ಪ್ರಗತಿವಾಹಿನಿ ಸುದ್ದಿ: ಗಲಾಟೆ ಪ್ರಕರಣದ ವರದಿಗೆ ತೆರಳಿದ್ದ ವರದಿಗಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಮೋಹನ್ ಬಾಬು ಪತ್ರಕರ್ತರ ಕ್ಷಮೆಯಾಚಿಸಿದ್ದಾರೆ,
ಮೋಹನ್ ಬಾಬು ಹಗೂ ಅವ್ರಾ ಕಿರಿಯ ಪುತ್ರನ ನಡುವಿನ ಗಲಾಟೆ ಪ್ರಕರಣದ ಬಗ್ಗೆ ವರದಿಗೆ ತೆರಳಿದ್ದ ಖಾಸಗಿ ಸುದ್ದಿವಾಹಿನಿ ವರದಿಗಾರ ರಂಜಿತ್ ಎಂಬುವವರ ಮೇಲೆ ನಟ ಮೋಹನ್ ಬಾಬು ಹಾಗೂ ಅವರ ಹಿರಿಯ ಪುತ್ರ ವಿಷ್ಣು ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ವರದಿಗಾರ ಗಂಭೀರವಾಗಿ ಗಾಯಗೊಂಡಿದ್ದರು.
ವರದಿಗಾರರನ ದೂರು ಹಿನ್ನೆಲೆಯಲ್ಲಿ ನಟ ಮೋಹನ್ ಬಾಬು ವಿರುದ್ಧ ಪ್ರಕರನ ದಾಖಲಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಮೋಹನ್ ಬಾಬು ಕ್ಷಮೆ ಕೋರಿದ್ದಾರೆ.
ನಮ್ಮ ಕುಟುಂಬಕ್ಕೆ ಸಂಬಂಧಿಸಿದ ಘಟನೆ ಇಷ್ಟು ದೊಡ್ಡ ವಿಷಯವಾಗಿ ಪತ್ರಕರ್ತರನ್ನು ಸಂಕಷ್ಟಕ್ಕೆ ದೂಡಿದ್ದಕ್ಕೆ ನನಗೆ ವಿಷಾದವಿದೆ. ಘಟನೆಯ ಬಳಿಕ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದ ಕಾರಣ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಾಗಿಲ್ಲ. ಅಂದು ನಡೆದ ಘಟನೆಯಲ್ಲಿ ಪತ್ರಕರ್ತರೊಬ್ಬರು ಗಾಯಗೊಂಡಿರುವುದು ಬೇಸರದ ಸಂಗತಿ. ನಾನು ಅವರ ಕುಟುಂಬಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮೋಹನ್ ಬಾಬು ಬರೆದುಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ