ಜಾಮೀನು ಅರ್ಜಿ ಇಂದು ದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ಇದರಿಂದಾಗಿ ಕಳೆದ ಒಂದೂವರೆ ತಿಂಗಳಿನಿಂದ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ ಅವರಿಗೆ ಬಿಡುಗಡೆ ಸಿಗಲಿದೆಯೋ ಎನ್ನುವುದನ್ನು ಕಾದು ನೋಡಬೇಕು.

ಈ ಹಿಂದೆ ಶಿವಕುಮಾರ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜಾಮೀನು ನಿರಾಕರಿಸಿ ಅ.17ರ  ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿತ್ತು. ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಈ ಮಧ್ಯೆ ಜಾರಿನಿರ್ದೇಶನಾಲಯದ ನ್ಯಾಯಾಲಯ ಡಿ.ಕೆ.ಶಿವಕುಮಾರ ಅವರ ಬಂಧನ ಅವಧಿಯನ್ನು ಅ.25ರ ವರೆಗೆ ವಿಸ್ತರಿಸಿದೆ. ವಿಚಾರಣೆ ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಇದೆ. ಈ ಹಂತದಲ್ಲಿ ಬಿಡುಗಡೆ ಮಾಡಿದರೆ ಸಾಕ್ಷಿ ನಾಶ ಪ್ರಯತ್ನ ನಡೆಯಬಹುದು. ಅಲ್ಲದೆ ಅವರ ಕುಟುಂಬದ ಸದಸ್ಯರು ಹಾಗೂ ಹಲವು ಆಪ್ತರ ವಿಚಾರಣೆ ನಡೆಸಬೇಕಿದೆ. ಹಾಗಾಗಿ ಜಾಮೀನು ನೀಡಬಾರದು ಎಂದು ಇಡಿ ಪರ ವಕೀಲರು ವಾದಿಸಿದ್ದರು.

ಇಂದು ಹೈಕೋರ್ಟ್ ನಲ್ಲಿ ಕೂಡ ಇಡಿ ಪರ ವಕೀಲರು ಇದೇ ವಾದ ಮಂಡಿಸಬಹುದು. ಇಂದೂ ಜಾಮೀನು ಸಿಗದಿದ್ದರೆ ದೀಪಾವಳಿಗೆ ಕೂಡ ಡಿ.ಕೆ.ಶಿವಕುಮಾರ ಅವರು ನ್ಯಾಯಾಲಯದಲ್ಲೇ ಕಳೆಯಬೇಕಾದ ಅನಿವಾರ್ಯತೆ ಬರಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button