Kannada NewsKarnataka NewsLatestPolitics

*ಬಿಪಿಎಲ್ ಕಾರ್ಡ್ ಗಳನ್ನು ವಾಪಸು ಮಾಡದಿದ್ದರೆ ರಾಜ್ಯಾದ್ಯಂತ ಬೀಗ: ಅಶೋಕ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಸರ್ಕಾರ ಈಗ ರದ್ದು ಮಾಡಿರುವ ಬಿಪಿಎಲ್ ಕಾರ್ಡ್ ಗಳನ್ನು ವಾಪಸು ಮಾಡದಿದ್ದರೆ ರಾಜ್ಯಾದ್ಯಂತ ಎಲ್ಲಾ ತಾಲೂಕು ಕಚೇರಿಗಳಿಗೆ ಬೀಗ ಹಾಕಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಎಚ್ಚರಿಸಿದ್ದಾರೆ.

ಮಾಲಕ್ಷ್ಮಿ ವಿಧಾನಸಭಾ ಕ್ಷೇತ್ರದ ನಂಜಪ್ಪ ಬಡಾವಣೆ ಹಾಗೂ ಜೈ ಮಾರುತಿನಗರ ಬಡಾವಣೆಗಳಲ್ಲಿ ಪಡಿತರ ಚೀಟಿ ರದ್ದಾದ ಮನೆಗಳಿಗೆ ಶಾಸಕರುಗಳಾದ ಡಾ. ಅಶ್ವಥ್ ನಾರಾಯಣ್, ಕೆ. ಗೋಪಾಲಯ್ಯ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನೆಡೆಸಿ ನಂತರ ಮಾಧ್ಯಮಗಳೊಂದಿಗೆ ಅಶೋಕ್ ಮಾತನಾಡಿದರು.

50 ವರ್ಷ ಆಡಳಿತ ಮಾಡಿದಿರಿ ಬೋಗಸ್ ಕಾರ್ಡ್ ಗಳನ್ನು ಯಾರು ಕೊಟ್ಟರು ಎಂಬುದು ನಿಮಗೆ ಗೊತ್ತಿಲ್ಲವೇ ಮೊದಲು ಬೋಗಸ್ ಕಾರ್ಡ್ ಕೊಟ್ಟ ಅಧಿಕಾರಿಗಳ ವಿರುದ್ಧ ತಾಕತ್ತಿದ್ದರೆ ಕ್ರಮ ತೆಗೆದುಕೊಳ್ಳಿ ಎಂದು ಕಿಡಿಕಾರಿದರು

ವಕ್ ಬೋರ್ಡ್ ಗೆ ಆದೇಶ ಕೊಟ್ಟ ರೀತಿಯಲ್ಲೇ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿರುವ ಬಗ್ಗೆಯೂ ಆದೇಶ ಹೊರಡಿಸಿ ಎಪಿಎಲ್ ಕಾರ್ಡ್ ಗಳನ್ನು ತಕ್ಷಣ ವಾಪಸ್ ಪಡೆದು ಬಡವರಿಗೆ ಮತ್ತೆ ಬಿಪಿಎಲ್ ಕಾರ್ಡ್‌ಗಳನ್ನು ವಾಪಸು ಕೊಡಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ವಾಪಸ್ ಪಡೆಯಿರಿ, ಯಾಕೆ ನಿಮಗೆ ದಮ್ ಇಲ್ಲವೆ, ನಿಮ್ಮ ಬಳಿ ಇರುವ ದಾಖಲೆ ಹುಡುಕಿ ಬಿಪಿಎಲ್ ಕಿತ್ತುಹಾಕಿ. ಅವರು ಹೋರಾಟ ಮಾಡುತ್ತಾರೆ ಎಂದು ಬಡವರ ಮೇಲೆ ದರ್ಪ ತೋರಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಪಿಎಲ್ ಕಾರ್ಡ್ ರದ್ದು ವಾಪಸು ಪಡೆಯದಿದ್ದರೆ ರಾಜ್ಯದ್ಯಂತ ಎಲ್ಲಾ ತಾಲೂಕು ಕಚೇರಿಗಳಿಗೆ ಬೇಗ ಹಾಕುತ್ತೇವೆ ಅಧಿಕಾರಿಗಳನ್ನು ಕಚೇರಿ ಒಳಗೆ ಕೂಡಿಹಾಕಿ ಬೀಗ ಹಾಕಿ ಪ್ರತಿಭಟಿಸುತ್ತೇವೆ ಈಗಲೇ ನಮ್ಮ ಶಾಸಕರ ಜತೆ ಮಾತನಾಡುತ್ತೇನೆ ಎಂದು ಅಶೋಕ್ ಎಚ್ಚರಿಸಿದರು.

ಡಾ. ಅಶ್ವತ್ ನಾರಾಯಣ ಮಾತನಾಡಿ,
ರಾಜ್ಯ ಸರ್ಕಾರ ತೆಗೆದುಕೊಂಡಿರುವುದು ಜನವಿರೋಧಿ ನಿರ್ಧಾರ ಎಂದು ದೂರಿದರು.

ಸರ್ಕಾರದ ಈ ನಡೆಯನ್ನು ನಾವು ಖಂಡಿಸುತ್ತೇವೆ. ಒಂದು ಕೋಟಿ ಕಾರ್ಡ್ ಗಳಿಗೆ ಕೇಂದ್ರ ಸರ್ಕಾರವೇ ಅನುಕೂಲ ಮಾಡಿಕೊಟ್ಟಿದೆ, ಕೇವಲ 25 ಲಕ್ಷ ಜನರಿಗೆ ಮಾತ್ರ ರಾಜ್ಯ ಸರ್ಕಾರ ಅನುಕೂಲ ಮಾಡಿಕೊಡಬೇಕು ಈಗ ಅದನ್ನು ಕೈ ಬಿಟ್ಟು ಕೈ ತೊಳೆದುಕೊಳ್ಳಬೇಕೆಂದು ಈ ಕೆಟ್ಟ ಸರ್ಕಾರ ಹೊರಟಿದೆ ಎಂದು ದೂರಿದರು.

ಐಟಿ ನೆಪದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡುವುದು ಸರಿಯಲ್ಲ ಗ್ರಾಮಾಂತರ ಭಾಗದಲ್ಲಿ ಬಡವರೆ ಹೆಚ್ಚಾಗಿದ್ದಾರೆ, ಸಿದ್ದರಾಮಯ್ಯ ಅವರಿಗೆ ಬಡತನ ಗೊತ್ತಿಲ್ಲ, ತಂಪಾಗಿ ಖುಷಿಯಾಗಿ ಇದ್ದಾರೆ ಕೂಡಲೇ ಹಿಂದೆ ಪಡೆದಿರುವ ಬಿಪಿಎಲ್ ಕಾರ್ಡ್‌ಗಳನ್ನು ವಾಪಸ್ ಕೊಡಬೇಕು ಎಂದು ಆಗ್ರಹಿಸಿದರು.

ಮಾಜಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಕೆ ಗೋಪಾಲಯ್ಯ ಮಾತನಾಡಿ, ನಾನೇ ಖುದ್ದಾಗಿ ನೂರಾರು ಕಾಡುಗಳನ್ನು ಚೆಕ್ ಮಾಡಿದ್ದೇನೆ ಅರ್ಹರ ಕಾರ್ಡುಗಳನ್ನು ರದ್ದು ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

ನಾನು ಆಹಾರ ಸಚಿವನಾಗಿದ್ದಾಗ ಬಹಳಷ್ಟು ಜನರಿಗೆ ಒಳಿತು ಮಾಡಿದ್ದೆ ಪ್ರಧಾನಿ ನರೇಂದ್ರ ಮೋದಿಯವರು ನಾವು ಕೇಳಿದ ಅನುಕೂಲ ಕೊಟ್ಟರು,ಬರೀ ಆಧಾರ್ ಕಾರ್ಡ್ ಇರುವವರೆಗೂ ನಾವು ರೇಷನ್ ಕೊಟ್ಟೆವು. ಆದರೆ ಈ ಸರ್ಕಾರ ಬಿಪಿಎಲ್ ಕಾರ್ಡು ಗಳನ್ನು ರದ್ದು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಪ ಎಷ್ಟೊ ಬಡವರು ಐಟಿ ಕ್ಲಿಯರೆನ್ಸ್ ಗೋಸ್ಕರ ಬಿಪಿಎಲ್ ಕಾರ್ಡ್ಗಳನ್ನು ತೋರಿಸತ್ತಾರೆ. ಈ ಸರ್ಕಾರ ಅದನ್ನೇ ದೊಡ್ಡದು ಮಾಡಿ ರದ್ದು ಮಾಡಲು ಹೊರಟಿದೆ. ಇಂತಹ ಕೆಟ್ಟ ಸರ್ಕಾರವನ್ನು ನಾನು ನೋಡಿರಲಿಲ್ಲ. ಕೂಡಲೇ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಗೆ ಕನ್ವರ್ಟ್ ಮಾಡುತ್ತಿರುವುದನ್ನು ನಿಲ್ಲಿಸಬೇಕು ಇಲ್ಲದಿದ್ದರೆ ವಿಧಾನ ಸಭೆಯ ಒಳಗೆ ಹೊರಗೆ ಹೋರಾಟ ಮಾಡುತ್ತೇವೆ ಎಂದು ಗೋಪಾಲಯ್ಯ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನರೇಂದ್ರಬಾಬು ಬಿಜೆಪಿ ಮುಖಂಡರುಗಳಾದ ಜಯರಾಮಯ್ಯ,ಡಾಬಾ ಶ್ರೀನಿವಾಸ್. ವೆಂಕಟೇಶ್ ಮೂರ್ತಿ, ವೆಂಕಟೇಶ್ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button