Belagavi NewsBelgaum NewsLatest
*ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಗಳ ಐಷಾರಾಮಿ ಜೀವನ; ನಶೆಯೇರಿಸಿಕೊಂಡು ಇಸ್ಪೀಟ್ ಆಡುತ್ತಿರುವ ಆರೋಪಿಗಳು*
ಪ್ರಗತಿವಾಹಿನಿ ಸುದ್ದಿ: ರಾಜ್ಯದ ಒಂದೊಂದೇ ಜೈಲಿನ ಕೈದಿಗಳ ಐಷಾರಾಮಿ ಜೀವನ ಅನಾವರಣಗೊಳ್ಳುತ್ತಿದೆ. ಕಲಬುರಗಿ ಬಳಿಕ ಇದೀಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳು ಆರಾಮವಾಗಿ ಕಾಲ ಕಳೆಯುತ್ತಿರುವ ಆರೋಪಗಳು ಕೇಳಿ ಬಂದಿವೆ.
ಹಣ ನೀಡಿದರೆ ಕೈದಿಗಳಿಗೆ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಕೈದಿಗಳು ಜೈಲಿನಲ್ಲಿಯೇ ಆಂಡ್ರಾಯ್ಡ್ ಮೊಬೈಲ್, ಹಣ ಇಟ್ಟು ಇಸ್ಪೀಟ್ ಆಡುವುದು ಮಾಡುತ್ತಿದ್ದಾರೆ. ಗಾಂಜಾ, ಬೀಡಿ, ಸಿಗರೇಟ್, ಬೀಯರ್ ಹೀಗೆ ಎಲ್ಲವನ್ನೂ ಹೊರಗಡೆಯಿಂದ ತರಿಸಿಕೊಂಡು ರಾಜರೋಷವಾಗಿ ಕಾಲಕಳೆಯುತ್ತಿದ್ದಾರೆ.
ಕೈದಿ ಸುರೇಶ್ ಎಂಬಾತ ಇಸ್ಪೀಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ. ಶಾಹಿದ್ ಖುರೇಶಿ, ಆನಂದ್ ನಾಯಕ್ ಸೇರಿ ಸುರೇಶ್ ಜೊತೆ ಇಸ್ಪೀಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕೈದಿಗಳಿಗೆ ಜೈಲಿನಲ್ಲಿ ಈ ಎಲ್ಲಾ ವ್ಯವಸ್ಥೆಗಳು ಸಿಗುತ್ತಿರುವುದಾದರೂ ಹೇಗೆ? ಎಂಬ ಪ್ರಶ್ನೆ ಮೂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ