ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಮೂಡಲಗಿ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಕಂಕಣವಾಡಿ ಪೂಜಾ ಸುರೇಶ ಎಂಬ ಗರ್ಭಿಣಿ ಮಹಿಳೆಗೆ ತ್ರಿವಳಿ ಮಕ್ಕಳ ಜನನವಾಗಿದೆ. ಎರಡು ಗಂಡು ಒಂದು ಹೆಣ್ಣು ಮಗು ಜನಿಸಿದ್ದು , ಮೂರು ನವಜಾತ ಶಿಶುಗಳೂ ಆರೋಗ್ಯವಾಗಿದ್ದಾರೆ .
ಸ್ತ್ರೀರೋಗ ತಜ್ಞೆ ಡಾ : ಮಯೂರಿ ಕಡಾಡಿ ಸಿಸೇರಿಯನ್ ಮೂಲಕ ಹೇರಿಗೆ ಮಾಡಿಸಿದರು . ಈ ತರಹ ತ್ರಿವಳಿ ಹೆರಿಗೆ ಆಗುವುದು ಅಪರೂಪವಾಗಿದೆ . ಅದರಲ್ಲಿ ಮೂರು ನವಜಾತ ಶಿಶುಗಳೂ ಆರೋಗ್ಯ ಪೂರ್ಣವಾಗಿವೆ ಮತ್ತು ತಾಯಿಯೂ ಆರೋಗ್ಯವಾಗಿದ್ದಾರೆ. ಗುರುವಾರ ಆಸ್ಪತ್ರೆಯಿಂದ ಮನೆಗೆ ಕಳಿಸಿದ್ದೇವೆ ಎಂದು ಡಾ: ಮಯೂರಿ ಮತ್ತು ಚಿಕ್ಕಮಕ್ಕಳ ತಜ್ಞ ಡಾ: ಮಹಾಂತೇಶ ತಿಳಿಸಿದ್ದಾರೆ.
ಈ ವೇಳೆ ಡಾ : ವಿಜಯ ಬೆನಕಟ್ಟಿ, ಡಾ : ಬಸವರಾಜ ಹೊನ್ನ, ಡಾ: ಪ್ರಜ್ವಲ್ , ಡಾ: ಪ್ರತಿಮಾ ಗಿಣಿಮೂಗಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ