Belagavi NewsBelgaum NewsEducation

*ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಮೂರು ತಿಂಗಳಿಗೊಮ್ಮೆ ಶಿಕ್ಷಣ ಅದಾಲತ್ ಕಾರ್ಯಕ್ರಮ : ಸಿ.ಇ.ಒ ರಾಹುಲ್ ಶಿಂಧೆ*

ಪ್ರಗತಿವಾಹಿನಿ ಸುದ್ದಿ: ಶಾಲಾ ಶಿಕ್ಷಕರಿಗೆ ಇಲಾಖೆಯಿಂದ ನೀಡಬೇಕಾದ ಸೇವಾ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಿ ಮಗುವಿನ ಕಲಿಕಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಿಪಂ ಸಿಇಒ ರಾಹುಲ್ ಶಿಂಧೆ ಕರೆ ನೀಡಿದರು ನೀಡಿದರು. 

ನಗರದ ಜಿಲ್ಲಾ ಪಂಚಾಯತ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಬೆಳಗಾವಿ ಶೈಕ್ಷಣಿಕ ವಿಭಾಗದ ಶಿಕ್ಷಕರ ಅದಾಲತ್ (ಕುಂದು ಕೊರತೆ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಶಿಕ್ಷಣ ಇಲಾಖೆಯ ದಿರ್ಘಕಾಲಿಕ ಸಮಸ್ಯೆಗಳ ಕುರಿತು ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಂದ ಮಕ್ಕಳ ಕಲಿಕಾ ಗುಣಮಟ್ಟಕ್ಕೆ ಆಗುವ ತೊಂದರೆಯನ್ನು ನಿವಾರಿಸುವ ನಿಟ್ಟಿನಲ್ಲಿ ಶಿಕ್ಷಣ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವೆಂದು ಸಭೆಯಲ್ಲಿ ತಿಳಿಸಿದರು. ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ರಾಜ್ಯದಲ್ಲಿಯೇ ಮಾದರಿ ಕಾರ್ಯಕ್ರಮ ಆಗಿರುವುದು ಗಮನಾರ್ಹ ಸಂಗತಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಉಪ ನಿರ್ದೇಶಕರ ಕಛೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ‍್ಯತತ್ಪರವಾಗಿದ್ದು ಇನ್ನು ಹೆಚ್ಚು ಈ ರೀತಿಯ ಶಿಕ್ಷಣ ಅದಾಲತ್ ನ್ನು 03 ತಿಂಗಳಿಗೊಮ್ಮೆ ಕೈಗೊಳ್ಳಲಾಗೊಂಡು ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ಸಭೆಗೆಯಲ್ಲಿ ತಿಳಿಸಿದರು. ಶಿಕ್ಷಕರ ಸೇವಾ ಸಮಸ್ಯೆ ಸಂಬ0ಧಿಸಿದಂತೆ ಆಡಳಿತಾತ್ಮಕ ಪರಿಹಾರ ನೀಡಲಾಗುವುದು. ಶಿಕ್ಷಕರು, ಸಂಘಟನೆಯವರು ಶಾಲೆಯಲ್ಲಿದ್ದು ಬೋದನೆ ಕೈಗೊಂಡು ಗುಣಮಟ್ಟದ ಕಲಿಕೆಗೆ ಕ್ರಮವಹಿಸಲು ಜಿ.ಪಂ ಸಿ.ಇ.ಒ ರವರು ತಿಳಿಸಿದರು 

ಶಿಕ್ಷಣ ಅದಾಲತ್ ಕಾರ‍್ಯಕ್ರಮದಲ್ಲಿ ವಲಯವಾರು ಸ್ವೀಕೃತವಾದ ಒಟ್ಟು ಅರ್ಜಿಗಳು 60 ಇತ್ಯರ್ಥ ಪಡಿಸಿದ ಅರ್ಜಿಗಳು  26 ಮತ್ತು ಬಾಕಿ ಇದ್ದ 34 ಅರ್ಜಿಗಳ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಂದು ವಾರದೊಳಗೆ ಇತ್ಯರ್ಥ ಪಡಿಸಿಕೊಳ್ಳುವಂತೆ ಜಿಲ್ಲಾ ಪಂ. ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಅವರು ಸೂಚಿಸಿದರು.  ಉಪ ನಿರ್ದೇಶಕರಿಗೆ ಈ ಕುರಿತಾಗಿ ಮೇಲುಸ್ತುವಾರಿ ಮಾಡಲು ಸೂಚಿಸಿದರು.  

ಬಿಸಿ ಊಟಕ್ಕೆ ಸಂಬಂಧಿಸಿದ ಶಿಕ್ಷಕರು ವ್ಯಕ್ತ ಪಡಿಸಿದ ಸಮಸ್ಯೆಗಳು ಸರ್ಕಾರದ ನೀತಿ ನಿಯಮಗಳ ಕುರಿತಾಗಿದ್ದು ಈ ಕುರಿತಾಗಿ ಸರ್ಕಾರದ ಗಮನಕ್ಕೆ ತರಲು  ಉಪ ನಿರ್ದೇಶಕರಿಗೆ ಸೂಚನೆ ನೀಡಲಾಯಿತು. ಅದಾಲತ್ ಕಾರ್ಯಕ್ರಮದಲ್ಲಿ ಸ್ವೀಕೃತವಾದ  08 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಯಿತು. 

ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲೀಲಾವತಿ ಎಸ್ ಹಿರೇಮಠ, ಜಿ.ಪಂ. ಲೆಕ್ಕಾಧಿಕಾರಿ ಶೀತಲ ಕುರಣಿ, ಬೆಳಗಾವಿ (ದಕ್ಷಿಣ) ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿ.ಡಿಪಿ.ಐ ಕಛೇರಿಯ ಮತ್ತು ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಅಧಿಕಾರಿ ಸಿಬ್ಬಂದಿಗಳು, ವಿವಿಧ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button