ಶಿರಸಂಗಿಯಲ್ಲಿ 24ನೇ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ರಾಜ್ಯ ಮಟ್ಟದ ಕಲಾ ಪ್ರದರ್ಶನ
ಪ್ರಗತಿವಾಹಿನಿ ಸುದ್ದಿ: ಸಂಸ್ಕೃತಿಕ ನೆಲೆಯಲ್ಲಿ ವಿಶ್ವಕರ್ಮರ ಕೋಡುಗೆ ಅಪಾರವಾಗಿದ್ದು ಧರ್ಮ-ಕರ್ಮ ಚಿಂತನೆಗಳ ಮೂಲಕ ವಿಶ್ವಕರ್ಮರು ಪ್ರಕೃತಿ ಆರಾಧಕರಾಗಿದ್ದಾರೆ ಎಂದು ನವಲಗುಂದದ ಅಜಾತ ನಾಗಲಿಂಗೇಶ್ವರ ಮಠದ ಪೂಜ್ಯರಾದ ವೀರೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಹಾಗೂ ವಿಶ್ವಕರ್ಮ ಪ್ರತಿಷ್ಠಾನ ಶಿರಸಂಗಿ ಇವರ ಸಹಯೋಗದಲ್ಲಿ ವೈಶ್ವಕರ್ಮಣರ ಶಕ್ತಿಪೀಠ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ನಡೆದ ೨೪ನೇ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ರಾಜ್ಯ ಮಟ್ಟದ ಕಲಾ ಪ್ರದರ್ಶನ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಮತ್ತು ಪ್ರತಿಷ್ಠಿತ ವಿಶ್ವಕರ್ಮ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿದ್ಯವಹಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಯೋಗಿ ವೇಮನರು ಹೇಳಿದಂತೆ ಜಗತ್ತು ಇಲ್ಲವೆಂದರೆ ನಾನೂ ಕೂಡಾ ಇಲ್ಲಾ, ಜಗತ್ತು ಇದೆ ಎಂದರೆ ವಿಶ್ವಕರ್ಮ ಇದ್ದಾನೆ ಎಂದು ಅರ್ಥ, ಅದರರಂತೆ ಕಲೆ ಸಂಸ್ಕೃತಿ ಬೆಳೆಯಬೇಕಾದರೆ ವಿಶ್ವಕರ್ಮರಿಗೆ ಸಮಾನತೆ ಕೋಡುವುದು ಅನಿವಾರ್ಯ ಎಂದು ಅಂದಿನ ಪ್ರದಾನಿ ಜವಾಹರಲಾಲ್ ನೆಹರು ಅಭಿಪ್ರಾಯಪಟ್ಟಿದ್ದರು, ಸಾಧಕರು ಸಮಾಜದ ಶಿಖರವಿದ್ದಂತೆ, ವಿದ್ಯಾರ್ಥಿಗಳಿಗೆ ಸಾಧಕರೆ ಆದರ್ಶವಾಗಿದ್ದು ತಮ್ಮ ಶೈಕ್ಷಣಿಕ ಸಮಯದಲ್ಲಿ ಶ್ರಮಪಟ್ಟು ಅಧ್ಯಯನ ಮಾಡಿ ಬಾವಿ ಸಮಾಜದ ಸ್ವತ್ತುಗಳಾಗಬೇಕು, ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಕ್ಷೇತ್ರ ಸಂರಕ್ಷಣೆ ಹಾಗೂ ಬೇಳವಣಿಗೆಯ ಜೋತಗೆ ಸಮಾಜದ ಬೇಳವಣಿಗೆಗೂ ಶ್ರಮ ಪಡುತ್ತಿದ್ದೆ, ಸಮಾಜದಲ್ಲಿ ಸಾಧಕರನ್ನು ಗುರುತಿಸಿ ಅವರಿಗೆ ಸಂಸ್ಥೆಯಿಂದ ಅತ್ಯುನತ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಅದರಂತೆ ಅತ್ಯುತ್ತಮ ಅಂಕ ಪಡೆದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಸನ್ಮಾನಿಸಿ ಪ್ರೋತ್ಸಾಹಿಸುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ರಾಜ್ಯಮಟ್ಟದ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಗದಗ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಕಲೆ ವಿಶ್ವಕರ್ಮರ ಅಸ್ಮೀತೆಯ ಸಂಕೇತವಾಗಿದೆ, ಶಿಲ್ಪಕಲೆ.ಕಾಷ್ಟಶಿಲ್ಪ,ಲೋಹಶಿಲ್ಪ, ಚಿತ್ರಕಲೆ,ಕಂಚು ಶಿಲ್ಪ, ಛಾಯಾಚಿತ್ರ ಕಲೆಗಳ ಪ್ರದರ್ಶನವನ್ನು ಆಯೋಜಿಸುತ್ತಿರುವುದು ಸಮಾಜದಲ್ಲಿ ಸಾಧಕರಿಗೆ ಇದು ಸೇತುವೆ ಆಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ದಾರವಾಡದ ವಿಶ್ರಾಂತ ಜಿಲ್ಲಾ ಪೋಲೀಸ್ ಅಧೀಕ್ಷರಾದ ಎ.ಆರ್.ಬಡಿಗೇರ ಹಾಗೂ ಗದಗ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಹೇಶ ಪೋತದಾರ ಮಾತನಾಡಿ ಸಾಂಸ್ಕೃತಿಕವಾಗಿ ದೇಶ ಶ್ರೀಮಂತಗೊಳ್ಳಲು ವಿಶ್ವಜರ್ಮ ಸಮಾಜದ ಕೋಡುಗೆ ಅನನ್ಯ ಎಂದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಪ್ರೋ ಪಿ.ಬಿ.ಬಡಿಗೇರ ಪ್ರಸಾವಿಕವಾಗಗಿ ಮಾತನಾಡಿ ವಿಶ್ವಕರ್ಮ ವಿಕಾಸ ಸಂಸ್ಥೆಯು ದೇವಿಯ ಕ್ಷೇತ್ರದ ಬೇಳವಣಿಗೆ ಹಾಗೂ ಸಂರಕ್ಷಣೆಯೊಂದಿಗೆ ಸಮಾಜದ ಸಾಧಕರನ್ನು, ಪ್ರತೀಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾಜ ಬೇಳವಣಿಗೆಯಲ್ಲಿ ತನ್ನದೆ ಪಾತ್ರ ನಿರ್ವಹಿಸುತ್ತಿದ್ದು, ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ದೃಷ್ಟಿಯಿಂದ ವಿಕಾಸ ಸಂಸ್ಥೆಯಿಂದ ಅನೇಕ ಯೋಜನೆಗಳನ್ನು ಹಾಕಿಕೋಂಡಿದ್ದು, ಐಎಎಸ್,ಕೆಎಎಸ ಓದುವ ವಿದ್ಯಾರ್ಥಿಗಳಿಗಾಗಿ ಸಂಘ ಸಂಸ್ಥೆಗಳಿಂದ ಎಲ್ಲ ರೀತಿಯ ಸಹಾಯ ಹಸ್ತ ನೀಡಲಾಗುವುದು ಎಂದರು,
ವೇದಿಕೆ ಮೇಲೆ ಲೋಹ ಶಿಲ್ಪಿಗಳಾದ ಸುರೇಶ ಸೋನಾರ, ಬಲಪು ಜಾನಕಿರಾಮ, ಶಿಲ್ಪಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಪ್ರೋ ಪಿ.ಬಿ.ಬಡಿಗೇರ ಪ್ರಸಾವಿಕವಾಗಗಿ ಮಾತನಾಡಿ ವಿಶ್ವಕರ್ಮ ವಿಕಾಸ ಸಂಸ್ಥೆಯು ದೇವಿಯ ಕ್ಷೇತ್ರದ ಬೇಳವಣಿಗೆ ಹಾಗೂ ಸಂರಕ್ಷಣೆಯೊAದಿಗೆ ಸಮಾಜದ ಸಾಧಕರನ್ನು, ಪ್ರತೀಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾಜ ಬೇಳವಣಿಗೆಯಲ್ಲಿ ತನ್ನದೆ ಪಾತ್ರ ನಿರ್ವಹಿಸುತ್ತಿದ್ದು, ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ದೃಷ್ಟಿಯಿಂದ ವಿಕಾಸ ಸಂಸ್ಥೆಯಿಂದ ಅನೇಕ ಯೋಜನೆಗಳನ್ನು ಹಾಕಿಕೋಂಡಿದ್ದು, ಐಎಎಸ್,ಕೆಎಎಸ ಓದುವ ವಿದ್ಯಾರ್ಥಿಗಳಿಗಾಗಿ ಸಂಘ ಸಂಸ್ಥೆಗಳಿಂದ ಎಲ್ಲ ರೀತಿಯ ಸಹಾಯ ಹಸ್ತ ನೀಡಲಾಗುವುದು ಎಂದರು.
ಪ್ರಶಸ್ತಿ ಪ್ರಧಾನ:
ಪ್ರತಿಷ್ಠಿತ ಪ್ರಶಸ್ತಿಯಾದ ವಿಶ್ವಶಿಲ್ಪಿ ಡಂಕಣಾಚಾರ್ಯ ಪಶಸ್ತಿಯನ್ನು ಈ ಬಾರಿ ಮೈಸೂರಿನ ಶಿಲ್ಪಿ ಶ್ರೀಕಾಂತ ಆಚಾರ್ಯ ಅವರಿಗೆ ನೀಡಿ ಗೌರವಿಸಲಾಯಿತು, ಬೆಂಗಳೂರಿ ಬಾಬುಜತ್ತಕರ ಅವರಿಗೆ ವಿಶ್ವಕರ್ಮ ಚಿತ್ರಕಲಾ ಭೂಷಣ ಪ್ರಶಸ್ತಿ, ಕೊಪ್ಪಳದ ರುದ್ರಪ್ಪ ಬಡಿಗೇರ ಇವರಿಗೆ ವಿಶ್ವಕರ್ಮ ಸಮಾಜ ಸಂಘಟನಾ ಭೂಷಣ ಪ್ರಶಸ್ತಿ, ಹೊಳೆ ಆಲೂರಿನ ಎ.ಎನ್,ಬಡಿಗೇರ ಇವರಿಗೆ ವಿಶ್ವಕರ್ಮ ಶಿಕ್ಷಣ ಭೂಷಣ ಪ್ರಶಸ್ತಿ, ಕಲಬುರ್ಗಿಯ ಗಾಯತ್ರಿ ಶಿಲ್ಪಿ ಇವರಿಗೆ ವಿಶ್ವಕರ್ಮ ಶಿಲ್ಪಕಲಾ ಭೂಷಣ ಪ್ರಶಸ್ತಿ, ಜಮಖಂಡಿಯ ಡಾ,ವಿದ್ಯಾಧರ ಪತ್ತಾರ ಇವರಿಗೆ ವಿಶ್ವಕರ್ಮ ವೈದ್ಯ ಭೂಷಣ ಪ್ರಶಸ್ತಿ, ಹುಬ್ಬಳ್ಳಿಯ ಸಿ.ಪಿ.ಮಾಯಾಚಾರ ಅವರಿಗೆ ವಿಶ್ವಕರ್ಮ ಸಮಾಜ ಸಾಹಿತ್ಯ ಭೂಷಣ ಪ್ರಶಸ್ತಿ, ಹಳಿಯಾದ ದೇವೇಂದ್ರಪ್ಪ ರಥಕರ ಇವರಿಗೆ ವಿಶ್ವಕರ್ಮ ಕಾಷ್ಠಶಿಲ್ಪ ಕಲಾ ಭೂಷಣ ಪ್ರಶಸ್ತಿ, ಬೋರಗಿಯ ಬಸವರಾಜ ಬಡಿಗೇರ ಅವರಿಗೆ ವಿಶ್ವಕರ್ಮ ಧರ್ಮ ಸಂಸ್ಕೃತಿ ಭೂಷಣ ಪ್ರಸಸ್ತಿ, ದಾವಣಗೇರೆಯ ಬಿ,ನಾಗೇಂದ್ರ ಬಸಾಪುರ ಅವರಿಗೆ ವಿಶ್ವಕರ್ಮ ಸಮಾಜ ಸೇವಾ ಭೂಷಣ ಪ್ರಶಸ್ತಿ, ಬೆಳಗಾವಿ ಗಜಾನನ ಸಾಬಣ್ಣವರ ಇವರಿಗೆ ವಿಶ್ವಕರ್ಮ ಕೌಶಲ್ಯ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮಕ್ಕೂ ಮುಂಚೆ ಬೆಳಿಗ್ಗೆ ೮ ಗಂಟೆಗೆ ವಿಶ್ವಕರ್ಮ ಧ್ವಜಾರೋಹಣ, ಶ್ರೀ ಕಾಳಿಕಾದೇವಿ ಅಭಿಷೇಕ ಹಾಗೂ ಪೂಜಾ ಕಾಣಿಕೆಗಳ ಅರ್ಪಣೆ ಮಾಡಲಾಯಿತು, ನಂತರ ರಾಜ್ಯಮಟ್ಟದ ಕಲಾ ಪ್ರದರ್ಶನ ಉದ್ಘಾಟಿಸಲಾಯಿತು,ಮದ್ಯಾಹ್ನ ಮಹಾಪ್ರಸಾದದಲ್ಲಿ ಸಾವಿರಾರು ಜನ ಭಾಗವಿಸಿದ್ದರು, ಸಂಜೆ ಪೂರ್ಣ ಕುಂಭ, ವಾಧ್ಯ ಮೇಳಗಳೊಂದಿಗೆ ವಿಶ್ವಕರ್ಮ ಫ್ರಭುವಿನ ಪಂಚಲೋಹದ ಬೃಹತ ಮೂರ್ತಿಯ ಮೆರವಣಿಗೆ ಅದ್ದೂರಿಯಾಗಿ ಜರುಗಿತು, ಕಾರ್ತಿಕಮಾಸದ ನಿಮಿತ್ಯ ರಾತ್ರಿ ದೀಪೋತ್ಸವದಲ್ಲಿ ಭಕ್ತಾಧಿಗಳು ಭಕ್ತಿಬಾವದಿಂದ ದೀಪ ಬೇಳಗಿಸಿ ಸಂಭ್ರಮ ಪಟ್ಟರು, ನಂತರ ಸಿಡಿಮದ್ದು ಪ್ರದರ್ಶನ ಹಾಗೂ ಪ್ರತಿಭಾವಂತರ ವಿವಿಧ ಕಲಾವಿದರಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ