Belagavi NewsBelgaum NewsKannada NewsKarnataka NewsNationalPolitics

*ಲಾಠಿ ಚಾರ್ಜ್ ಮಾಡಿದ್ದಕ್ಕೆ ಪಂಚಮಸಾಲಿ ಶ್ರೀ ಹೇಳಿದ್ದೇನು?*

ನಮಗೆ ಯಾರು ನ್ಯಾಯ ಒದಗಿಸುತ್ತಾರೆ ಆ ಸರ್ಕಾರ ತರುತ್ತೇವೆ ; ಈ ಸರ್ಕಾರ ನಮ್ಮ ಮೇಲೆ ಗೋಲಿಬಾರ್ ಮಾಡಲೂ ಹೇಸುವುದಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿಎಂ ಸಿದ್ದರಾಮಯ್ಯ ಬಂದು ನಮ್ಮ ಮನವಿ ಸ್ಪಂದಿಸಬೇಕೆಂದು ನಾವು ಸಿಎಂಗೆ ಕರೆ ನೀಡಿದ್ದಿವಿ. ಆದರೆ ಸಿಎಂ ನಮಗೆ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕಲು ಮುಂದಾದೆವು ಎಂದು ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆದ ವಿಚಾರವಾಗಿ ಜಯಮೃತುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.‌

ಚನ್ನಮ್ಮ ವೃತ್ತದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮದು ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು, ಸಿಎಂ ವೇದಿಕೆಗೆ ಬಂದು ಸ್ಪಷ್ಟವಾಗಿ ಭರವಸೆ ನೀಡಿ ಅಂತಾ ಹೇಳಿದಿವಿ, ಆದರೆ ಸಿಎಂ ಬಾರದೆ ಸರ್ಕಾರದ ಪರವಾಗಿ 3 ಸಚಿವರನ್ನು ಕಳುಹಿಸಿದ್ದರು. ಸಿಎಂ ಬರುವರೆಗೂ ನಾವೂ ಬಿಡಲ್ಲ ಎಂದು ಹೋರಾಟಗಾರರು‌ ಹೇಳಿದರು. ಹೀಗಾಗಿ ಸಿಎಂ ಇರುವ ಸ್ಥಳಕ್ಕೆ‌ ಹೋಗಲು ಯತ್ನಿಸಿದ್ದೇವೆ ಎಂದರು.

ನಮ್ಮ ಟ್ರ್ಯಾಕ್ಟರ್ ಹಾಗೂ ಹೋರಾಟಕ್ಕೆ ಬರುವ ಹೋರಾಟಗಾರರನ್ನು ತಡೆದು ನಿರ್ಬಂಧ ಹೇರಿದರು. ನಮ್ಮ ಹೋರಾಟದಿಂದ ಸಿಎಂ ಹತಾಷರಾಗಿದ್ದಾರೆ. ಸಿಎಂ ಹಾಗೂ ಪೊಲೀಸರು ಪ್ರೀ ಪ್ಲ್ಯಾನ್ ಮಾಡಿ ಲಾಠಿ ಚಾರ್ಜ್ ಮಾಡಿಸಿದ್ದಾರೆ‌. ಲಿಂಗಾಯತರ ಮೇಲೆ ಯಾವ ಸರ್ಕಾರ ಕೂಡಾ ಹಲ್ಲೆ ಮಾಡಿಲ್ಲ. ಈ ಸರ್ಕಾರ ನಮ್ಮ ಮೇಲೆ ಹಲ್ಲೆ ಮಾಡಿದೆ. ಈ ಸರ್ಕಾರ ನಮ್ಮ ಮೇಲೆ ಗೋಲಿಬಾರ್ ಮಾಡಲೂ ಹೇಸುವುದಿಲ್ಲ. ನಿಮ್ಮ ಸರ್ಕಾರದಿಂದ ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ಹೇಳಿ, ಇಲ್ಲವಾದರೆ ನಮಗೆ ಯಾರು ನ್ಯಾಯ ಒದಗಿಸುತ್ತಾರೆ ಆ ಸರ್ಕಾರ ತರುತ್ತೇವೆ ಎಂದು ಆಕ್ರೋಶ ಹೊರ ಹಾಕಿದರು.‌

ಇದೆ 12 ನೇ ತಾರೀಖಿನಂದು ಪ್ರತಿ ಗ್ರಾಮದ ರಸ್ತೆ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button