ಪ್ರಗತಿವಾಹಿನಿ ಸುದ್ದಿ, ಶಿರಸಿ : ಬೈಲಹೊಂಗಲ ತಾಲೂಕು ದೇವಲಾಪುರ ಗ್ರಾಮದ ಶ್ರೀ ಅಷ್ಟಮ ನಂದಿಕೇಶ್ವರ ಕ್ಷೇತ್ರದ ಪ್ರವರ್ತಕರಾದ ಪರಮಪೂಜ್ಯ ಆಚಾರ್ಯ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರು ಸಲ್ಲೇಖನ ವ್ರತ ಸಮಾಧಿಯಾಗಿದ್ದಾರೆ.
ನವೆಂಬರ್ 13 ರಂದು ಬುಧವಾರ ಯಮಸಲ್ಲೇಖನ ವೃತ ಸ್ವೀಕರಿಸಿದ್ದ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರು ಸರಿಯಾಗಿ ಎಂಟು ದಿನಗಳ ನಂತರ ಇಂದು 20.11.2024 ಬುಧವಾರ ಸಂಜೆ ಸರಿಯಾಗಿ 5 ಗಂಟೆಗೆ ದೇವಲಾಪೂರ ಕ್ಷೇತ್ರದಲ್ಲಿ ಸಮಾಧಿ ಮರಣ ಹೊಂದಿದರು. *ಇವರ ಅಂತಿಮ ದಹನಕ್ರೀಯಾದಿ ವಿಧಿ ವಿಧಾನಗಳು ನಾಳೆ 21.11.2024 ರಂದು ಗುರುವಾರ ಮುಂಜಾನೆ 11 ಗಂಟೆಗೆ ದೇವಲಾಪೂರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದಲ್ಲಿ ಜರುಗಲಿದೆ.*
ಜ್ಞಾನೇಶ್ವರ ಮಹಾರಾಜರ ಅಗಲಿಕೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ. ಜೈನ ಧರ್ಮ ಅಹಿಂಸೆಯ ಮೂಲಕ ಮಲೋಕಶಾಂತಿಯ ಮತ್ತು ಲೋಕದ ಹಿತವನ್ನು ಬಯಸುವ ಧರ್ಮವಾಗಿದೆ. ಇದಕ್ಕೆ ಪ್ರೇರಣದಾಯಕವಾಗಿ ಸಲ್ಲೇಖನ ವ್ರತದೊಂದಿಗೆ ಸಮಾಧಿಯಾದ ಪರಮಪೂಜ್ಯರೂ ಕೂಡ ಪ್ರೇರಣಾದಾಯಿಗಿದ್ದರು.
ಸ್ವಾಮೀಜಿಗಳ ಅಗಲಿಕೆ ಕೇವಲ ಜೈನ ಸಮುದಾಯಕ್ಕೆ ಮಾತ್ರವಲ್ಲ ನಾಡಿನ ಇಡೀ ಸಮುದಾಯಕ್ಕೆ ನಷ್ಟವಾಗಿದೆ, ಸಾವನ್ನು ಅರಿತು ಒಪ್ಪಿಕೊಳ್ಳುವ ಸಾಧನೆಯ ಮಾರ್ಗದಲ್ಲಿ ಸಾಗಿದ ಪುಣ್ಯ ಯತಿಗಳ ನಿಷ್ಠೆ ಜೀವನ್ಮುಕ್ತಿಯಡೆ ಸಾಗುವ ಅವರ ಪಥ ವಿವರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ