ಪ್ರಗತಿವಾಹಿನಿ ಸುದ್ದಿ: ಇನ್ನೇನು ಬೆಲೆ ಇಳಿತು ಚಿನ್ನ ಖರೀದಿ ಮಾಡಬೇಕು ಎನ್ನುವರಿಗೆ ಮತ್ತೆ ಶಾಕ್ ಎದುರಾಗಿದೆ. ತಾಜಾ ಚಿನ್ನದ ಬೆಲೆ 10 ಗ್ರಾಂಗೆ 1,400 ರೂ.ಗೆ ಹೆಚ್ಚಳವಾಗಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ 79,300 ರೂ. ಆಗಿದೆ. 80 ಸಾವಿರ ರೂ. ಸನಿಹದಲ್ಲಿದೆ.
ಈ ಹಿಂದಿನ ಅವಧಿಯಲ್ಲಿ 99.9 ರಷ್ಟು ಶುದ್ಧತೆಯ ಚಿನ್ನ 10 ಗ್ರಾಂಗೆ 77,900 ರೂ. ಇತ್ತು. 99.5 ರಷ್ಟು ಶುದ್ಧತೆಯ ಚಿನ್ನದ ಬೆಲೆ ಬುಧವಾರದಂದು 10 ಗ್ರಾಂಗೆ 77,500 ರೂ. ಇತ್ತು. ಇಂದಿಗೆ ಹೋಲಿಸಿದರೆ 10 ಗ್ರಾಂಗೆ 1,400 ರೂ. ಹೆಚ್ಚಳವಾಗಿದೆ. ಈ ಮೂಲಕ ಬೆಲೆ 78,900 ರೂ.ಗೆ ತಲುಪಿದೆ.
ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಪರಮಾಣು ಅಪಾಯಗಳ ಬಗ್ಗೆ ಇದೀಗ ಹೊಸ ಕಾಳಜಿ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಸುರಕ್ಷಿತ ಪ್ರದೇಶದ ಬೇಡಿಕೆಯನ್ನು ಪುನರುಜ್ಜಿವನಗೊಳಿಸಿದ್ದರಿಂದ ಚಿನ್ನದ ಬೆಲೆಗಳು ಹೆಚ್ಚಾಗಿವೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸರಕು ಮತ್ತು ಕರೆನ್ಸಿಯ ವಿಪಿ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಹೇಳಿದ್ದಾರೆ.
ಇನ್ನು ಬೆಳ್ಳಿಯ ಬೆಲೆ ಗುರುವಾರ ಪ್ರತಿ ಕೆಜಿಗೆ 93,000 ರೂ. ಇದ್ದು, ಯಥಾಸ್ಥಿತಿಯಲ್ಲಿದೆ. ಡಿಸೆಂಬರ್ ವಿತರಣೆಗಾಗಿ ಬೆಳ್ಳಿಯ ಒಪ್ಪಂದಗಳು 318 ರೂ. ಅಥವಾ 0.35% ರಷ್ಟು ಏರಿಕೆಯಾಗಿದ್ದು, ಎಂಸಿಎಕ್ಸ್ ನಲ್ಲಿ ಪ್ರತಿ ಕೆಜಿಗೆ 90,407 ರೂ. ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ