*ನವೆಂಬರ್ 29, 2024 ರಂದು, ನವದೆಹಲಿಯಲ್ಲಿ ನಡೆದ ಸಭೆ*
ಪ್ರಗತಿವಾಹಿನಿ ಸುದ್ದಿ, ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನದ ಮಧ್ಯೆ ಸಿ.ಡಬ್ಲ್ಯೂ.ಸಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಇಲ್ಲಿವೆ:
ಮೋದಿಯವರಿಗೆ ಅತ್ಯಂತ ಆಪ್ತರು ಎನಿಸಿರುವ ವ್ಯಾಪಾರ ಸಂಸ್ಥೆಯ ವಿರುದ್ಧ ಇತ್ತೀಚೆಗೆ ಬಹಿರಂಗಗೊಂಡಿರುವ ಭ್ರಷ್ಟಾಚಾರದ ಆರೋಪಗಳು, ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ ಮತ್ತು ಮೇ 2023 ರಿಂದ ಒಮ್ಮೆಯೂ ಈ ರಾಜ್ಯಕ್ಕೆ ಭೇಟಿ ನೀಡದೆ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿರುವ ಪ್ರಧಾನಿಗಳು ಹಾಗೂ ಇತ್ತೀಚೆಗೆ ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೋಮು ಗಲಭೆಯನ್ನು ಉತ್ತೇಜಿಸುತ್ತಿರುವ ಬಿಜೆಪಿಯ ವ್ಯವಸ್ಥಿತ ಪ್ರಯತ್ನ ಈ ಮೂರು ರಾಷ್ಟ್ರೀಯ ವಿಷಯಗಳ ಬಗ್ಗೆ ತುರ್ತಾಗಿ ಚರ್ಚೆ ಕೈಗೊಳ್ಳಲು ಮೋದಿ ಸರ್ಕಾರದ ಹಠಮಾರಿ ನಿರಾಕರಣೆಯು ಚಳಿಗಾಲದ ಅಧಿವೇಶನವನ್ನು ವಿಫಲವಾಗಿಸಿದೆ.
1991ರ ‘ಪೂಜಾ ಸ್ಥಳ ( ವಿಶೇಷ ನಿಬಂಧನೆಗಳು) ಕಾಯ್ದೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ. ಈ ಕಾಯ್ದೆಯನ್ನು ಬಿಜೆಪಿ ನಿರ್ಲಜ್ಜವಾಗಿ ಉಲ್ಲಂಘನೆ ಮಾಡಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಲ್ಕು ವಿಧಾನ ಸಭಾ ಚುನಾವಣೆಗಳ ಫಲಿತಾಂಶದ ನಂತರ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಿ ಡಬ್ಲ್ಯೂ ಸಿ ಚರ್ಚೆ ನಡೆಸಿತು.
ಪ್ರಿಯಾಂಕ ಗಾಂಧಿ ವಾದ್ರಾ ಅವರು ವಯನಾಡು ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಮಾತ್ರವಲ್ಲದೆ ಸಾರ್ವಜನಿಕರಲ್ಲಿಯೂ ಉತ್ಸಾಹದ ಅಲೆಯನ್ನೇ ಎಬ್ಬಿಸಿದೆ.
ಜಿ.ಎಂ.ಎಂ, ಐ.ಎನ್.ಸಿ, ಮತ್ತು ಇತರ ಇಂಡಿಯಾ ಪಕ್ಷಗಳ ಪರವಾಗಿ ನಿರ್ಣಾಯಕ ಆದೇಶ ನೀಡಿರುವ ಜಾರ್ಖಂಡ್ ಜನತೆಗೆ ಸಿ ಡಬ್ಲ್ಯೂ ಸಿ ಧನ್ಯವಾದಗಳನ್ನು ಅರ್ಪಿಸುತ್ತದೆ. ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ , ಅಸ್ಸಾಂ ಮುಖ್ಯಮಂತ್ರಿ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬಿಜೆಪಿಯ ಅಪಾಯಕಾರಿ ವಿಭಜನೆ ಮತ್ತು ಧೃವೀಕರಣದ ಪ್ರಚಾರವನ್ನು ಅವರು ಘಂಟಾಘೋಷವಾಗಿ ತಿರಸ್ಕರಿಸಿದ್ದಾರೆ.
ಎನ್ .ಸಿ- ಐ ಎ ನ್ ಸಿ ಮೈತ್ರಿಯ ಮೇಲೆ ಸ್ಪಷ್ಟವಾಗಿ ನಂಬಿಕೆ ಇರಿಸಿದ್ದ ಜಮ್ಮು ಕಾಶ್ಮೀರದ ಜನತೆಗೆ ಸಿ ಡಬ್ಲ್ಯೂ ಸಿ ಧನ್ಯವಾದಗಳನ್ನು ಅರ್ಪಿಸುತ್ತದೆ. ನಮ್ಮ ಕಾರ್ಯನಿರ್ವಹಣೆ ಇನ್ನೂ ಉತ್ತಮವಾಗಬಹುದಿತ್ತು ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ನಮ್ಮ ಪಕ್ಷವು ಜಮ್ಮು ಮತ್ತು ಕಾಶ್ಮೀರವನ್ನು ಪೂರ್ಣಪ್ರಮಾಣದ ರಾಜ್ಯವನ್ನಾಗಿ ಪುನರ್ ಸ್ಥಾಪಿಸಲು ಒತ್ತಾಯಿಸುವುದನ್ನು ಮುಂದುವರೆಸಲಿದೆ.
ಹರಿಯಾಣದಲ್ಲಿ ಪಕ್ಷದ ಕಾರ್ಯನಿರ್ವಹಣೆ ಎಲ್ಲಾ ನಿರೀಕ್ಷೆಗಳಿಗೆ ವಿರುದ್ಧವಾಗಿತ್ತು ಎನ್ನುವುದನ್ನೂ ಸಿ ಡಬ್ಲ್ಯೂ ಸಿ ಸ್ವೀಕರಿಸುತ್ತದೆ. , ಐ ಎನ್ ಸಿ ರಾಜ್ಯದಲ್ಲಿ ಸರಳವಾಗಿ ಸರ್ಕಾರವನ್ನು ರಚಿಸಬಹುದಿತ್ತು ಆದರೆ ಅದು ಮಾಡಲಿಲ್ಲ. ರಾಜ್ಯದಲ್ಲಿ ಚುನಾವಣಾ ಅಕ್ರಮಗಳು ನಡೆದಿದ್ದು, ಫಲಿತಾಂಶದ ಮೇಲೆ ಪ್ರಭಾವ ಬೀರುವುದನ್ನು ಕಡೆಗಣಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಎಂ.ವಿ. ಎ ಮಿತ್ರಪಕ್ಷಗಳು ಹಾಗೂ ಪಕ್ಷದ ಕಾರ್ಯನಿರ್ವಹಣೆ ಆಘಾತಕಾರಿಯಾಗಿದೆ. ಚುನಾವಣಾ ಫಲಿತಾಂಶವು ಸಾಮಾನ್ಯ ಗ್ರಹಿಕೆಗೆ ಮೀರಿದ್ದು, ಕೈಚಳಕದ ಸ್ಪಷ್ಟ ಪ್ರಕರಣ ಇದಾಗಿದೆ.
ಕಾಂಗ್ರೆಸ್ ಅಧ್ಯಕ್ಷರು ವಿವರವಾದ ರಾಜ್ಯ ವಾರು ಪರಿಶೀಲನೆಯನ್ನು ಶೀಘ್ರವೇ ಪೂರ್ಣಗೊಳಿಸಿ ಅಗತ್ಯ ಕ್ರಮಗಳನ್ನು ಸಂಘಟನಾ ವಿಚಾರಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಲಿದ್ದಾರೆ ಎಂದು ನಂಬಿದ್ದೇವೆ. ಎಐಸಿಸಿ ಹಾಗೂ ರಾಜ್ಯಗಳ ಮಟ್ಟದಲ್ಲಿ ಈ ಕುರಿತು ತುರ್ತು ಗಮನಹರಿಸುವ ಅಗತ್ಯವಿದೆ.
ಈ ಘಟ್ಟದಲ್ಲಿ ಐಎ ನ್ ಸಿ ಯ ಎಲ್ಲಾ ಮಟ್ಟಗಳಲ್ಲಿಯೂ ಗರಿಷ್ಠ ಬಲವನ್ನು ತುಂಬಬೇಕು ಎಂದು ಸಿ ಡಬ್ಲ್ಯೂ ಸಿ ಕರೆ ನೀಡುತ್ತದೆ. ಗಾಬರಿಯಾಗುವ ಅಥವಾ ಎದೆಗುಂದಬೇಕಿಲ್ಲ. ಹೊಸ ನಿರ್ಣಯ ಮತ್ತು ನಿರ್ಧಾರದೊಂದಿಗೆ ಮುನ್ನುಗ್ಗಬೇಕಿದೆ. ಹಿಂದೆಂದಿಗಿಂತಲೂ ಈಗ ಒಗ್ಗಟ್ಟು ಮತ್ತು ಶಿಸ್ತು ನಮ್ಮಲ್ಲಿ ಬೇಕಿದೆ.
ಭಾರತ್ ಜೋಡೋ ಯಾತ್ರೆ, ಭಾರತ್ ಜೋಡೋ ನ್ಯಾಯ ಯಾತ್ರೆ ಮತ್ತು ಲೋಕಸಭಾ ಚುನಾವಣೆಯ ಪ್ರಚಾರ ಸಂದರ್ಭಗಳಲ್ಲಿ ಪಕ್ಷವು ತೆರೆದಿಟ್ಟ ವಿಷಯಗಳು ದೇಶದ ಜನಸಾಮಾನ್ಯರ ದಿನನಿತ್ಯದ ಸಮಸ್ಯೆಗಳಾಗಿವೆ. ಇದೇ ನಿರೂಪಣೆಯನ್ನು ನಾವು ಬಲಪಡಿಸಬೇಕಿದೆ. ಪೂರ್ಣ ಸಾಮಾಜಿಕ ನ್ಯಾಯಕ್ಕಾಗಿ ಜಾತಿಜನಗಣತಿ , ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮೇಲೆ ಶೇ 50% ಪರಿಮಿತಿಯ ತೆರವು, ರಾಜಕೀಯ ಸಹಾಯದ ಮೂಲಕ ಆರ್ಥಿಕತೆಯಲ್ಲಿ ಹೆಚ್ಚುತ್ತಿರುವ ಏಕಸ್ವಾಮ್ಯ, ಮುಂದುವರೆದ ಬೆಲೆಯೇರಿಕೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗವನ್ನು ನಿಯಂತ್ರಿಸಬೇಕಿದೆ.
ಅಂತಿಮವಾಗಿ, ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆಯನ್ನು ಸಂಪೂರ್ಣವಾಗಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಸಿ ಡಬ್ಲ್ಯೂ ಸಿ ನಂಬಿದೆ. ಚುನಾವಣಾ ಆಯೋಗದ ವಿಭಜನಾ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಬೇಕಾಗಿದೆ. ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಗಳು ಸಂವಿಧಾನಾತ್ಮಕವಾಗಿ ಪ್ರದತ್ತವಾಗಿರುವ ಆದೇಶ. ಹೆಚ್ಚುತ್ತಿರುವ ಸಮಾಜದ ವಿಭಾಗಗಳು ಹತಾಶರಾಗಿದ್ದಾರಲ್ಲದೇ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಜನಸಾಮಾನ್ಯರ ಈ ಸಮಸ್ಯೆಗಳನ್ನು ಕಾಂಗ್ರೆಸ್ ರಾಷ್ಟ್ರೀಯ ಚಳುವಳಿಯಾಗಿ ಕೈಗೆತ್ತಿಕೊಳ್ಳಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ