Belagavi NewsBelgaum NewsKannada NewsKarnataka NewsLatest

*ಬೆಳಗಾವಿ ಅಧಿವೇಶನ: 3 ಮಹತ್ವದ ಪ್ರಕಟಣೆಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯಲ್ಲಿ ವಿಧಾನ ಮಂಡಳದ ಅಧಿವೇಶನ ಸೋಮವಾರ ಬೆಳಗ್ಗೆಯಿಂದ ಆರಂಭವಾಗಿದೆ. 2 ವಾರ ಅಧಿವೇಶನದ ಕಲಾಪಗಳು ನಡೆಯಲಿವೆ. ಮೊದಲ ದಿನದ ಅಧಿವೇಶನದ ವೇಳೆ ನಡೆದ ಬಿಸಿನೆಸ್ ಅಡ್ವೈಸರಿ ಸಮಿತಿ ಸಭೆಯಲ್ಲಿ 3 ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.

ಅಧಿವೇಶನವನ್ನು ಒಂದು ದಿನ ಮೊದಲೇ ಮುಕ್ತಾಯಗೊಳಿಸಲಾಗುವುದು ಎಂದು ಅವರು ತಿಳಿಸಿದರು. ಡಿಸೆಂಬರ್ 20ರ ಬದಲು 19ರಂದೇ ಕಲಾಪ ಮುಕ್ತಾಯವಾಗಲಿದೆ. 20ರಿಂದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದರಿಂದ 19ರ ವರೆಗೆ ಮಾತ್ರ ಕಲಾಪ ನಡೆಸಲಾಗುವುದು ಎಂದು ಖಾದರ್ ತಿಳಿಸಿದರು.

ಕಲಾಪವನ್ನು ನಾಳೆಯಿಂದ ನಿತ್ಯವೂ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಡೆಸಲಾಗುವುದು ಎಲ್ಲರೂ 9.30ಕ್ಕೆ ಸದನದಲ್ಲಿ ಹಾಜರಿರಬೇಕು ಎಂದು ಖಾದರ್ ವಿನಂತಿಸಿದರು.

ಜೊತೆಗೆ, ಡಿ.16ರಿಂದ 3 ದಿನ ಉತ್ತರ ಕರ್ನಾಟಕದ ವಿಷಯಗಳನ್ನು ಚರ್ಚಿಸಲಾಗುವುದು ಎಂದೂ ಅವರು ತಿಳಿಸಿದರು. ಸೋಮವಾರ ಮಂಗಳವಾರ ಮತ್ತು ಬುಧವಾರ ಉತ್ತರ ಕರ್ನಾಟಕದ ವಿಷಯಗಳ ಚರ್ಚೆ ನಡೆಯಲಿದೆ.

ಅಧಿವೇಶನವನ್ನು ಕನ್ನಡ ಸಾಹಿತ್ಯ ಸಮ್ಮೇಳನ ಮುಂಗಿದ ನಂತರ ಮತ್ತೆ 3 -4 ದಿನ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಕೋರಿದರು. ಉತ್ತರ ಕರ್ನಾಟಕದ ವಿಷಯಗಳನ್ನು ಈ ವಾರವೇ ಚರ್ಚೆಗೆ ಎತ್ತಿಕೊಳ್ಳಬೇಕೆಂದು ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button